ಆಸಕ್ತಿದಾಯಕ ಚಟುವಟಿಕೆಗಳಿಂದ ರಜಾಕಾಲದ ಸದುಪಯೋಗ ಸಾಧ್ಯ – ಶ್ರೀಮತಿ ಮಂಗಳ ಗೌರಿ

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಮಕ್ಕಳಿಗಾಗಿ ಒಂದು ವಾರದ ’ಕಲರವ’ಮತ್ತು’ಬಣ್ಣ’ಎಂಬ ಎರಡು ವಿಭಾಗಗಳಲ್ಲಿ ಬೇಸಿಗೆ ಶಿಬಿರಗಳನ್ನು ಮಾರ್ಚ್ 20 ರಿಂದ ಆರಂಭಿಸಲಾಯಿತು. ಈ ಶಿಬಿರದ ಉದ್ಘಾಟನೆಗೈದು ಮಾತನಾಡಿದ ಶಾಲಾ ಪೋಷಕರಾದ ಶ್ರೀಮತಿ ಮಂಗಳ ಗೌರಿ ಮಾತನಾಡಿ ಮಕ್ಕಳು ದೂರದರ್ಶನ, ಮೊಬೈಲ್ ಇತ್ಯಾದಿಗಳಿಂದ ದೂರವಿದ್ದು, ಬೇಸಿಗೆ ಶಿಬಿರಗಳಂತಹ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಆಸಕ್ತಿಯುತ ಕಲಿಕೆಯನ್ನು ವೃದ್ಧಿಸಿಕೊಳ್ಳುವುದು ಒಳ್ಳೆಯ ವಿಚಾರವಾಗಿದೆ ಎಂದು ನುಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಮಕ್ಕಳ ಸಾಹಿತಿ ಉಲ್ಲಾಸ್ ಪೈ (ಉಲ್ಲಾಸಣ್ಣ) ಶಿಬಿರಗಳು ಮಕ್ಕಳಲ್ಲಿ ಹೆಚ್ಚಿನ ಜ್ಞಾನಾಭಿವೃದ್ಧಿಗೆ ಸಹಕಾರಿಯಾಗಿವೆ ಎಂದು ಹೇಳಿದರು.

Camp-Kalarava - Banna (2)

Camp-Kalarava - Banna (4)

Camp-Kalarava - Banna (1)

Camp-Kalarava - Banna (3)

ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀಯುತ ಅಚ್ಯುತ ನಾಯಕ್ ಶಿಬಿರಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರು, ಮುಖ್ಯಗುರುಗಳು, ಶಿಕ್ಷಕವೃಂದ, ಪೋಷಕರು, ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

ಶಾಲಾ ವಿದ್ಯಾರ್ಥಿಗಳ ಪ್ರಾರ್ಥನೆಯಿಂದ ಆರಂಭವಾದ ಕಾರ್ಯಕ್ರಮದಲ್ಲಿ ಶ್ರೀಮತಿ ಸೌಮ್ಯ ಸ್ವಾಗತಿಸಿ, ಕು. ಕಾವ್ಯ ಧನ್ಯವಾದ ಸಮರ್ಪಿಸಿ, ಶ್ರೀಮತಿ ಅನುಷಾ ಕಾರ್ಯಕ್ರಮ ನಿರೂಪಿಸಿದರು.

Highslide for Wordpress Plugin