ಕನ್ನಡ ರಾಜ್ಯೋತ್ಸವ – ಕನ್ನಡ ನಾಡು – ನುಡಿಯ ಸಂಭ್ರಮದಾಚರಣೆ


ಕನ್ನಡ ಭಾಷೆ ಸಮೃದ್ಧ-ಸಂಪನ್ನತೆಯ ಭಾಷೆ. ಕನ್ನಡ ನಾಡಿನ ಏಕತೆಯಲ್ಲಿರುವ ವೈವಿಧ್ಯತೆಯು ನಮಗೆ ಸಾವಿರಾರು ಸಂಗತಿಗಳನ್ನು ವಿಶಾಲಾ ಮನಸ್ಸಿನಿಂದ ಸ್ವೀಕರಿಸುವ ಶಕ್ತಿ ತುಂಬುತ್ತದೆ ಎಂದು ಶಾಲಾ ಸಂಚಾಲಕರಾದ ಶ್ರೀ ವಸಂತ ಸುವರ್ಣ ಹೇಳಿದರು. ಶಾಲೆಯಲ್ಲಿ ಆಚರಿಸಲಾದ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಮಕ್ಕಳಿಗೆ ಕನ್ನಡ ಶಾಲೆಯಲ್ಲಿ ಕಲಿಯುತ್ತಿರುವುದಕ್ಕೆ ಅಭಿನಂದಿಸಿದರು. ದೀಪ ಪ್ರಜ್ವಲಿಸಿ ಮಾತನಾಡಿದ ವಿದುಷಿ ನಯನಾ ರೈ ಅವರು ಕನ್ನಡ ಶಾಲೆಯಲ್ಲಿ ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಅನಂತರ ಶಾಲಾ ವಿದ್ಯಾರ್ಥಿಗಳು ಕನ್ನಡ ನಾಡು – ನುಡಿ ಸಂಸ್ಕೃತಿಯ ಬಗ್ಗೆ ಮಾತನಾಡಿದರು. ನಾಡಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮವು ರಾಷ್ಟ್ರಗೀತೆಯೊಂದಿಗೆ ಸಂಪನ್ನಗೊಂಡಿತು. ಸಾರ್ವಜನಿಕ ಶಿಕ್ಷಣ ಇಲಾಖೆಯವರು ನಡೆಸುವ ಕನ್ನಡ ರಾಜ್ಯೋತ್ಸವದ ಮೆರವಣಿಗೆಯಲ್ಲಿ ಶಾಲಾ ಘೋಷ್ ತಂಡ ಭಾಗವಹಿಸಿತು. ಇವರು ಏರ್ಪಡಿಸಿದ ಛದ್ಮವೇಷ, ಕವನ ರಚನೆ, ಮೆಚ್ಚಿನ ಪುಸ್ತಕದ ಓದು ಮುಂತಾದ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ವಿಜೇತರಾದರು.

Highslide for Wordpress Plugin