ವಿವಿಧ ಸಮಿತಿಯ ಪದಾಧಿಕಾರಿಗಳ ಆಯ್ಕೆ

                            

ವಿಘ್ನೇಶ್ ವಿಶ್ವಕರ್ಮ                  ಹೇಮಾವತಿ                  ಶ್ರೀದೇವಿ ಕೆ.ಎನ್                  ಪವಿತ್ರಾ ಕೆ                    ಶ್ಯಾಮಲ ನಾಯಕ್

ಮುರಳೀಧರ ಎನ್

2025-26ನೇ ಸಾಲಿನ ಶಾಲಾ ಕಾರ್ಯಕಾರಿ ಸಮಿತಿಗಳ ಪದಗ್ರಹಣ ಸಮಾರಂಭ ನಡೆಯಿತು. ಪ್ರಸಕ್ತ ವರ್ಷದ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾಗಿ ಶ್ರೀ ವಿಘ್ನೇಶ್ ವಿಶ್ವಕರ್ಮ, ಉಪಾಧ್ಯಕ್ಷೆಯಾಗಿ ಶ್ರೀಮತಿ ಹೇಮಾವತಿ ಆಯ್ಕೆಗೊಂಡರು. ಮಾತೃಭಾರತಿಯ ಅಧ್ಯಕ್ಷೆಯಾಗಿ ಶ್ರೀಮತಿ ಶ್ರೀದೇವಿ ಕೆ.ಎನ್, ಉಪಾಧ್ಯಕ್ಷೆಯಾಗಿ ಶ್ರೀಮತಿ ಪವಿತ್ರಾ ಕೆ ಹಾಗೂ ಅನ್ನಪೂರ್ಣಾ ಸಮಿತಿಯ ಕಾರ್ಯಕಾರಿ ಅಧ್ಯಕ್ಷರಾಗಿ ಶ್ರೀಮತಿ ಶ್ಯಾಮಲ ನಾಯಕ್, ಉಪಾಧ್ಯಕ್ಷರಾಗಿ ಶ್ರಿ ಮುರಳೀಧರ ಎನ್ ಆಯ್ಕೆಗೊಂಡರು. ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಶೈಕ್ಷಣಿಕ ಪರಿವೀಕ್ಷಣಾಧಿಕಾರಿ ಶ್ರೀ ರಘುರಾಜ ಉಬರಡ್ಕ ಮಾತಾನಾಡಿ ಶಾಲಾ ಸಮಿತಿಗಳ ಮಹತ್ವದ ಬಗ್ಗೆ ತಿಳಿಸಿದರು. ಶಾಲಾ ಅಧ್ಯಕ್ಷರಾದ ರಮೇಶ್ಚಂದ್ರ, ಸಂಚಾಲಕರಾದ ವಸಂತ ಸುವರ್ಣ , ಕೋಶಾಧಿಕಾರಿಗಳಾದ ಶ್ರೀ ಅಶೋಕ್ ಕುಂಬ್ಳೆ ಹಾಗೂ ಶಾಲಾ ಪ್ರೌಢ ವಿಭಾಗದ ಮುಖ್ಯಗುರುಗಳಾದ ಶ್ರೀಮತಿ ಆಶಾ ಬೆಳ್ಳಾರೆ, ಪ್ರಾಥಮಿಕ ಮುಖ್ಯಗುರುಗಳಾದ ಶ್ರೀಮತಿ ನಳಿನಿ ವಾಗ್ಲೆ ಉಪಸ್ಥಿತರಿದ್ದರು. ಸಹಶಿಕ್ಷಕಿ ಶ್ರೀಮತಿ ಸೌಮ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.

Highslide for Wordpress Plugin