ದಾಖಲಾತಿ

ದಾಖಲಾತಿ ಕ್ರಮ:-

  • ಮೇ 30 ಕ್ಕೆ 5 ವರ್ಷ 10 ತಿಂಗಳಾದಂತಹ ಮಗುವನ್ನು 1 ನೇ ತರಗತಿಗೆ ನಿಯಮ ಪ್ರಕಾರ ದಾಖಲಾತಿ ಮಾಡಿಕೊಳ್ಳುವುದು. ವಿದ್ಯಾರ್ಥಿಯ ಹೆತ್ತವರು ಅಥವಾ ಪೋಷಕರು ಮಗುವಿನ ಕಲಿಕೆ, ಹಾಜರಾತಿ ಮತ್ತು ಶಾಲೆಯ ಹೊರಗಿನ ಮಗುವಿನ ಗುಣನಡತೆ ಬಗ್ಗೆ ಜವಾಬ್ದಾರರಾಗಿರಬೇಕು.
  • ದಾಖಲಾತಿ ಸಮಯದಲ್ಲಿ ಪೋಷಕರು/ಹೆತ್ತವರು ಅರ್ಜಿ ಫಾರಂನ್ನು ಸರಿಯಾಗಿ ಭರ್ತಿಮಾಡಿ ಜೊತೆಗೆ ಜನನ ದಾಖಲೆ ಪತ್ರವನ್ನು ಲಗತ್ತೀಕರಿಸಬೇಕು.
  • ಇತರ ಶಾಲೆಯಿಂದ ಬರುವ ವಿದ್ಯಾರ್ಥಿಗಳು ವರ್ಗಾವಣೆ ಪ್ರಮಾಣ ಪತ್ರದ ಮೂಲಪ್ರತಿಯನ್ನು ನೀಡಬೇಕು.
  • ಹೊರ ತಾಲೂಕಿನಿಂದ ಬರುವಂತಹ ವಿದ್ಯಾರ್ಥಿಗಳು ವರ್ಗಾವಣೆ ಪ್ರಮಾಣ ಪತ್ರಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಹಿ ಹಾಗೂ ಮೊಹರನ್ನು ಹಾಕಿಸಿರಬೇಕು.

ಮಾಹಿತಿ ಕೈಪಿಡಿ

ಶಾಲಾ ಧ್ಯೇಯ: ಧಿಯೋ ಯೋ ನಃ ಪ್ರಚೋದಯಾತ್ ಆಶಯ: ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ 1993 ರಲ್ಲಿ ಆರಂಭವಾದ ವಿದ್ಯಾದೇಗುಲವೇ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ. ಇಲ್ಲಿ ಬಾಲಕರು ಮತ್ತು ಬಾಲಕಿಯರಿಗೆ ಒಟ್ಟಾಗಿ ಸಹಶಿಕ್ಷಣವನ್ನು ನೀಡಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಕಲಿಕಾ ಉತ್ಸಾಹವನ್ನು ತುಂಬುವುದು ನಮ್ಮ ಸಂಸ್ಥೆಯ ಮುಖ್ಯ ಗುರಿ. ನಮ್ಮ ಪ್ರಾಚೀನ ಭಾರತೀಯ ಸಂಸ್ಕೃತಿಯ ಬಗ್ಗೆ ಶ್ರದ್ಧೆ, ವಿಶ್ವಾಸ, ಶಿಸ್ತುಬದ್ಧ ನಡವಳಿಕೆಯಿಲ್ಲದೆ ಇಂದಿನ ಅಗತ್ಯವಾದ ಮಾತೃಭೂಮಿಯ ಬಗೆಗೆ ಯುವಜನಾಂಗದಲ್ಲಿ ನಿಷ್ಠೆ ಮತ್ತು ಕರ್ತವ್ಯಪ್ರಜ್ಞೆಯನ್ನು ಮೂಡಿಸುವುದು, ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣವನ್ನು […]

ಶಾಲಾ ನಿಯಮಗಳು

ಅನುಶಾಸನ:- ೧. ಎಲ್ಲಾ ಮಕ್ಕಳು ಬೆಳಗ್ಗೆ ಗಂಟೆ ೯.೦೦ಕ್ಕೆ ಶಾಲೆಯಲ್ಲಿ ಇರಬೇಕು. ೨. ಶಾಲಾ ಸಂಕೀರ್ಣದಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಶಿಕ್ಷಕ/ಶಿಕ್ಷಕೇತರರೊಂದಿಗೆ ವಿದ್ಯಾರ್ಥಿಗಳು ಸೌಜನ್ಯದಿಂದ ವರ್ತಿಸಬೇಕು. ೩. ಪ್ರತಿಯೊಬ್ಬ ವಿದ್ಯಾರ್ಥಿಯು ಸೌಜನ್ಯ, ನಮ್ರತೆ,ಶಿಸ್ತು ಮತ್ತು ಉತ್ತಮ ನಡತೆಯನ್ನು ಅಳವಡಿಸಿಕೊಳ್ಳಬೇಕು. ೪. ಅನುಚಿತವಾಗಿ ವರ್ತಿಸುವ ವಿದ್ಯಾರ್ಥಿಗಳ ಬಗ್ಗೆ ಶಿಸ್ತು ಕ್ರಮವನ್ನು ಕೈಗೊಳ್ಳಲಾಗುವುದು. ೫. ವಿದ್ಯಾರ್ಥಿಗಳು ಶಾಲೆಯಲ್ಲಿ ಲಭ್ಯವಿರುವ ಎಲ್ಲಾ ಪಠ್ಯಪೂರಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ೬. ವಾರದ ಎಲ್ಲಾ ದಿನಗಳಲ್ಲಿ ವಿದ್ಯಾರ್ಥಿಗಳು ಗೊತ್ತುಪಡಿಸಿದ ಶುಚಿಯಾದ ಸಮವಸ್ತ್ರವನ್ನು ಧರಿಸಬೇಕು. ಪ್ರಾಥಮಿಕ ಹುಡುಗರು […]

ಪ್ರವೇಶ ಪತ್ರ

Primary School Application Form High School Application Form  

Highslide for Wordpress Plugin