ಗಾನ- ನೃತ್ಯ- ಯಕ್ಷ ಸಂಭ್ರಮ -2014

ಶಾಲಾ ದಿನಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಸಂಗೀತ, ಭರತನಾಟ್ಯ, ಯಕ್ಷಗಾನ ತರಗತಿಗಳಿಗೊಂದು ವಾರ್ಷಿಕ ವೇದಿಕೆಯೇ ಗಾನ – ನೃತ್ಯ ಯಕ್ಷ ಸಂಭ್ರಮ. ಸುಮಾರು 200 ರಷ್ಟು ಮಕ್ಕಳು ಈ ತರಗತಿಗಳ ಉಪಯೋಗ ಪಡೆಯುತ್ತಿದ್ದು ಪ್ರತಿವರ್ಷ ನಡೆಯುತ್ತಿರುವ ಗಾನ – ನೃತ್ಯ – ಯಕ್ಷ ಸಂಭ್ರಮದ ಪ್ರಸ್ತುತ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಸಾಕ್ಷಿಯಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿದುಷಿ ಸೌಮ್ಯ ಸುದೀಂದ್ರ ರಾವ್, ದೀಪ ಬೆಳಗಿಸಿ ಪ್ರಾರ್ಥಿಸಿದ ಶಾಲೆಯ ಹಿರಿಯ ವಿದ್ಯಾರ್ಥಿನಿ ಕು.ಅದಿತಿ.ಕೆ.ಟಿ. ಹಾಗೂ ಸಭಾಧ್ಯಕ್ಷರಾಗಿ ಅಧ್ಯಕ್ಷೀಯ ಮಾತುಗಳನ್ನಾಡಿದ ಯಕ್ಷಗಾನ ಕಲಾವಿದ ಶ್ರೀ ಸರಪಾಡಿ ಅಶೋಕ್ ಶೆಟ್ಟಿ ಇವರು.

DSC_2132

DSC_2118

DSC_2526

DSC_2693

DSC_2177

DSC_2204

ಜಿಲ್ಲೆಯಲ್ಲೇ ಇಂತಹ ಅಪೂರ್ವ ಕಾರ್ಯಕ್ರಮ ಈ ಶಾಲೆಯ ಮೂಲಕ ನಡೆಯುತ್ತಿದ್ದು ಇದರಲ್ಲಿ ತೊಡಗಿಸಿಕೊಂಡಿರುವ ಮಕ್ಕಳು, ಪೋಷಕರು, ಶಿಕ್ಷಕರು ಹಾಗೂ ಆಡಳಿತ ಮಂಡಳಿ ವಂದನೀಯರು. ಇಲ್ಲಿಯ ಕನ್ನಡ ಪ್ರೀತಿ ಹಾಗೂ ಸಂಸ್ಕೃತಿ ಖುಷಿ ತಂದಿದೆ ಎಂದವರು ಮುಖ್ಯ ಅತಿಥಿಗಳು. ಸುಮಾರು ಹನ್ನೇರಡು ವರ್ಷ ಗಳಿಂದ ನಿರಂತರವಾಗಿ ಈ ಕಲಾಪ್ರಕಾರಗಳ ಬೆಳವಣಿಗೆ ನಡೆಯುತ್ತಿದ್ದು ಮಕ್ಕಳ ಆಂತರಿಕ ವಿಕಾಸಕ್ಕೆ ಸಾಕ್ಷಿಯಾಗಿದೆ ಎಂದವರು ಸಭಾಧ್ಯಕ್ಷರು.

ನೃತ್ಯ ಗುರುಗಳಾದ ವಿದ್ವಾನ್ ದೀಪಕ್ ಕುಮಾರ್, ಗಿರೀಶ್, ವಿದುಷಿ ಪ್ರೀತಿಕಲಾ, ಯಕ್ಷಗಾನ ಗುರುಗಳಾದ ಶ್ರೀ ರಮೇಶ್ ಶೆಟ್ಟಿ ಬಾಯಾರು ಹಾಗೂ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ.ಕೃಷ್ಣ ಭಟ್ ಕೊಂಕೋಡಿ, ಶಾಲಾ ಮುಖ್ಯೋಪಾಧ್ಯಾಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭಾಕಾರ್ಯಕ್ರಮದ ಅನಂತರ ಲಘು ಶಾಸ್ತ್ರೀಯ ನೃತ್ಯ ಹಾಗು ಭರತನಾಟ್ಯ ಮತ್ತು ಮಹಿಷಮರ್ಧಿನಿ ಯಕ್ಷಗಾನ ಪ್ರದರ್ಶನ ನಡೆಯಿತು.

Highslide for Wordpress Plugin