ಭವಿಷ್ಯದ ಕನಸಿಗೆ ಹಸಿರಿನ ಹೆಜ್ಜೆ – ಗಂಗಾಪೂಜೆ, ತೀರ್ಥಧಾರಾ ಕಾರ್ಯಕ್ರಮ

ತೆಂಕಿಲ ವಿವೇಕಾನಂದ ವಿದ್ಯಾಸಂಸ್ಥೆಗಳ ಮಾದರಿ ಯೋಜನೆ
ಭವಿಷ್ಯದ ಕನಸಿಗೆ ಹಸಿರಿನ ಹೆಜ್ಜೆ – ಗಂಗಾಪೂಜೆ, ತೀರ್ಥಧಾರಾ ಕಾರ್ಯಕ್ರಮ

                                                                              

ನೀರಿಲ್ಲದೆ ಜೀವನವಿಲ್ಲ. ನೀರಿದ್ದರೆ ಭವಿಷ್ಯವೂ ಇರುತ್ತದೆ. ನೀರು ಮನುಷ್ಯರಿಗೆ ಮಾತ್ರವಲ್ಲದೆ ಇಡೀ ಪರಿಸರ ವ್ಯವಸ್ಥೆಗೆ ಮುಖ್ಯವಾಗಿದೆ. ಸಾಕಷ್ಟು ನೀರಿಲ್ಲದೆ, ಮಾನವರ ಹಾಗೂ ಪ್ರಾಣಿಗಳ ಅಸ್ತಿತ್ವವು ಅಸಾಧ್ಯವಾಗಿದೆ. ಜಲಸಂರಕ್ಷಣೆಯ ಮಹತ್ವ ಜೀವ ಉಳಿಸಲು, ಆರ್ಥಿಕತೆಯನ್ನ್ ಬಲಪಡಿಸಲು ಮತ್ತು ಪರಿಸರವನ್ನು ರಕ್ಷಿಸಲು ಅತ್ಯಗತ್ಯವಾಗಿದೆ. ಶುದ್ಧ ನೀರು ಸೀಮಿತ ಸಂಪನ್ಮೂಲವಾಗಿರುವುದರಿಂದ ಅನಗತ್ಯ ಬಳಕೆಯನ್ನು ತಡೆಯುವುದು, ಮಿತವ್ಯಯದಿಂದ ಬಳಸುವುದು ಮತ್ತು ನೀರನ್ನು ಮರುಬಳಕೆ ಮಾಡುವುದು ಮುಖ್ಯವಾಗಿದೆ. ಇದರಿಂದ ಮುಂದಿನ ಪೀಳಿಗೆಗೆ ನೀರನ್ನು ಉಳಿಸಬಹುದು ಮತ್ತು ನೀರಿನ ಕೊರತೆ, ಮಾಲಿನ್ಯ ಮತ್ತು ಪರಿಸರ ವ್ಯವಸ್ಥೆಗಳ ನಾಶವನ್ನು ತಡೆಯಬಹುದು ಎಂದು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು. ತೆಂಕಿಲದ ವಿವೇಕಾನಂದ ವಿದ್ಯಾಸಂಸ್ಥೆಗಳ ಆವರಣದಲ್ಲಿ ನಡೆದ ಭವಿಷ್ಯದ ಕನಸಿಗೆ ಹಸಿರಿನ ಹೆಜ್ಜೆ ಎಂಬ ಶೀರ್ಷಿಕೆಯಡಿಯಲ್ಲಿ ನಡೆದ ಗಂಗಾ ಪೂಜೆ ಮತ್ತು ತೀರ್ಥಧಾರಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಾನವ ಜೀವನದ ಅಸ್ತಿತ್ವಕ್ಕೆ ಜಲಸಂರಕ್ಷಣೆಯ ಅರಿವು ಬಹಳ ಮುಖ್ಯ. ಜನರಲ್ಲಿ ಜಲ ಸಂರಕ್ಷಣೆಗಾಗಿ ವಿಶೇಷ ಜಾಗೃತಿ ಮೂಡಿಸುವಲ್ಲಿ ಇಂತಹ ಯೋಜನೆಗಳ ಪಾತ್ರ ಮಹತ್ವದ್ದಾಗಿರುತ್ತದೆ ಎಂದರು.

          

50ಕ್ಕೂ ಹೆಚ್ಚಿನ ಪುಣ್ಯಕ್ಷೇತ್ರಗಳಿಂದ ಜಲ : ತೆಂಕಿಲದ ವಿವೇಕಾನಂದ ವಿದ್ಯಾಸಂಸ್ಥೆಗಳ ಆವರಣದಲ್ಲಿದ್ದ ಬಾವಿಯನ್ನು ಶುಚಿಗೊಳಿಸಿ ಸಮೃದ್ಧಿಗೊಳಿಸಿ, ಕುಡಿಯುವ ನೀರಿನ ವ್ಯವಸ್ಥೆಗಾಗಿ ಬಳಸಿಕೊಳ್ಳಲು ಜೀವ ತುಂಬುವಂತೆ ಮಾಡಿದ ಈ ಯೋಜನೆ ಮಾದರಿಯಾಗಿದೆ. ಮಲೆಯ ನೀರು ಹರಿದು ಹೋಗದಂತೆ ತಡೆ ಹಿಡಿದು ಭೂಮಿಗೆ ಇಂಗುವಂತೆ ನಿಯಂತ್ರಿಸುವ ಗಿಡಗಳನ್ನು ಈ ಬಾವಿಯ ಸುತ್ತ ಬೆಳೆಸಿ ಪೆÇೀಷಿಸುವ ಮೂಲಕ ಜಲಸಂರಕ್ಷಣೆಯ ಪ್ರಯತ್ನವನ್ನು ಕಾರ್ಯಗತಗೊಳಿಸಲಾಗಿದೆ. ಇದಕ್ಕೆ ಪೂರಕವಾಗಿ ಪುತ್ತೂರಿನ ಆಸುಪಾಸಿನ ಸುಮಾರು 50ಕ್ಕೂ ಹೆಚ್ಚು ಪುಣ್ಯಕ್ಷೇತ್ರಗಳಿಂದ ಪವಿತ್ರ ಗಂಗಾಜಲವನ್ನು ತಂದು ವಿದ್ಯಾಸಂಸ್ಥೆಗಳ ಆವರಣದಲ್ಲಿದ್ದ ಬಾವಿಗೆ ಸಮರ್ಪಿಸಿ ಪೂಜೆ ನೆರವೇರಿಸಲಾಯಿತು. ಮೈತ್ರೇಯಿ ಗುರುಕುಲದ ವಿದ್ಯಾರ್ಥಿನಿಯರಿಂದ ವೇದ ಪಾರಾಯಣ ನಡೆಯಿತು. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಡಾ.ಕೃಷ್ಣ ಭಟ್, ಜೊತೆ ಕಾರ್ಯದರ್ಶಿ ರೂಪಲೇಖ, ತೆಂಕಿಲ ವಿದ್ಯಾಸಂಸ್ಥೆಗಳ ಆಡಳಿತ ಮಂಡಳ್ಯ ಪದಾದಿಕಾರಿಗಳು, ಮುಖ್ಯಗುರುಗಳು, ಶಿಕ್ಷಕ-ಶಿಕ್ಷಕೇತರ ವೃಂದ ಉಪಸ್ಥಿತರಿದ್ದರು. ಶಾಲಾ ಸಹಶಿಕ್ಷಕಿ ಪ್ರತೀಕ್ಷಾ ಕಾರ್ಯಕ್ರಮ ನಿರೂಪಿಸಿದರು.

Highslide for Wordpress Plugin