ಮೈಸೂರು ವಿಭಾಗಮಟ್ಟದ ಬ್ಯಾಂಡ್ ಸ್ಪರ್ಧೆ – ತೃತೀಯ
ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ಕೊಡಗು ಉಪ ನಿರ್ದೇಶಕರು ಹಾಗೂ ಪದ ನಿಮಿತ್ತ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು ಸಮಗ್ರ ಶಿಕ್ಷಣ ಕರ್ನಾಟಕ, ಶಾಲಾ ಶಿಕ್ಷಣ ಇಲಾಖೆ, ಕೊಡಗು ಜಿಲ್ಲೆ ಮಡಿಕೇರಿ ಇದರ ವತಿಯಿಂದ ಫಾತಿಮಾ ಪ್ರೌಢಶಾಲೆ, ಕುಶಾಲನಗರ ಇಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ಬ್ಯಾಂಡ್ ಸ್ಪರ್ಧೆಯಲ್ಲಿ ಶಾಲೆಯ ವಿದ್ಯಾರ್ಥಿಗಳ ತಂಡ ತೃತೀಯ ಸ್ಥಾನ ಪಡೆದು ಕೊಂಡಿದೆ. ಇವರಿಗೆ ಉಮೇಶ್ ಕುಲಕರ್ಣಿ ಮತ್ತು ಶಾಲಾ ಕಛೇರಿ ಸಹಾಯಕರಾದ ವಿಜಯ್ ಕುಮಾರ್ ತರಬೇತಿ ನೀಡಿದ್ದರು.