ಪೋಷಕರ  ಆಸಕ್ತಿಗೊಂದು ವೇದಿಕೆಯಾಗಿ-ಪ್ರೇರಣಾ


ಶಾಲಾ ವಾರ್ಷಿಕ ಹಬ್ಬ ಸಾಂಸ್ಕೃತಿಕ ಸಮನ್ವಯದ ಅಂಗವಾಗಿ   ಪೋಷಕರಿಗೆ    ಪ್ರೇರಣಾ – 2026 ಸ್ಪರ್ಧಾಕೂಟವನ್ನು ಏರ್ಪಡಿಸಲಾಗಿತ್ತು. ಇದರಲ್ಲಿ ಚಿತ್ರರಚನೆ, ಕವನ ರಚನೆ, ದೇಶಭಕ್ತಿಗೀತೆ, ಕಸದಿಂದ ರಸ, ಕೇಶವಿನ್ಯಾಸ, ಮೆಹಂದಿ ಹಾಕುವುದು, ರಂಗೋಲಿ, ಭಾಷಣ, ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

                                     

ಶಾಲಾ ಆಡಳಿತ ಸಮಿತಿಯ ಅಧ್ಯಕ್ಷರಾದ ಮುರಳೀಕೃಷ್ಣ ಹಸಂತಡ್ಕರವರು ಶಾಲಾ ಕಾರ್ಯಕ್ರಮಗಳಲ್ಲಿ ಮತ್ತು ಅಭಿವೃದ್ಧಿಯಲ್ಲಿ ಪೋಷಕರು ನೀಡುವ ಸಹಕಾರ ಮತ್ತು ಸಹಭಾಗಿತ್ವ ಮಹತ್ವದ್ದಾಗಿದ್ದು ಪೋಷಕರ ಈ ಉತ್ಸಾಹವು ಮಕ್ಕಳಿಗೆ ಮಾದರಿಯಾಗುತ್ತದೆ ಎಂದು ಹೇಳುತ್ತಾ ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಶುಭ ಹಾರೈಸಿದರು.

ಶಾಲಾ ಸಂಚಾಲಕರಾದ ಸಂಪತ್ ಕುಮಾರ್, ಸದಸ್ಯರಾದ ಶ್ರೀಧರ ತೆಂಕಿಲ, ಶಿಕ್ಷಕ – ರಕ್ಷಕ ಸಂಘದ ಅಧ್ಯಕ್ಷರಾದ ಅಪ್ಪು ಪಾಟಾಳಿ, ಜೊತೆ ಕಾರ್ಯದರ್ಶಿ ರೇಖಾ, ಕೋಶಾಧಿಕಾರಿಗಳಾದ ಪ್ರತಿಭಾ, ಶಾಲಾ ಮುಖ್ಯಗುರುಗಳಾದ ಆಶಾ ಬೆಳ್ಳಾರೆ ಉಪಸ್ಥಿತರಿದ್ದರು. ಅನಂತರ ಪೋಷಕರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಯಿತು.

Highslide for Wordpress Plugin