ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟ

ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಪುತ್ತೂರು, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಪುತ್ತೂರು ಇವರ ಸಹಯೋಗದಲ್ಲಿ ಪುತ್ತೂರು ತಾಲೂಕುಮಟ್ಟದ 14ರ ಮತ್ತು 17 ರವಯೋಮಾನದ ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾಟ ಜರುಗಿತು. ದಿನಾಂಕ 15.09.2026ರಂದು 17ರ ವಯೋಮಾನದ ಕಬಡ್ಡಿ ಪಂದ್ಯಾಟವನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಕೃಷ್ಣ ಶೆಟ್ಟಿ ಕಡಬ ಇವರು ದೀಪ ಪ್ರಜ್ವಲಿಸಿ “ಕಬಡ್ಡಿ ಪಂದ್ಯಾಟವು ಚಲನ ಶೀಲತೆ ಮತ್ತು ಕ್ರಿಯಾಶೀಲತೆಯಿಂದ ಕೂಡಿದ ಆಟವಾಗಿದ್ದು, ಬುದ್ಧಿ-ಭಾವ- ಶರೀರಕ್ಕೆ ವ್ಯಾಯಮ ನೀಡುತ್ತದೆ. ಮತ್ತು ಪಂದ್ಯಾಟವನ್ನು ಆಯೋಜಿಸುತ್ತಿರುವ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಕ್ರೀಡಾ ಕ್ಷೇತ್ರದ ಸಾಧನೆಯಲ್ಲಿ ಹಾಗೂ ಸಂಘಟನೆಯಲ್ಲಿ ಸಕ್ರಿಯತೆಯಿಂದಿರುವುದು ಶ್ಲಾಘನೀಯ” ಎಂದರು.

ಶಾಲಾ ಘೋಷ್ ತಂಡದವರಿಂದ ವಂದೇ ಮಾತರಂ ಗೀತೆಯ ವಾದನವು ಉದ್ಘಾಟನೆಯ ಮೆರುಗನ್ನು ಮತ್ತಷ್ಟು ಹೆಚ್ಚಿಸಿತು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿರಿಗಳಾದ ಸಿಲ್ವಿಯಾ ಎ ಆರ್ ಕ್ಯಾಸ್ಟಲಿನೋ ಪ್ರಾಸ್ತಾವಿಕ ಮಾತುಗಳಲ್ಲಿ ವಿವೇಕಾನಂದ ವಿದ್ಯಾಸಂಸ್ಥೆಗಳ ಶಿಸ್ತುಬದ್ಧ ಮತ್ತು ಆಕರ್ಷಣೀಯ ವ್ಯವಸ್ಥಾ ವಿಧಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಪಂದ್ಯಾಟದ ನಿಯಾಮವಳಿಗಳನ್ನು ತಿಳಿಸಿದರು. ಶಾಲೆಯ ಹಿರಿಯ ವಿದ್ಯಾರ್ಥಿ ಹಾಗೂ ಯು ಆರ್ ಪ್ರಾಪರ್ಟೀಸ್ ಮಾಲಕರಾದ ಉಜ್ವಲ್ ಪ್ರಭು ಇವರು ತಾನೂ ಸ್ವಯಂ ಒಬ್ಬ ಕಬಡ್ಡಿ ಆಟಗಾರನಾಗಿದ್ದು, ತನ್ನ ಬಾಲ್ಯದಲ್ಲಿ ಶಾಲೆಯಿಂದ ಸಿಕ್ಕಿದ ಪ್ರೋತ್ಸಾಹ ಮತ್ತು ಮಾರ್ಗದರ್ಶನವನ್ನು ನೆನಪಿಸಿಕೊಂಡರು. ತಾಲೂಕು ಅಮೇಚೂರು ಕಬಡ್ಡಿ ಅಸೋಸಿಯೇಷನ್ ಇದರ ಅಧ್ಯಕ್ಷರಾದ ಚಂದ್ರಹಾಸ ಶೆಟ್ಟಿ ಇವರು ಮಕ್ಕಳಿಗೆ ಶುಭ ಹಾರೈಸಿದರು. ಸಿ.ಆರ್.ಪಿ ಶಶಿಕಲಾ ವಂದಿಸಿದರು. 14 ರವಯೋಮಾನದ ಪಂದ್ಯಾಟವನ್ನು 16.09.2026ರಂದು ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ರಮೇಶ್ಚಂದ್ರ ಎಂ ಉದ್ಘಾಟಿಸಿ ಶುಭ ಹಾರೈಸಿದರು. ವಿದ್ಯಾರ್ಥಿನಿ ಶ್ರೀರಕ್ಷಾ ವೇದಮಂತ್ರದೊಂದಿಗೆ ಸ್ವಾಗತಿಸಿದರು. ಸಹಶಿಕ್ಷಕರಾದ ಚಂದ್ರಶೇಖರ್ ಸ್ವಾಗತಿಸಿ, ಸಹಶಿಕ್ಷಕಿ ಪ್ರತೀಕ್ಷಾ ಆರ್ ಕೆ ಕಾರ್ಯಕ್ರಮ ನಿರೂಪಿಸಿದರು.
ಫಲಿತಾಂಶ : 17ರ ವಯೋಮಾನದ ಬಾಲಕರ ವಿಭಾಗದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ,
ಪುತ್ತೂರು (ಪ್ರಥಮ), ಸೈಂಟ್ ಮೇರಿಸ್ ಪ್ರೌಢಶಾಲೆ, ಮರ್ಧಾಳ (ದ್ವಿತೀಯ)
17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಬೆಥನಿ ಆಂಗ್ಲಮಾಧ್ಯಮ ಶಾಲೆ, (ಪ್ರಥಮ)
ಸರಕಾರಿ ಪ್ರೌಢ ಶಾಲೆ, ಹೀರೆ ಬಂಡಾಡಿ (ದ್ವಿತೀಯ)
14ರ ವಯೋಮಾನದ ಬಾಲಕರ ವಿಭಾಗದಲ್ಲಿ ಸರಸ್ವತಿ ವಿದ್ಯಾಲಯ ಕಡಬ (ಪ್ರಥಮ),
ಪ್ರಗತಿ ಆಂಗ್ಲಮಾಧ್ಯಮ ಪ್ರೌಢಶಾಲೆ (ದ್ವಿತೀಯ),
14ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಲಿಟ್ಲ್ ಫ್ಲವರ್ ಪ್ರಾಥಮಿಕ ಶಾಲೆ (ಪ್ರಥಮ)
ಶ್ರಿ ಭಾರತಿ ಹಿರಿಯ ಪ್ರಾಥಮಿಕ ಶಾಲೆ (ದ್ವಿತೀಯ)