
ಗಾಂಧೀಜಿಯವರ ತತ್ವಗಳು ಹಾಗೂ ಮೌಲ್ಯಗಳು ಇಂದಿಗೂ ಆದರ್ಶವಾಗಿದೆ. ಗಾಂಧೀಜಿಯವರು ‘ನನ್ನ ಜೀವನವೇ ನನ್ನ ಸಂದೇಶ, ಸರಳ ಜೀವನವೇ ನಮ್ಮ ದಿವ್ಯಮಂತ್ರವಾಗಲಿ’ ಎಂದು ಸಾರಿದ್ದರು. ಇವರಿಂದ ಪ್ರೇರೆಪಿತರಾದ ಇನ್ನೋರ್ವ ಮಹಾನ್ ಪುರುಷರಾದ ಲಾಲ್ ಬಹದ್ದೂರ್ ಶಾಸ್ತ್ರಿ ಇವರ ಸರಳ ಜೀವನ, ದೇಶಪ್ರೇಮ, ಪ್ರಾಮಾಣಿಕತೆ ನಮ್ಮೆಲ್ಲರಿಗೂ ಆದರ್ಶವಾಗಿದೆ. ಹಾಗಾಗಿ ಅವರ ಮೌಲ್ಯಭರಿತ ತತ್ವಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣದಲ್ಲಿ ಭಾಗಿಗಳಾಗುವ ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಶಾಲಾ ಸಹಶಿಕ್ಷಕಿ ಶ್ರೀಮತಿ ಮೋಹಿತಾ ತಿಳಿಸಿದರು. ಶಾಲಾ ಸಹಶಿಕ್ಷಕರಾದ ಶ್ರೀಮತಿ ಪೂರ್ಣಿಮಾ ಮತ್ತು ಶ್ರೀಮತಿ ಅನುರಾಧ ಇವರು ಗಾಂಧೀಜಿಯವರ ಪ್ರಿಯವಾದ ಹಾಡನ್ನು ಹಾಡಿದರು. ವೇದಿಕೆಯಲ್ಲಿ ಶಾಲಾ ಪ್ರಾಥಮಿಕ ಮುಖ್ಯಗುರು ನಳಿನಿ ಮತ್ತು ಪ್ರೌಢಶಾಲಾ ಮುಖ್ಯಗುರು ಆಶಾ ಬೆಳ್ಳಾರೆ ಉಪಸ್ಥಿತರಿದ್ದರು. ಸಹಶಿಕ್ಷಕಿ ಶ್ರೀಮತಿ ಉಮಾ ಕಾರ್ಯಕ್ರಮ ನಿರೂಪಿಸಿದರು.