ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ, ಪುತ್ತೂರು ಇಲ್ಲಿ ಮೇ ತಿಂಗಳಲ್ಲಿ ಜರುಗಿದ ಇಂಗ್ಲಿಷ್ ಸಂವಹನಾ ತರಗತಿಗಳ ಸಮಾರೋಪ ಕಾರ್ಯಕ್ರಮ ಶ್ರೀ ರಾಮಚಂದ್ರ ಭಟ್ ಉಪನ್ಯಾಸಕರು – ಸರಕಾರಿ ಪದವಿ ಪೂರ್ವ ಕಾಲೇಜು ಕೊಂಬೆಟ್ಟು ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಇಂಗ್ಲಿಷ್ ವಾರ್ತಾ ಪತ್ರಿಕೆ ಓದುವಿಕೆ, ಉಚ್ಚಾರ, ವ್ಯಾಕರಣ, ಭಾಷಾ ತರ್ಜುಮೆ, ಮಾದರಿ ಪಠ್ಯ ಬೋಧನೆ ಮುಂತಾದವುಗಳ ಪ್ರಯೋಜನ ಪಡೆದ ವಿದ್ಯಾರ್ಥಿಗಳು ತಮ್ಮ ತರಬೇತಿಯ ಅನುಭವವನ್ನು ಹಂಚಿಕೊಂಡರು. ವಿದ್ಯಾರ್ಥಿನಿಯರಾದ ಕು.ಶ್ರೀಲಕ್ಷ್ಮೀ ಮತ್ತು ಕು.ದಿವ್ಯಜ್ಯೋತಿ ಇವರು ಕಾವ್ಯಗುಚ್ಛ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮವನ್ನು ಪ್ರಣವ ಬೆಳ್ಳಾರೆ ಮತ್ತು ತಂಡ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ಧನ್ಯವಾದವಿತ್ತರು.

