
ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ದಕ್ಷಿಣ ಕನ್ನಡ ಉಪನಿರ್ದೇಶಕರ ಕಛೇರಿ, ಶಾಲಾ ಶಿಕ್ಷಣ ಇಲಾಖೆ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಸುಳ್ಯ ಇವರ ವತಿಯಿಂದ ಸರಕಾರಿ ಪದವಿ ಪೂರ್ವ ಕಾಲೇಜು ಪಂಜ ಇಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಕು. ಜಿ.ಎಂ.ಕೀರ್ತಿ17ರ ವಯೋಮಾನದ ಬಾಲಕಿಯರ ಎತ್ತರ ಜಿಗಿತದಲ್ಲಿ 1.60 ಮೀಟರ್, ತ್ರಿವಿಧ ಜಿಗಿತದಲ್ಲಿ 11.34ಮೀ ಹಾಗೂ ಹರ್ಡಲ್ಸ್ ನಲ್ಲಿ 15.2 ಸೆಕೆಂಡಿನಲ್ಲಿ ಗುರಿತಲುಪಿ ಕೂಟದಲ್ಲಿ ವಿಶೇಷ ದಾಖಲೆ ಮಾಡಿ ವೈಯಕ್ತಿಕ ಚಾಂಪಿಯನ್ ಪಡೆಯುವುದರೊಂದಿಗೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.