ಶಾಲಾಭಿವೃದ್ಧಿ ಸಮಿತಿ ರಚನೆ

                            

ಅಪ್ಪು ಪಾಟಾಳಿ                     ಶ್ರೀಮತಿ ರೇಖಾ                        ಶ್ರೀಮತಿ ಪ್ರತಿಭಾ

“ವಿವೇಕಾನಂದ ಕನ್ನಡ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೀಯ ಸ್ಥಾನದಲ್ಲಿದ್ದು ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಅಸಾಧ್ಯವಾದರೂ ಶಾಲಾ ಆಡಳಿತ ಸಮಿತಿ, ಶಿಕ್ಷಕ-ಪೋಷಕ ವೃಂದದವರು ಪ್ರೀತಿ ಮತ್ತು ಆದರ ಸದಾ ಸ್ಮರಣೀಯವಾಗಿದೆ. ಮುಂದೆಯೂ ಶಾಲೆಯೊಂದಿಗೆ ಭಾವನಾತ್ಮಕವಾಗಿ ಜೋಡಿಕೊಂಡಿರುತ್ತೇನೆ” – ವಿಘ್ನೇಶ್ ವಿಶ್ವಕರ್ಮ, ಮಾಲಕರು ಭಾವನಾ ಕಲಾ ಆಟ್ರ್ಸ್ ಇವರು 2026-27ನೇ ಶಾಲಾಭಿವೃದ್ಧಿ ಸಮಿತಿ ಪುನರ್ ರಚನಾ ಸಂದರ್ಭದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ಶಾಲಾ ಮುಖ್ಯ ಗುರುಗಳಾದ ಆಶಾ ಬೆಳ್ಳಾರೆ ಇವರು ಪ್ರಾಸ್ತಾವಿಕ ಮಾತುಗಳಲ್ಲಿ ಸಮಿತಿಗಳು ಶಾಲಾ ಭೌತಿಕ, ಶೈಕ್ಷಣಿಕ, ಪಠ್ಯಪೂರಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ, ಮುಂದಿನ ಯೋಜನೆಗಳ ಬಗ್ಗೆ ತಿಳಿಸಿದರು. ಆಡಳಿತ ಮಂಡಳಿ ಅಧ್ಯಕ್ಷರಾದ ರಮೇಶ್ಚಂದ್ರ ಇವರ ಸಭಾಧ್ಯಕ್ಷತೆಯಲ್ಲಿ ಪದಾಧಿಕಾರಿಗಳ ಜವಾಬ್ದಾರಿ ಸ್ವೀಕಾರ ಪ್ರಕ್ರಿಯೆಯು ನಡೆಯಿತು. ನೂತನ ಅಧ್ಯಕ್ಷರಾಗಿ ಶ್ರೀ ಅಪ್ಪು ಪಾಟಾಳಿ, ಜತೆ ಕಾರ್ಯದರ್ಶಿಗಳಾಗಿ ಶ್ರೀಮತಿ ರೇಖಾ, ಕೋಶಾಧಿಕಾರಿಗಳಾಗಿ ಪ್ರತಿಭಾ ಇವರು ಆಯ್ಕೆಯಾದರು. ಶಿಶುಮಂದಿರದಿಂದ 10ನೇ ತರಗತಿಯವರೆಗಿನ ಫೋಷಕ ಪ್ರತಿನಿಧಿಗಳು ಉಪಸ್ಥಿತರಿದ್ದರು. ಮಾತೃಭಾರತಿಯ ಅಧ್ಯಕ್ಷರಾದ ಶ್ರೀದೇವಿ, ಅನ್ನಪೂರ್ಣಾ ಸಮಿತಿಯ ಅಧ್ಯಕ್ಷರಾದ ಶ್ಯಾಮಲಾ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Highslide for Wordpress Plugin