ಮಾಹಿತಿ ಕಾರ್ಯಾಗಾರ


ಇನ್ನರ್ ವೀಲ್ ಕ್ಲಬ್ ಪುತ್ತೂರು ಇದರ ವತಿಯಿಂದ ಹೆಣ್ಣು ಮಕ್ಕಳಿಗೆ ‘ದೇಹದ ಸುರಕ್ಷತೆ, ಒಳ್ಳೆಯ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶ’ ಎಂಬ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ವಿವೇಕಾನಂದ ಕಾಲೇಜ್ ಆಫ್ ಆಟ್ರ್ಸ್, ಸೈನ್ಸ್, ಕಾಮರ್ಸ್ ಇದರ ಪಿ.ಜಿ  ಪ್ರೊಗ್ರಾಮ್ ಡೀನ್ ಡಾ. ವಿಜಯ ಸರಸ್ವತಿ ಮಾತಾನಾಡಿ ‘ಹೆಣ್ಣು ಮಕ್ಕಳು ತಾವು ಪರಿಚಯವಿಲ್ಲದ ವ್ಯಕ್ತಿಯಲ್ಲಿ ಯಾವ ರೀತಿಯಲ್ಲಿ ಮಾತನಾಡಬೇಕು ಮತ್ತು ಪರಿಚಯವಿದ್ದರೂ ಕೂಡ ಮಾತನಾಡುವಾಗ ನಮ್ಮ ವರ್ತನೆ ,ದೇಹ, ನಡವಳಿಕೆ ಯಾವ ರೀತಿ ಇರಬೇಕು ಮತ್ತು ಅನ್ಯರಿಂದ ಯಾವುದೇ ತೊಂದರೆಗೆ ಸಿಲುಕಿಕೊಂಡಲ್ಲಿ ಹೇಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು’ ಎಂಬುದರ ಬಗ್ಗೆ 5ರಿಂದ 10ನೇ ತರಗತಿವರೆಗಿನ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಇನ್ನರ್‍ವೀಲ್‍ನ ಅಧ್ಯಕ್ಷರಾದ ಶ್ರೀಮತಿ ರೂಪಲೇಖಾ, ಕಾರ್ಯದರ್ಶಿ ಶ್ರೀಮತಿ ಸಂಧ್ಯಾಸಾಯ ಮತ್ತು ಸದಸ್ಯರು ಉಪಸ್ಥಿತರಿದ್ದರು. ಶಾಲಾ ಮುಖ್ಯಗುರುಗಳಾದ ಶ್ರೀಮತಿ ಆಶಾ ಬೆಳ್ಳಾರೆ ಮತ್ತು ಶ್ರೀಮತಿ ನಳಿನಿ ವಾಗ್ಲೆ ಉಪಸ್ಥಿತರಿದ್ದರು. ಸಹಶಿಕ್ಷಕಿ ಶ್ರೀಮತಿ ಶ್ರೀಲತಾ ಕಾರ್ಯಕ್ರಮ ನಿರೂಪಿಸಿ, ಸಹಶಿಕ್ಷಕಿ ಪವಿತ್ರ ಶೆಟ್ಟಿ ಧನ್ಯವಾದ ಸಮರ್ಪಿಸಿದರು.

Highslide for Wordpress Plugin