ಪುತ್ತೂರು ಹಾಗೂ ಸುತ್ತಮುತ್ತಲಿನ ಊರ ನಾಗರಿಕರ ಹಾಗೂ ವಿದ್ಯಾಕಾಂಕ್ಷಿಗಳ ಬಹುಜನತೆಯ ಬೇಡಿಕೆಗಳಿಗೆ ಸ್ಪಂದಿಸಿದ ಪುತ್ತೂರು ಎಜ್ಯುಕೇಶನ್ ಸೊಸೈಟಿಯು (ರಿ) ಈಗಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿಯು ಕನ್ನಡವನ್ನು ಉಳಿಸಿ ಬೆಳೆಸುವ ಮತ್ತು ಪ್ರೋತ್ಸಾಹಿಸುವ ದೃಷ್ಟಿಯಿಂದ 1993-94ನೇ ಶೈಕ್ಷಣಿಕ ವರ್ಷದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ ಹಾಗೂ 2000-01 ರಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಪ್ರೌಢಶಾಲೆ ಪ್ರಾರಂಭವಾಯಿತು. ಈ ಸಂದರ್ಭದಲ್ಲಿ ಈ ಶಾಲೆಗೆ ಕ್ರಮೇಣ ಪುತ್ತೂರಿನ ಹಲವು ಕಡೆಯಿಂದ ಶಿಕ್ಷಣ ಆಸಕ್ತರ ಪೂರ್ಣಪ್ರಮಾಣದ ಬೆಂಬಲ ದೊರೆಯಿತು.
ಉಚಿತ ಶಿಕ್ಷಣ, ಮಧ್ಯಾಹ್ನದ ಭೋಜನ, ಸೈಕಲ್ ಕೊಡುಗೆ ಇತ್ಯಾದಿ ಎಲ್ಲಾ ಸವಲತ್ತುಗಳನ್ನು ಹೊಂದಿರುವ ಕನ್ನಡ ಮಾಧ್ಯಮ ಶಾಲೆಗಳು ಸುತ್ತಮುತ್ತಲು ಇರುವಾಗ ಸಹ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಪ್ರಸಕ್ತ ವರ್ಷ ಸುಮಾರು 912 ವಿದ್ಯಾರ್ಥಿಗಳನ್ನು ಹೊಂದಿರುವುದು ಆಡಳಿತ ಮಂಡಳಿಯ ಕಾರ್ಯತತ್ಪರತ, ಸಹೃದಯರಾದ ಪೋಷಕರ ಸಹಕಾರ, ಸಂತೋಷದಿಂದ ಮತ್ತು ಪ್ರೀತಿಯಿಂದ ಕೆಲಸಮಾಡುವ ಶಿಕ್ಷಕರ ಸಹಭಾಗಿತ್ವವನ್ನು ನೆನಪಿಸುವಂತೆ ಮಾಡುತ್ತದೆ.