
ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ, ಪುತ್ತೂರು, ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು, ಸಮೂಹ ಸಂಪನ್ಮೂಲ ಕೇಂದ್ರ ಪುತ್ತೂರು, ಇವರ ವತಿಯಿಂದ ರಾಮಕೃಷ್ಣ ಪ್ರೌಢಶಾಲೆ ಪುತ್ತೂರು ಇಲ್ಲಿ ನಡೆದ ಪುತ್ತೂರು ಕ್ಲಸ್ಟರ್ ಮಟ್ಟದ ಪ್ರೌಢಶಾಲಾ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಶಾಲೆಯು ಪ್ರಥಮ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಕನ್ನಡ ಭಾಷಣ- ಮೌಲ್ಯ.ಜಿ (ಪ್ರಥಮ), ಸಂಸ್ಕೃತ ಭಾಷಣ-ಮುಕುಂದ (ಪ್ರಥಮ), ಆಶುಭಾಷಣ-ಶ್ರೀಕೃಷ್ಣ ಬಿ(ಪ್ರಥಮ), ರಂಗೋಲಿ – ವಿಶ್ಮಿತಾ (ಪ್ರಥಮ) ಸಂಸ್ಕೃತ -ಧಾರ್ಮಿಕ ಪಠಣ- ಶ್ರೀರಕ್ಷಾ (ದ್ವಿತೀಯ), ಚಿತ್ರಕಲೆ – ವಿಘ್ನೇಶ್ ವಿಶ್ವಕರ್ಮ(ದ್ವಿತೀಯ), ಚರ್ಚಾಸ್ಪರ್ಧೆ – ಸಾಯೀಶ್ವರಿ ಡಿ (ದ್ವಿತೀಯ), ಗಝಲ್ – ಗರಿಮಾ (ದ್ವಿತೀಯ), ಕವ್ವಾಲಿ – ಕರಣ್, ಸಾತ್ವಿಕ್, ವೈಷ್ಣವಿ, ಗಾನವಿ, ಭೂಮಿಕ, ಮೇಘನಾ ಇವರ ತಂಡ (ದ್ವಿತೀಯ), ಭಾವಗೀತೆ – ವೈಷ್ಣವಿ(ತೃತೀಯ) ಸ್ಥಾನದೊಂದಿಗೆ ಪ್ರಥಮ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.