ನಮ್ಮ ಬಗ್ಗೆ

ಪುತ್ತೂರು ಹಾಗೂ ಸುತ್ತಮುತ್ತಲಿನ ಊರ ನಾಗರಿಕರ ಹಾಗೂ ವಿದ್ಯಾಕಾಂಕ್ಷಿಗಳ ಬಹುಜನತೆಯ ಬೇಡಿಕೆಗಳಿಗೆ ಸ್ಪಂದಿಸಿದ ಪುತ್ತೂರು ಎಜ್ಯುಕೇಶನ್ ಸೊಸೈಟಿಯು (ರಿ) ಈಗಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿಯು ಕನ್ನಡವನ್ನು ಉಳಿಸಿ ಬೆಳೆಸುವ ಮತ್ತು ಪ್ರೋತ್ಸಾಹಿಸುವ ದೃಷ್ಟಿಯಿಂದ 1993-94 ನೇ ಶೈಕ್ಷಣಿಕ ವರ್ಷದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ ಹಾಗೂ 2000-01 ರಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಪ್ರೌಢಶಾಲೆ ಪ್ರಾರಂಭವಾಯಿತು. ಈ ಸಂದರ್ಭದಲ್ಲಿ ಈ ಶಾಲೆಗೆ ಕ್ರಮೇಣ ಪುತ್ತೂರಿನ ಹಲವು ಕಡೆಯಿಂದ ಶಿಕ್ಷಣ ಆಸಕ್ತರ ಪೂರ್ಣಪ್ರಮಾಣದ ಬೆಂಬಲ ದೊರೆಯಿತು.

ಉಚಿತ ಶಿಕ್ಷಣ, ಮಧ್ಯಾಹ್ನದ ಭೋಜನ, ಸೈಕಲ್ ಕೊಡುಗೆ ಇತ್ಯಾದಿ ಎಲ್ಲಾ ಸವಲತ್ತುಗಳನ್ನು ಹೊಂದಿರುವ ಕನ್ನಡ ಮಾಧ್ಯಮ ಶಾಲೆಗಳು  ಸುತ್ತಮುತ್ತಲು ಇರುವಾಗ ಸಹ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಪ್ರಸಕ್ತ ವರ್ಷ ಸುಮಾರು 912 ವಿದ್ಯಾರ್ಥಿಗಳನ್ನು ಹೊಂದಿರುವುದು ಆಡಳಿತ ಮಂಡಳಿಯ ಕಾರ್ಯತತ್ಪರತ, ಸಹೃದಯರಾದ ಪೋಷಕರ ಸಹಕಾರ, ಸಂತೋಷದಿಂದ ಮತ್ತು ಪ್ರೀತಿಯಿಂದ ಕೆಲಸಮಾಡುವ ಶಿಕ್ಷಕರ ಸಹಭಾಗಿತ್ವವನ್ನು ನೆನಪಿಸುವಂತೆ ಮಾಡುತ್ತದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ವಿದ್ಯಾಭಾರತಿಯ ಮೌಲ್ಯಗಳನ್ನು ಶಿಕ್ಷಣದಲ್ಲಿ  ಅಳವಡಿಸಿಕೊಳ್ಳುವ ಮೂಲಕ ಉತ್ತಮ ವ್ಯಕ್ತಿತ್ವ, ಸಂಸ್ಕೃತಿ, ಸಂಯಮ, ರಾಷ್ಟ್ರಾಭಿಮಾನ, ಸದ್ಗುಣಗಳನ್ನು ರೂಢಿಸಿಕೊಂಡು ಮುನ್ನೆಡೆಯುತ್ತಿರುವ ಶಾಲೆಯ ಪ್ರಸಕ್ತ ವರ್ಷದ ಆಡಳಿತ ಮಂಡಳಿಯು ಅಧ್ಯಕ್ಷರಾಗಿ ಶ್ರೀ. ವಿಶ್ವೇಶ್ವರ ಭಟ್ ಬಂಗಾರಡ್ಕ, ಸಂಚಾಲಕರು ಶ್ರೀ. ರವೀಂದ್ರ .ಪಿ ಹಾಗೂ ಏಳು ಮಂದಿ ಸದಸ್ಯರನ್ನು ಹೊಂದಿರುತ್ತದೆ.  ಸರಸ್ವತಿ ವಂದನೆಯೊಂದಿಗೆ ಪ್ರಾರಂಭವಾಗುವ ಶಾಲಾ ದಿನಚರಿಯ ಭಗವದ್ಗೀತೆ, ಶ್ಲೋಕ, ನಿತ್ಯಪಂಚಾಂಗ, ದೇಶಭಕ್ತಿಗೀತೆ, ಓಂಕಾರ, ಭೋಜನ ಮಂತ್ರ, ಐಕ್ಯಮಂತ್ರ ಮತ್ತು ರಾಷ್ಟ್ರಗೀತೆಯೊಂದಿಗೆ ಸಂಪನ್ನಗೊಂಡಿದೆ. ಹಿಂದೂ ಸಂಸ್ಕೃತಿಗಳ ಪ್ರತೀಕವಾದ ಕೃಷ್ಣಾ ಜನ್ನಾಷ್ಟಮಿ, ರಕ್ಷಾಬಂಧನ, ಶಾರದಾಪೂಜೆ, ಗುರುಪೂರ್ಣಿಮಾ, ಮಕರಸಂಕ್ರಾಂತಿ ಮುಂತಾದ ಹಬ್ಬಗಳೊಂದಿಗೆ ರಾಷ್ಟ್ರೀಯ ಹಬ್ಬ, ದೇಶಭಕ್ತರ ಜನ್ಮದಿನಾಚರಣೆ, ರಾಮಾಯಣ, ಮಹಾಭಾರತದಂತಹ ಮಹಾನ್ ಗ್ರಂಥಗಳ ಪರಿಚಯ ಹಾಗೂ ಪರೀಕ್ಷೆಗಳು ಜೀವನದ ಮೌಲ್ಯವನ್ನು ಮೂಡಿಸುವಲ್ಲಿ ಪೂರಕವಾಗಿವೆ.

ಪಠ್ಯಪೂರಕ ಶಾಲಾ ಚಟುವಟಿಕೆಯ ಅಂಗವಾಗಿ ಸಂಗೀತ, ಭರತನಾಟ್ಯ,ಯಕ್ಷಗಾನ,ಕರಕುಶಲಕಲೆ,ಚಿತ್ರಕಲೆ,ಕರಾಟೆ,ವೇದಗಣಿತ ಮುಂತಾದ ತರಗತಿಗಳು ನಡೆಯುತ್ತಿರುವುದು ವಿದ್ಯಾರ್ಥಿಯ ಸರ್ವಾಂಗೀಣ ಅಭಿವೃದ್ಧಿಯ ದೃಷ್ಟಿಯಿಂದಾಗಿದೆ. ಕನ್ನಡ ಮಾಧ್ಯಮವಾದರೂ ಇಂಗ್ಲಿಷ್ ಸಂವಹನಕ್ಕೆ ಆದ್ಯತೆ ನೀಡಿ ಉಭಯ ಹಂತಗಳ ಬೆಳವಣಿಗೆ ಹಾಗೂ ಕಂಪ್ಯೂಟರ್ ಶಿಕ್ಷಣವು ಪ್ರಸುತ್ತ ವಿದ್ಯಮಾನಗಳ ಅಭಿವೃದ್ಧಿಗಳಿಗೆ ಮಾಹಿತಿಗೆ ಕೈ ಜೋಡಿಸಿದಂತೆ ಮುನ್ನಡೆಯಲು ಸಹಕಾರಿಯಾಗಿದೆ. ‘ನನ್ನ ಮಗುವಿನ ಶಾಲೆ ನನ್ನದು’ ಎಂಬ ದೃಷ್ಟಿಯಿಂದ ಸದಾ ಕಳಿಕಳಿಯ ಸಹಕಾರ ತೋರುತ್ತಿರುವ ಪೋಷಕರು ಶಾಲಾ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಶ್ಲಾಘನೀಯವಾಗಿದೆ. ಶಾಲೆಯಲ್ಲಿ ಚಿಗುರುತ್ತಿರುವ ಯುವ ಮನಸ್ಸುಗಳು ಶಾಲೆಯ ಶಿಸ್ತು, ಸ್ಚಶಿಸ್ತು ನಿಯಮಗಳಿಗೆ ಬದ್ಧರಾಗಿದ್ದು ಪಠ್ಯಪೂರಕ ಕ್ಷೇತ್ರಗಳಲ್ಲಿ ತಾಲೂಕು, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲೂ ಶಾಲೆಯ ಕೀರ್ತಿಯನ್ನು ಮೆರೆದಿದ್ದಾರೆ.

ಒಟ್ಟಾಗಿ ಎಲ್ಲರ ಆಸಕ್ತಿ ಪರಿಶ್ರಮದ ಫಲವಾಗಿ ಏಳು ವಿದ್ಯಾರ್ಥಿಗಳಿಂದ ಆರಂಭವಾದ ಈ ವಿದ್ಯಾದೇಗುಲವು ಪ್ರಗತಿಯ ಹೊಸ ಮಜಲುಗಳನ್ನು ತಲುಪಿ ಸ್ವಾಮಿ ವಿವೇಕಾನಂದ ವಾಣಿಯಂತೆ ‘ಶಿಕ್ಷಣವು ಮಾನವತೆಯ ನಿರ್ಮಾಣಕ್ಕಾಗಿ’ – ಎಂಬ ಧ್ಯೇಯದೊಂದಿಗೆ ಭಾರತೀಯ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ವಿದ್ಯಾರ್ಥಿಗಳು ಈ ಶಾಲೆಯಿಂದ ಮೂಡಿಬರುವಂತಾಗಲಿ ಎಂಬುದು ಎಲ್ಲರ ಆಶಯ.

vc-new

vc-new-1

ವಿದ್ಯಾಲಯದ ಪ್ರಾರ್ಥನೆ

20150919_092214

School-Prayer

20150919_092229

20150919_092725

ಸರಸ್ವತೀ ವಂದನೆ

ಯಾ ಕುಂದೇಂದುತುಷಾರಹಾರಧವಲಾ ಯಾ ಶುಭ್ರವಸ್ತ್ರಾನ್ವಿತಾ|
ಯಾ ವೀಣಾವರದಂಡಮಂಡಿತಕರಾ ಯಾ ಶ್ವೇತಪದ್ಮಾಸನಾ|
ಯಾ ಬ್ರಹ್ಮಾಚ್ಯುತ ಶಂಕರ ಪ್ರಭೃತಿರ್ದೇವೈಃ ಸದಾ ವಂದಿತಾ|
ಶುಕ್ಲಾಂ ಬ್ರಹ್ಮ ವಿಚಾರಸಾರ ಪರಮಾಮಾದ್ಯಾಂಜಗದ್ ವ್ಯಾಪಿನೀಂ
ವೀಣಾಪುಸ್ತಕಧಾರಿಣೀಂ ಅಭಯದಾಂ ಜಾಡ್ಯಾಂಧಕಾರಾಪಹಾಂ|
ಹಸ್ತೇ ಸ್ಫಾಟಿಕಮಾಲಿಕಾಂ ವಿದಧತೀಂ ಪದ್ಮಾಸನೇ ಸಂಸ್ಥಿತಾಂ
ವಂದೇತಾಂ ಪರಮೇಶ್ವರೀಂ ಭಗವತೀಂ ಬುದ್ಧಿಪ್ರದಾಂ ಶಾರದಾಮ್||

ಮಲ್ಲಿಗೆ, ಚಂದ್ರ ಮತ್ತು ಹಿಮಮಣಿಯ ಹಾರಗಳಂತೆ ಶ್ವೇತವರ್ಣದವಳಾದ, ಬಿಳಿವಸ್ತ್ರವನ್ನು ಧರಿಸಿರುವ, ವೀಣೆಯ ಶ್ರೇಷ್ಠವಾದದಂಡದಿಂದಅಲಂಕೃತವಾದ ಕೈಗಳುಳ್ಳ, ಬಿಳಿಯ ಕಮಲದ ಮೇಲೆ ಕುಳಿತಿರುವ, ಬ್ರಹ್ಮ, ವಿಷ್ಣು, ಮಹೇಶ್ವರ ಮುಂತಾದ ದೇವತೆಗಳಿಂದ ಯಾವಾಗಲೂ ವಂದಿತಳಾದ ವಿದ್ಯಾಧಿ ದೇವತೆಯಾದ ಸರಸ್ವತಿಯು ನನ್ನಲ್ಲಿರುವ ಆಲಸ್ಯವನ್ನು ಸಂಪೂರ್ಣದೂರ ಮಾಡುತ್ತ ನನ್ನನ್ನುಕಾಪಾಡಲಿ.

ಶ್ವೇತವರ್ಣೆಯಾದ, ಬ್ರಹ್ಮವಿಚಾರದ ಪರಮಸಾರಳಾದ, ಆದಿಯಿಂದಲೂಜಗತ್ತನ್ನು ವ್ಯಾಪಿಸಿರುವ, ವೀಣೆ, ಪುಸ್ತಕಗಳನ್ನು ಹಿಡಿದಿರುವ, ಅಭಯಮುದ್ರೆಯನ್ನು ಧರಿಸುವ, ಆಲಸ್ಯ ಮತುಅಜ್ಞಾನವನ್ನುದುರ ಮಾಡುವ , ಮತ್ತೊಂದು ಕೈಯಲ್ಲಿ ಸ್ಪಟಿಕದ ಮಾಲೆಯನ್ನು ಧರಿಸುವ, ಪದ್ಮಾಸನದಲ್ಲಿ ಕುಳಿತಿರುವ, ಪರಮೈಶ್ವರ್ಯವನ್ನು ಹೊಂದಿರುವ, ಬುದ್ಧಿಯನ್ನು ದಯಪಾಲಿಸುವ ಭಗವತಿಯಾದ ಶಾರದೆಗೆ ವಂದಿಸುವೆ.

ಶಾರದಾಗಾನ

ಹೇ ಹಂಸವಾಹಿನಿ ಜ್ಞಾನದಾಯಿನೀ ಅಂಬ ವಿಮಲಮತಿದೇ ಅಂಬ ವಿಮಲಮತಿದೇ |
ಜಗಶಿರ ಮೋರ್ ಬನಾಯೇ ಭಾರತ ವಹ ಬಲ ವಿಕ್ರಮದೇ ಅಂಬ ವಿಮಲತಿದೇ ||ಪ||
ಸಾಹಸ ಶೀಲ ಹೃದಯ ಮೇ ಭರದೇಜೀವನತ್ಯಾಗ ತಪೋಮಯ ಕರದೇ |
ಸಂಯಮ ಸತ್ಯ ಸ್ನೇಹಕಾ ವರದೇ ಸ್ವಾಭಿಮಾನ ಭರದೇ ಹೇ ಹಂಸವಾಹಿನೀ
ಲವಕುಶ ಧ್ರುವ ಪ್ರಹ್ಲಾದ ಬನೇ ಹಮ್ ಮಾನವತಾ ಕಾ ತ್ರಾಸ ಹರೇ ಹಮ್ |
ಸೀತಾ ಸಾವಿತ್ರೀದುರ್ಗಾ ಮಾ ಫಿರ್‌ಘರ್‌ಘರ್ ಭರ್‌ದೇ ಹೇ ಹಂಸವಾಹಿನೀ ||

ಹಂಸವಾಹನೆ, ಜ್ಞಾನದಾಯಿನಿ ತಾಯಿ ಶಾರದೆ, ನನಗೆ ಒಳ್ಳೆಯ ಬುದ್ಧಿ ನೀಡು, ಜಗತ್ತಿನಲ್ಲಿ ಭಾರತ ಮುಕುಟಪ್ರಾಯವಾಗುವಂತೆ ಮಾಡಲು ಅವಶ್ಯವಾದ ಬಲ, ಪರಾಕ್ರಮಗಳನ್ನು ನೀಡು. ನನ್ನ ಹೃದಯದಲ್ಲಿ ಸಾಹಸ, ಶೀಲಗಳನ್ನು ತುಂಬು. ನನ್ನ ಬಾಳನ್ನು ತ್ಯಾಗ ಮತ್ತು ತಪೋಮಯಗೊಳಿಸು.ಸಂಯಮ, ಸತ್ಯ, ಸ್ನೇಹಗಳೆಂಬ ವರ ನೀಡಿ ಸ್ವಾಭಿಮಾನವನ್ನು ನನ್ನಲ್ಲಿತುಂಬು. ನಾವು ಲವ ಕುಶ, ಧ್ರುವ, ಪ್ರಹ್ಲಾದರಂತೆ ಆಗೋಣ. ಇಡೀ ಮಾನವತೆಯ ಕಷ್ಟಕಾರ್ಪಣ್ಯಗಳನ್ನು ನಾವು ಹೋಗಲಾಡಿಸೋಣ. ಸೀತೆ, ಸಾವಿತ್ರಿ, ದುರ್ಗೆಯರು ಪುನಃ ಮನೆ ಮನೆಗಳಲ್ಲಿ ನೆಲೆಸುವಂತೆ ಆಗಲಿ.

ಬ್ರಹ್ಮನಾದ
ಧ್ಯಾನ 1 ನಿಮಿಷ (ಬ್ರಹ್ಮನಾದ ವೆಂದರೆ ಓಂಕಾರ)

ಓಂಕಾರಕ್ಕೆ ಇನ್ನೊಂದು ಹೆಸರು ಬ್ರಹ್ಮನಾದ, ಬ್ರಹ್ಮವೆಂದರೆ ಸಕಲ ದೇವತೆಗಳ ಸಮಷ್ಟಿರೂಪ. ವಿವಿಧ ನಂಬಿಕೆಗಳು ಇಲ್ಲಿ ಸಾಮರಸ್ಯದಿಂದ ಸೇರ್ಪಡೆಯಾಗುತ್ತವೆ. ಯಾವುದೇ ದೇವರನ್ನು ನಾವು ಪೂಜಿಸುತ್ತಿದ್ದರೂ ಅವೆಲ್ಲವೂ ಓಂಕಾರದಲ್ಲಿ ಲೀನವಾಗುತ್ತವೆ. ಅ+ಉ+ಮ ಈ ಮೂರು ಅಕ್ಷರಗಳ ಸಮಷ್ಟಿರೂಪವೇ ಓಂಕಾರ. ಬ್ರಹ್ಮ, ವಿಷ್ಣು, ಮಹೇಶ್ವರರೆಂಬ ತ್ರಿಮೂರ್ತಿಗಳ ಪ್ರತೀಕ ಈ ಅಕ್ಷರಗಳು. ಸತ್ತ್ವ, ರಜ, ತಮಸ್ಸುಗಳ ಪ್ರತೀಕವೂ ಇವಾಗಿವೆ. ಜ್ಞಾನಶಕ್ತಿ, ಇಚ್ಛಾಶಕ್ತಿ ಮತ್ತು ಕ್ರಿಯಾಶಕ್ತಿಗಳು ಇವುಗಳ ಧ್ವನಿಗಳಾಗಿವೆ. ಋಕ್, ಯುಜುಸ್ ಮತ್ತು ಸಾಮಗಳೆಂಬ ಮೂರು ವೇದಗಳು ಇವುಗಳಲ್ಲಿ ಅಡಗಿವೆ. ಓಂಕಾರಧ್ಯಾನವುದೇಹ-ಮನ- ಬುದ್ಧಿಗಳ ಮೇಲೆ ಅದ್ಭುತ ಪರಿಣಾಮವನ್ನು ಬೀರುತ್ತಿರುವುದು ವೈಜ್ಞಾನಿಕ ಪ್ರಯೋಗಗಳಿಂದಲೂ ಸಿದ್ಧವಾಗಿದೆ.

ಗಾಯತ್ರೀ ಮಂತ್ರ

ಓಂ ಭೂರ್ಭುವಃಸ್ವಃತತ್ಸವಿತುರ್ವರೇಣ್ಯಂ|
ಭರ್ಗೋದೇವಸ್ಯ ಧೀಮಹಿ| ಧಿಯೋ ಯೋ ನಃ ಪ್ರಚೋದಯಾತ್|

ಇದಕ್ಕೆ ವ್ಯಾಹೃತಿಯೆಂದು ಹೆಸರು.ಇದು ಪೃಥ್ವಿ, ಅಂತರಿಕ್ಷ ಮತ್ತು ಆದಿತ್ಯಲೋಕಗಳೆಂಬ ವಿಶ್ವದ ಮುಖ್ಯ ಮೂರು ಹಂತಗಳನ್ನು ಸೂಚಿಸುತ್ತದೆ. ಗಾಯತ್ರೀಮಂತ್ರ ದ್ರಷ್ಟಾರ ವಿಶ್ವಾಮಿತ್ರ ಮಹರ್ಷಿಗಳು. ಈ ಮಂತ್ರವು ಗಾಯತ್ರೀ ಛಂದಸ್ಸಿನಲ್ಲಿದೆ. ಈ ಮಂತ್ರದ ಆರಾಧ್ಯದೇವತೆ ಸವಿತೃ. ಅಂದರೆ ಪರಮಾತ್ಮನ ಪ್ರತೀಕನಾದ ಸೂರ್ಯ.

ದಿವ್ಯಜ್ಯೋತಿ ಇಲ್ಲಿ ಆರಾಧಕನಿಗೆ ಧ್ಯೇಯವಸ್ತು. ಅದೇ ಶ್ರೇಷ್ಠವಾದದ್ದು. ಅತಿ ಶ್ರೇಷ್ಠವಾದದ್ದು. ’ಭರ್ಗ’ವೆಂದರೆ ಕಾಂತಿಯೆಂದರ್ಥ. ಇದು ಸವಿತೃವಿನ ಕಾಂತಿ. ಸವಿತೃವುದೇವ ನಾಗಿದ್ದಾನೆ. ದೇವ ವೆಂದರೆ ಬೆಳಕನ್ನು ಸೂಚಿಸುತ್ತದೆ. ಇಂತಹ ಎಲ್ಲ ವಿಶೇಷತೆಗಳನ್ನು ಹೊಂದಿರುವ ಸವಿತೃವನ್ನು ನಾನು ಧ್ಯಾನಿಸುತ್ತೇನೆ ಎಂದು ಸಾಧಕನು ಭಾವಿಸುತ್ತಾನೆ. ಇಂತಹ ಧ್ಯಾನದ ಪರಿಣಾಮವಾಗಿ ಈ ಸಾಧಕನು ತನ್ನಲ್ಲಿ ಧೀಃಶಕ್ತಿಯ ವಿಕಸಿತವಾಗಲೆಂದು ಹಂಬಲಿಸುತ್ತಾನೆ. ಸವಿತೃವಿನ ಉಪಾಸನೆಯಿಂದ ಧೀಃಶಕ್ತಿಯ ವಿಕಾಸವಾದಂತೆಲ್ಲ ವ್ಯಕ್ತಿಯು ಆಧ್ಯಾತ್ಮಿಕವಾಗಿ ಎರಡನೇ ಜನ್ಮದ ಕಡೆಗೆ ಹೋಗುತ್ತಾನೆ. ಗಾಯತ್ರೀ ವಿಶ್ವಮಂತ್ರ. ಇದು ಅನಂತತೆಯ ಗಾನವೆಂದು ತಿಳಿದವರು ಕೊಂಡಾಡಿದ್ದಾರೆ. ’ಧೀಃ’ ಎಂದರೆ ಎಲ್ಲ ಮಾನವರಲ್ಲೂ ಇರಲೇಬೇಕಾದ ಭಾವಬಲ ಮತ್ತು ಬುದ್ಧಿಬಲಗಳು. ಇನ್ನೊಂದು ರೀತಿಯಲ್ಲಿ ಇವುಗಳನ್ನೇ ಶ್ರದ್ಧಾ, ಮೇಧಾ, ಪ್ರಜ್ಞೆಗಳೆಂದು ಹೇಳುತ್ತಾರೆ. ಇವುಗಳ ವಿಕಾಸವೇ ವಿದ್ಯೆಯ ಗುರಿ. ಇವುಗಳ ವಿಕಾಸದಿಂದ ಜೈವಿಕ ಹುಟ್ಟನ್ನು ಪಡೆದ ಮಾನವನಿಗೆ ’ಆಧ್ಯಾತ್ಮಜನ್ಮ’ ದೊರೆಯುತ್ತದೆ.

ಇಂತಹ ಪರಿಪೂರ್ಣತೆಯ ಪಯಣ ಆರಂಭವಾಗುತ್ತಲೇ ಹುಟ್ಟಿನಿಂದ ಮನೆಮಾಡಿರುವ ಪಶುಪ್ರವೃತ್ತಿ ದೂರವಾಗುತ್ತ ಹೋಗುತ್ತದೆ. ಗಾಯತ್ರೀ ಮಂತ್ರಕ್ಕೆ ಇಂತಹ ಶಕ್ತಿಯಿದೆಯೆಂಬುದು ಪ್ರಯೋಗಸಿದ್ಧವಾದ ವಿಷಯ. ಈ ಮಂತ್ರವನ್ನು ಕಂಡುಹಿಡಿದ ಮಹರ್ಹಿ ವಿಶ್ವಾಮಿತ್ರರ ಜೀವನ ವಿಕಾಸದ ದಾರಿಯೇ ಇದಕ್ಕೆ ಸಾಕ್ಷಿ. ಗಾನ ಮಾಡುವವನನ್ನು ಕಾಪಾಡುವ ಮಂತ್ರ (ಗಾಯಂತಂ ತ್ರಾತಿ) ಗಾಯತ್ರೀ ಎಂಬುದಾಗಿ ತಜ್ಞರು ಹೇಳುವುದುಂಟು. ಬಲ್ಲವರಿಂದ ಇದರ ಉಚ್ಚಾರಣೆ ಮತ್ತು ಸ್ವರಗಳನ್ನು ಅರಿತು, ಅಭ್ಯಸಿಸಿ, ಇದನ್ನು ಋಷಿಗಳು ನಮಗಾಗಿ ನೀಡಿರುವ ವರಮಂತ್ರವೆಂದು ಭಾವಿಸಿ ಜಪಿಸೋಣ.

ರಾಷ್ಟ್ರವಂದನ

ರತ್ನಾಕರಾಧೌತಪದಾಂ ಹಿಮಾಲಯ ಕಿರೀಟಿನೀಂ |
ಬ್ರಹ್ಮರಾಜರ್ಷಿರತ್ನಾಢ್ಯಾಂ ವಂದೇ ಭಾರತಮಾತರಂ||

ಸಮುದ್ರದ ನೀರಿನಿಂದ ಯಾರ ಕಾಲು ತೊಳೆಯಲ್ಪಡುತ್ತದೋ, ಇನ್ನೊಂದೆಡೆ ಹಿಮಾಲಯ ಶಿಖರಗಳನ್ನೇ ಕಿರೀಟವಾಗಿ ಧರಿಸಿರುವ ಮತ್ತು ಬ್ರಹ್ಮರ್ಷಿ, ರಾಜರ್ಷಿಗಳೆಂಬ ರತ್ನಗಳಿಂದ ಶೋಭಾಯಮಾನಳಾಗಿರುವ ಭಾರತಮಾತೆಗೆ ವಂದನೆಗಳು.

ಶಾಂತಿಮಂತ್ರ

ಓಂ ದ್ಯೌಃ ಶಾಂತಿಃ ಅಂತರಿಕ್ಷ ಃ ಶಾಂತಿಃ
ಪೃಥಿವೀ ಶಾಂತಿಃ ಆಪಃ ಶಾಂತಿಃ ಓಷಧಯಃ ಶಾಂತಿಃ
ವನಸ್ಪತಯಃ ಶಾಂತಿಃ ವಿಶ್ವೇದೇವಾಃ ಶಾಂತಿಃ
ಬ್ರಹ್ಮಶಾಂತಿಃ ಸರ್ವಂ ಶಾಂತಿಃ
ಶಾಂತಿರೇವ ಶಾಂತಿಃ ಸಾಮಾ ಶಾಂತಿರೇಧಿ
ಓಂ ಶಾಂತಿಃ ಶಾಂತಿಃ ಶಾಂತಿಃ

ವಿಶ್ವಶಾಂತಿಯ ಹಂಬಲ ಹೊತ್ತಿರುವವರು ಋಷಿಗಳು. ಅವರಿಗೆ ಇಡೀ ಬ್ರಹ್ಮಾಂಡವೇ ಮನೆ. ಸಕಲ ಜೀವರಾಶಿಯು ಅವರಿಗೆತಮ್ಮ ಮನೆಯ ಸದಸ್ಯರಂತೆ. ಅವರು ಬ್ರಹ್ಮಾಂಡವನ್ನು ಮೂರು ಸ್ತರಗಳಲ್ಲಿ ವಿಂಗಡಿಸಿ ತೋರಿದ್ದಾರೆ. ಮಾನವ ಮತ್ತು ಇತರ ಜೀವರಾಶಿಯ ನೆಲೆಯಾದ ಭೂಮಿ ಒಂದು ಸ್ತರವಾದರೆ. ಭೂಮಿಯ ಮೇಲಿನ ವಾಯು ಸಂಚಾರದ ಜಾಗಕ್ಕೆ ಅಂತರಿಕ್ಷವೆಂದು ಹೆಸರು. ಅಲ್ಲಿಂದ ಆಚೆ ವಿಶಾಲವಾದ ಗಗನವು ದ್ಯುಲೋಕವೆನಿಸಿಕೊಳ್ಳುತ್ತದೆ. ಅದಕ್ಕೆ ಆದಿತ್ಯಲೋಕವೆಂದು ಹೆಸರು. ಇಲ್ಲಿ ಅನೇಕ ಸಹಸ್ರ ಆದಿತ್ಯರು ಇದ್ದಾರೆಂದು ತಿಳಿದು ಬರುತ್ತದೆ. ಈ ಮೂರು ಸ್ತರಗಳಲ್ಲಿ ಮಣ್ಣು, ನೀರು, ಅಗ್ನಿ ಮತ್ತು ವಾಯುವಿನ ಗುಣಗಳನ್ನು ಮುಖ್ಯವಾಗಿ ಹೊಂದಿರುವ ಅನೇಕ ಲೋಕಗಳಿವೆ. ಲೋಕಗಳಲ್ಲಿ ನೆಲೆನಿಂತಿರುವ ಜೀವಕೋಟಿಗೆ ಶಾಂತಿಯ ಹಾರೈಕೆ ಈ ಮಂತ್ರದಲ್ಲಿದೆ.

ಪೃಥ್ವಿ ಲೋಕದಲ್ಲಿ ಜೀವಲೋಕಕ್ಕೆ ಉಪಕಾರ ನೀಡುವ ವಿವಿಧ ವನಸ್ಪತಿಗಳಿಗೆ ಶಾಂತಿಯಾಗಲಿ. ವಿಶ್ವದಲ್ಲಿರುವ ದೈವೀಶಕ್ತಿಗಳಿಗೆ ಶಾಂತಿ. ಜಗತ್ತಿನಲ್ಲಿರುವ ಸಾತ್ತ್ವಿಕ ಶಕ್ತಿಗೆ ಶಾಂತಿ. ಜಗತ್ತಿನಲ್ಲಿರುವ ಸಾತ್ತ್ವಿಕ ಶಕ್ತಿಗೆ ಶಾಂತಿ. ಸರ್ವರಿಗೂ ಶಾಂತಿ. ಇಂತಹ ಶಾಂತಿ ನಮ್ಮೆಲ್ಲರಲ್ಲೂ ನೆಲೆಸಲಿ.

ಆದಿಭೌತಿಕ, ಆದಿದೈವಿಕ ಹಾಗೂ ಆಧ್ಯಾತ್ಮಿಕ ಜಗತ್ತುಗಳಲ್ಲಿ ಶಾಂತಿ ನೆಲೆಸಲಿ. ಭೌತಿಕ, ದೈವಿಕ ಹಾಗೂ ಆಧ್ಯಾತ್ಮಿಕ ಕಾರಣಗಳಿಂದ ಮೂರು ವಿಧದ ತಾಪಗಳುಂಟಾಗುತ್ತಿರುತ್ತವೆ. ಈ ತಾಪಗಳಿಂದ ನಮ್ಮೆಲ್ಲರನ್ನೂ ಪರಮಾತ್ಮನು ರಕ್ಷಿಸಲಿ.

ಓಂ ಶಾಂತಿಃ ಶಾಂತಿಃ ಶಾಂತಿ ||

ಆಡಳಿತ ಮಂಡಳಿ

ಆಡಳಿತ ಮಂಡಳಿ 2020-21 ಶ್ರೀ ರಮೇಶ್ಚಂದ್ರ ಅಧ್ಯಕ್ಷರು ಶ್ರೀ ವಸಂತ ಸುವರ್ಣ ಸಂಚಾಲಕರು ಶ್ರೀ ಅಶೋಕ್ ಕುಂಬ್ಲೆ ಖಜಾಂಚಿ ——————————————————————————————————————————————————————- ಡಾ. ಆಶಾ ಸದಸ್ಯರು ಶ್ರೀ ಈಶ್ವರ ನಾಯ್ಕ ಎಸ್ ಸದಸ್ಯರು ಶ್ರೀ ರಘುನಾಥ್ ಬಿ ಸದಸ್ಯರು ಶ್ರೀ ತಿರುಮಲೇಶ್ವರ ಭಟ್ ಸದಸ್ಯರು ಶ್ರೀಮತಿ ವೀಣಾ ನಾಗೇಶ್‌ತಂತ್ರಿ ಸದಸ್ಯರು ಶ್ರೀ ಸುಬ್ರಹ್ಮಣ್ಯ ಭಟ್ ಬಿ. ಸದಸ್ಯರು ——————————————————————————————————————————————————————- ವಸಂತ ಮಾಧವ ನಿರ್ದೇಶಕರು ವಿವೇಕಾನಂದ ವಿದ್ಯಾವರ್ಧಕ ಸಂಘ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಅಧ್ಯಕ್ಷರು ವಿವೇಕಾನಂದ ವಿದ್ಯಾವರ್ಧಕ ಸಂಘ […]

ಧ್ಯೇಯೋದ್ದೇಶಗಳು

ಶಾಲಾ ಧ್ಯೇಯ : ಧಿಯೋ ಯೋ ನಃ ಪ್ರಚೋದಯತ್ ಭಾರತೀಯ ಸಂಸ್ಕೃತಿಯನ್ನೊಳಗೊಂಡ ಸರಳ, ಆಧುನಿಕ ಶಿಕ್ಷಣವನ್ನು ಒದಗಿಸುವುದು. ವಿದ್ಯಾರ್ಥಿಗಳಲ್ಲಿ ನಿಸ್ವಾರ್ಥ ಶ್ರದ್ಧೆ, ಭಕ್ತಿ, ರಾಷ್ಟ್ರಸೇವೆಯ ಚೈತನ್ಯವನ್ನು ಮೂಡಿಸುವುದು. ವಿದ್ಯಾರ್ಥಿಗಳಲ್ಲಿ ಐಕ್ಯತೆ, ಒಳ್ಳೆಯ ನಡತೆ, ಹೊಂದಾಣಿಕೆ, ಸದಭಿರುಚಿಗಳ ಬೆಳವಣಿಗೆ ಮಾರ್ಗದರ್ಶನ ನೀಡುವುದು.

Highslide for Wordpress Plugin