ವಲಯ ಮಟ್ಟದ ಕಬಡ್ಡಿ ಪಂದ್ಯಾಟ -ತಾಲೂಕು ಮಟ್ಟಕ್ಕೆ ಆಯ್ಕೆ

14ರ ವಯೋಮಾನದ ಬಾಲಕರ ತಂಡ
ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಪುತ್ತೂರು ಮತ್ತು ಸಂತ ವಿಕ್ಟರ್ಸ್ ಪ್ರೌಢಶಾಲೆ ಪುತ್ತೂರು ಇವರ ವತಿಯಿಂದ ಸಂತ ವಿಕ್ಟರ್ಸ್ ಪ್ರೌಢಶಾಲೆಯಲ್ಲಿ ನಡೆದ 14ರ ಮತ್ತು 17ರ ವಯೋಮಾನದ ಬಾಲಕ – ಬಾಲಕಿಯರ ನಗರ ವಲಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಶಾಲಾ 14ರ ವಯೋಮಾನದ ಬಾಲಕರ ತಂಡ ಮತ್ತು 17ರ ವಯೋಮಾನದ ಬಾಲಕರ ತಂಡ ಪ್ರಥಮ ಸ್ಥಾನ ಮತ್ತು 17ರ ವಯೋಮಾನದ ಬಾಲಕಿಯರ ತಂಡ ದ್ವಿತೀಯ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದೆ.