ರಥಸಪ್ತಮಿ ಆಚರಣೆಯು ಅತ್ಯಂತ ಅರ್ಥಪೂರ್ಣವಾಗಿದೆ- ಶ್ರೀಮತಿ ಪೂರ್ಣಿಮಾ

’ಜಗತ್ತಿನ ಎಲ್ಲಾ ಜೀವಿರಾಶಿಗೂ ಶಕ್ತಿಯ ಪ್ರಧಾನ ಮೂಲ ಸೂರ್ಯ. ಉತ್ತರಾಯಣದಲ್ಲಿ ಬರುವ ಮಾಘ ಶುದ್ಧ ಸಪ್ತಮಿಯಂದು ಆಚರಿಸುವ ರಥ ಸಪ್ತಮಿ ಹಬ್ಬವು ಅತ್ಯಂತ ಅರ್ಥಪೂರ್ಣವಾಗಿದೆ. ಮಹಾವಿಷ್ಣುವೇ ಸೂರ್ಯನಾರಾಯಣನೆಂದು ಪ್ರಾಚೀನ ಕಾಲದಿಂದಲೂ ಭಕ್ತಿಯಿಂದ ಆರಾಧಿಸುತ್ತಾ ಬಂದಿದ್ದೇವೆ. ಮಾಲಿನ್ಯರಹಿತವಾದ ಮುಗಿಯದ ಇಂಧನ ಮೂಲವಾಗಿ ಸೌರಶಕ್ತಿಯನ್ನು ನಾವು ಬಳಸುತ್ತಿದ್ದೇವೆ. ರೋಗರುಜಿಗಳಿಂದ ದೂರವಿರಲು ಸೂರ್ಯನ ಬೆಳಕು ಮತ್ತು ಶಾಖ ಅಗತ್ಯ. ಪ್ರಾಣಿ ಪ್ರಪಂಚಕ್ಕೆ ಆಹಾರ ಪೂರೈಸುವ ಹಸಿರು ಸಸ್ಯಗಳ ದ್ಯುತಿಸಂಶ್ಲೇಷಣೆ ಕ್ರಿಯೆಗೂ ಸೂರ್ಯನ ಕಿರಣಗಳು ಅವಶ್ಯಕ. ಪೂರ್ವಜನ್ಮದ ಪಾಪರೂಪವಾದ ಗುಣಪಡಿಸಲಾಗದ ವ್ಯಾಧಿಗಳ ಶಮನಕ್ಕೂ ರಥಸಪ್ತಮಿಯಂದು ನಡೆಸುವ ಸೂರ್ಯಾರಾಧನೆಯ ವೃತವು ಉತ್ತಮ ಪರಿಹಾರವಾಗಿದೆ’ಎನ್ನುತ್ತಾ ಪೌರಾಣಿಕ ಘಟನೆಗಳನ್ನು ಉದಾಹರಿಸುತ್ತಾ ರಥ ಸಪ್ತಮಿಯ ಮಹತ್ವವನ್ನು ಹಿರಿಯ ಶಿಕ್ಷಕಿಯಾದ ಶ್ರೀಮತಿ ಪೂರ್ಣಿಮಾ ಮಾತಾಜಿಯವರು ವಿವರಿಸಿದರು.

Rathasapthami (4)

Rathasapthami (5)

Rathasapthami (6)

Rathasapthami (7)

Rathasapthami (8)

Rathasapthami (9)

Rathasapthami (1)

Rathasapthami (2)

Rathasapthami (3)

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ರಥ ಸಪ್ತಮಿಯಂದು ಸಾಮೂಹಿಕ ಸೂರ್ಯನಮಸ್ಕಾರ ಕಾರ್ಯಕ್ರಮ ನಡೆಸಿದ ಸಂದರ್ಭದಲ್ಲಿ ವಿದ್ಯಾರ್ಥಿ ಸಮೂಹವನ್ನುದ್ದೇಶಿಸಿ ಈ ಮೇಲಿನಂತೆ ಅವರು ಮಾತನಾಡಿದರು.

ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಯುತ ಅಚ್ಯುತ ನಾಯಕ್‌ರವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನಡೆಸಲಾದ ಕಾರ್ಯಕ್ರಮದಲ್ಲಿ ಮುಖ್ಯಗುರುಗಳು ಉಪಸ್ಥಿತರಿದ್ದರು. ಶಿಕ್ಷಕರಾದ ರಂಗಪ್ಪ ಶ್ರೀಮಾನ್ ವಿದ್ಯಾರ್ಥಿಗಳಿಗೆ ಅಗತ್ಯವಾದ ಸೂಚನೆಯನ್ನಿತ್ತು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Highslide for Wordpress Plugin