‘ಸಾನಿಧ್ಯ’ ವಿಭಾಗಶಃ – ಪೋಷಕರ ಸಭೆ

ವಿದ್ಯಾರ್ಥಿಗಳಿಗೆ ವಿಚಾರಗಳನ್ನು ಕೊಡಬೆಡಿ, ವಿಚಾರ ಮಾಡುವುದನ್ನು ಕಲಿಸಬೇಕಿದೆ. ವಿದ್ಯಾರ್ಥಿಯ ವಿವೇಕವನ್ನು ಜಾಗೃತಗೊಳಿಸಿ ಸ್ವತಂತ್ರವಾಗಿಸಬೇಕಾಗಿದೆ. ಈ ಪ್ರಕ್ರಿಯೆಯಲ್ಲಿ ಶಿಕ್ಷಕರಷ್ಟೇ ಪಾತ್ರ ಪೋಷಕರದ್ದಾಗಿದೆ ಎಂದು ಶಾಲಾ ಮುಖ್ಯಗುರುಗಳಾದ ಶ್ರೀಮತಿ ಆಶಾ ಬೆಳ್ಳಾರೆ ಪೋಷಕರ ಸಭೆಯ ಸಂವಾದವನ್ನುದ್ದೇಶಿಸಿ ಮಾತನಾಡಿದರು. 2025-26ನೇ ಶೈಕ್ಷಣಿಕ ಸಾಲಿನ ಪ್ರಾರಂಭದ ವಿಭಾಗಶಃ ಪೋಷಕರ ಸಭೆಯಲ್ಲಿ ವಾರ್ಷಿಕ ಯೋಜನೆಗಳನ್ನು ತಿಳಿಸುತ್ತಾ, ಶಾಲೆ- ಮನೆಯ ನಡುವಿನ ಸಹಸಂಬಂಧದ ಮಹತ್ವವು ಮಗುವಿನ ಪರಿಣಾಮಕಾರಿ ಕಲಿಕೆಗೆ ಅತೀ ಅಗತ್ಯ ಎಂದು ತಿಳಿಸಲಾಯಿತು.

                                                

ಪೋಷಕರ ಸಭೆಯು ಪೋಷಕರ ಹಾಗೂ ಶಿಕ್ಷಕರ ಕಲಿಕೆಗೆ ಅತೀ ಅಗತ್ಯವಾದ ಕಲಿಕಾ ವೇದಿಕೆಯಾಗಿರುವ ಬಗ್ಗೆ ಪೋಷಕರಾದ ರಘುರಾಜ್ ಉಬರಡ್ಕ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಸಭೆಯ ಸಂವಾದ ಭಾಗದಲ್ಲಿಪೋಷಕರು ಪ್ರಶ್ನೆ ಕೇಳುತ್ತಾ, ಸಲಹೆಗಳನ್ನು ನೀಡುತ್ತಾ ಸಕ್ರಿಯರಾಗಿ ಭಾಗವಹಿಸಿರುವುದು ಪರಿಣಾಮಕಾರಿ ಪೋಷಕತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಶಾಲಾ ಅಧ್ಯಕ್ಷರಾದ ರಮೇಶ್ಚಂದ್ರ ಎಂ ಅವರು ತಿಳಿಸಿದರು. ಪ್ರತೀ ವಿಭಾಗಗಳ ವಿಷಯಾಧಾರಿತ ಶಿಕ್ಷಕರ ಪರಿಚಯವನ್ನು ಮಾಡಲಾಯಿತು. ಅನಂತರ ಶಾಲಾ ಶಿಕ್ಷಕ-ರಕ್ಷಕ ಸಮಿತಿ, ಅನ್ನಪೂರ್ಣಾ ಸಮಿತಿ, ಮಾತೃಭಾರತಿ ಸಮಿತಿಗಳಿಗೆ ಸದಸ್ಯರ ಆಯ್ಕೆ ನಡೆಯಿತು.

Highslide for Wordpress Plugin