2026-27ನೇ ಶೈಕ್ಷಣಿಕ ವರ್ಷದಲ್ಲಿ ಹೊಸದಾಗಿ ದಾಖಲಾದ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಆಗತ – ಸ್ವಾಗತ ಸಂಭ್ರಮ ಕಾರ್ಯಕ್ರಮ ನಡೆಯಿತು. ಶಾಲಾ ‘ಮಹತಿ’ ಕನ್ನಡ ಸಂಘದ ವತಿಯಿಂದ ಹಮ್ಮಿಕೊಳ್ಳಲಾದ ಈ ಕಾರ್ಯಕ್ರಮಕ್ಕೆ ಅಭ್ಯಾಗತರಾಗಿ ಆಗಮಿಸಿದ್ದ ಉಷಾ ಮೆಡಿಕಲ್ಸ್ ಪುತ್ತೂರು ಇಲ್ಲಿನ ಮಾಲಕರಾದ ಶ್ರೀ ಪಿ ಗಣೇಶ್ ಭಟ್ ಇವರು “ಸುಸಜ್ಜಿತ, ಸುವ್ಯವಸ್ಥಿತ, ಸುಂದರ ಶಾಲಾ ಪರಿಸರವು ಮಗುವಿನ ಉತ್ತಮ ಕಲಿಕೆಗೆ ಸಹಕಾರಿ” ಎಂದು ಹೇಳಿದರು.
ಸಭಾಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ರಮೇಶ್ಚಂದ್ರ ಎಂ ಇವರು ಅಧ್ಯಕ್ಷೀಯ ನುಡಿಗಳನ್ನಾಡಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಭಗವದ್ಗೀತೆ ಪಠಣ ನಡೆಯಿತು.
ಹೊಸದಾಗಿ ದಾಖಲಾದ ಎಲ್ಲಾ ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಘೃತಾಹುತಿ ಅರ್ಪಿಸಿದರು. ಶಾಲಾ ಪ್ರೌಢಶಾಲಾ ಮುಖ್ಯಗುರು ಶ್ರಿಮತಿ ಆಶಾ ಬೆಳ್ಳಾರೆ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಮೌಲ್ಯ ಕಾರ್ಯಕ್ರಮ ನಿರೂಪಿಸಿ, ಸಾಯೀಶ್ವರಿ ಧನ್ಯವಾದಗೈದರು. ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿಯ ಸಂಚಾಲಕರಾದ ವಸಂತ ಸುವರ್ಣ ಹಾಗೂ ಪ್ರಾಥಮಿಕ ಮುಖ್ಯಗುರು ಶ್ರೀಮತಿ ನಳಿನಿ ವಾಗ್ಲೆ ಉಪಸ್ಥಿತರಿದ್ದರು.