ಕ್ಲಸ್ಟರ್ ಪ್ರತಿಭಾ ಕಾರಂಜಿ – ದ್ವಿತೀಯ ಸಮಗ್ರ ಪ್ರಶಸ್ತಿ

ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ, ಪುತ್ತೂರು, ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು, ಸಮೂಹ ಸಂಪನ್ಮೂಲ ಕೇಂದ್ರ ಪುತ್ತೂರು, ಸಮೂಹ ಸಂಪನ್ಮೂಲ ಕೇಂದ್ರ ಪುತ್ತೂರು ಇವರ ವತಿಯಿಂದ ಸಂತ ವಿಕ್ಟರ್ಸ್ ಆಂಗ್ಲಮಾಧ್ಯಮ ಹಿ.ಪ್ರಾ ಶಾಲೆ ಪುತ್ತೂರು ಇಲ್ಲಿ ನಡೆದ ಪುತ್ತೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯು ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಸಂಸ್ಕೃತ -ಧಾರ್ಮಿಕ ಪಠಣ -ಸನ್ಮಯ ವೈ ಭಟ್ (ಪ್ರಥಮ), ಚಿತ್ರಕಲೆ – ರಶ್ಮಿಕ ಆರ್ ಆಚಾರ್ಯ(ಪ್ರಥಮ), ದೇಶ ಭಕ್ತಿಗೀತೆ – ತನ್ವಿ (ದ್ವಿತೀಯ), ಛದ್ಮವೇಷ – ಬೃಂದ (ದ್ವಿತೀಯ), ಆಶುಭಾಷಣ – ಗುರುಪ್ರಿಯ ಭಟ್(ದ್ವಿತೀಯ), ಭಕ್ತಿಗೀತೆ – ಮೈಥಿಲಿ ಜಿ ಆಚಾರ್ಯ (ದ್ವಿತೀಯ), ಕ್ಲೇ ಮಾಡಲಿಂಗ್ – ಸ್ವರೂಪ್ (ತೃತೀಯ) ಸ್ಥಾನದೊಂದಿಗೆ ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಪ್ರಬಂಧ – ಶ್ರುತಿ ನಾಯಕ್ (ಪ್ರಥಮ), ದೇಶಭಕ್ತಿ ಗೀತೆ – ಸಹನಲಕ್ಷ್ಮೀ (ದ್ವಿತೀಯ), ಚಿತ್ರಕಲೆ – ತನ್ವಿಶ್ (ದ್ವಿತೀಯ), ಆಶುಭಾಷಣ-ಅಹಲ್ಯ ಕಾಮತ್ (ದ್ವಿತೀಯ), ಮಿಮಿಕ್ರಿ – ದ್ರುಪದ್ (ದ್ವಿತೀಯ), ಭಕ್ತಿಗೀತೆ – ಮಾತಂಗಿ (ತೃತೀಯ), ಕವನ ವಾಚನ – ಆತ್ಮಿಕಾ (ತೃತೀಯ), ಕ್ಲೇ ಮಾಡಲಿಂಗ್ – ಸನ್ನಿಧಿ (ತೃತೀಯ ) ಸ್ಥಾನದೊಂದಿಗೆ ತೃತೀಯ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

Highslide for Wordpress Plugin