ಮಕ್ಕಳು ಕ್ರೀಡಾಮನೋಭಾವ ಬೆಳೆಸಿಕೊಳ್ಳಬೇಕು- ಶ್ರೀ ಜನಾರ್ಧನ ರೈ ಆನಾಜೆ

ಮಕ್ಕಳು ಕ್ರೀಡಾಮನೋಭಾವ ಬೆಳೆಸಿಕೊಳ್ಳಬೇಕು. ಸೋಲು – ಗೆಲುವುಗಳ ಬಗೆಗೆ ಚಿಂತಿಸದೆ ಮುಂದೆ ಗೆಲ್ಲುವುವೆಂಬ ಭರವಸೆಯನ್ನು ಇಟ್ಟುಕೊಳ್ಳುವುದು ಅತೀ ಅಗತ್ಯ. ಎಂದು ಪುತ್ತೂರಿನ ಪಿ.ಡಬ್ಲ್ಯೂ.ಡಿ. ಕನ್ಸಲ್‌ಟೇಟರ್ ಶ್ರೀ ಜನಾರ್ದನ ರೈ ಆನಾಜೆ ಇವರು ವಿದ್ಯಾಭಾರತಿ ಕರ್ನಾಟಕ ವತಿಯಿಂದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಕ್ರೀಡಾಂಗಣದಲ್ಲಿ ನಡೆದ ’ಜಿಲ್ಲಾಮಟ್ಟದ ಕಬಡ್ಡಿ’ ಪಂದ್ಯಾಟವನ್ನು ಉದ್ಫಾಟಿಸಿ ಶುಭ ಹಾರೈಸಿದರು.

Kabaddi tournament (4)

Kabaddi tournament (2)

Kabaddi tournament (5)

Kabaddi tournament

Kabaddi tournament (1)

Kabaddi tournament (3)

ವಿದ್ಯಾಭಾರತಿ ದಕ್ಷಿಣ ಕನ್ನಡ ಜಿಲ್ಲೆಯ ಶಾರೀರಕ ಪ್ರಮುಖ್ ಆಗಿರುವ ಶ್ರೀಯುತ ಕರುಣಾಕರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಶಾಲಾ ಆಡಳಿತ ಮಂಡಳಿ ಸದಸ್ಯರಾದ ಶ್ರೀ ರಮೇಶ್ಚಂದ್ರ ಮಾತನಾಡಿ, ಕಬಡ್ಡಿ ಆಡುವುದರಿಂದ ವಿದ್ಯಾರ್ಥಿಗಳಲ್ಲಿ ಧೈರ್ಯ, ಆತ್ಮವಿಶ್ವಾಸದ ಜೊತೆಗೆ ನಮ್ಮ ತಾಯ್ನಾಡಿನ ಮೇಲೆ ಪ್ರೀತಿ, ಅಭಿಮಾನ ಮೂಡುವುದು ಎಂದರು. ಮುಖ್ಯ ಅತಿಥಿಗಳಾಗಿದ್ದ ವಿದ್ಯಾಭಾರತಿ ದಕ್ಷಿಣ ಕನ್ನಡ ಜಿಲ್ಲೆ ಇದರ ಅಧ್ಯಕ್ಷರಾದ ಶ್ರೀ ಗಂಗಾಧರ ಕುಂಡಡ್ಕ ಶುಭ ಹಾರೈಸಿದರು.

ವೇದಿಕೆಯಲ್ಲಿ ಶಾಲಾ ಅಧ್ಯಕ್ಷರಾದ ಶ್ರೀ ಅಚ್ಯುತ ನಾಯಕ್, ಸಂಚಾಲಕರಾದ ವಿನೋದ್ ಕುಮಾರ್ ರೈ, ಕೋಶಾಧಿಕಾರಿ ವಸಂತ ಸುವರ್ಣರವರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಪ್ರಾರ್ಥಿಸಿ, ಶ್ರೀಮತಿ ಲಾವಣ್ಯ ಮಾತಾಜಿ ಸ್ವಾಗತಿಸಿ, ಶ್ರೀಮತಿ ಸ್ವಾತಿ ಮಾತಾಜಿ ವಂದಿಸಿ, ಶ್ರೀಮತಿ ಭವ್ಯಾ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು.

ಪಂದ್ಯಾಟದಲ್ಲಿ ಬಾಲವರ್ಗ, ಕಿಶೋರ ವರ್ಗ ಮತ್ತು ತರುಣವರ್ಗ ಎಂಬ ಮೂರು ವಿಭಾಗಗಳಲ್ಲಿ ಒಟ್ಟು 28 ತಂಡಗಳು ಭಾಗವಹಿಸಿದವು.

Highslide for Wordpress Plugin