ಕಲಿಕಾ – ಹರ್ಷ ಬೇಸಿಗೆ ಶಿಬಿರ

“ಪ್ರತಿಯೊಬ್ಬನಲ್ಲೂ ಒಬ್ಬ ಸಾಧಕನಿದ್ದಾನೆ; ನಮ್ಮೊಳಗಿನ ಸಾಧಕನನ್ನು ಗುರುತಿಸಿ ಸಾಧನೆಯ  ಕಡೆಗೆ ಮುನ್ನಡೆಯಬೇಕು” ಎಂದು ಶಾಲಾ ಹಿರಿಯ ವಿದ್ಯಾರ್ಥಿನಿ ಕು. ಶ್ರೀರಕ್ಷಾ ಶುಭ ಹಾರೈಸಿದರು.  ಶಾಲೆಯಲ್ಲಿ ಕಲಿಕಾ- ಹರ್ಷ ಬೇಸಿಗೆ ಶಿಬಿರದ ಉದ್ಘಾಟನಾ ಕಾರ್ಯಕ್ರಮದ ಅಭ್ಯಾಗತರಾಗಿ ಆಗಮಿಸಿ ಅವರು ಮಾತನಾಡಿದರು.
ಶಾಲಾ ಹಿರಿಯ ವಿದ್ಯಾರ್ಥಿನಿ ಕು. ಗಗನ ಇವರು “ನಮ್ಮೊಳಗಿನ ಪ್ರತಿಭೆಯನ್ನು ಅನಾವರಣಗೊಳಿಸಲು ಕಲಿಕಾ ಶಿಬಿರವು ವೇದಿಕೆಯಾಗಿದೆ” ಎಂದು ಪ್ರೋತ್ಸಾಹ ದ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಶಾಲಾ ಪ್ರಾಥಮಿಕ ವಿಭಾಗದ ಮುಖ್ಯಗುರುಗಳಾದ ಶ್ರೀಮತಿ ನಳಿನಿ ವಾಗ್ಲೆ, ಶಿಬಿರ ಸಂಯೋಜಕರಾದ ಶ್ರೀಮತಿ ಶ್ವೇತಾ ಎ.ಬಿ ಉಪಸ್ಥಿತರಿದ್ದರು.
ಅಭ್ಯಾಗತರಾಗಿ ಆಗಮಿಸಿದ ಶಾಲಾ ಹಿರಿಯ ವಿದ್ಯಾರ್ಥಿನಿಯರು ಶಿಬಿರಾರ್ಥಿಗಳಿಗೆ ಮನರಂಜನೆಯ ಆಟಗಳನ್ನು ಆಡಿಸಿದರು. ಕಾರ್ಯಕ್ರಮದಲ್ಲಿ  ಪೋಷಕರು, ಶಿಬಿರಾರ್ಥಿಗಳು, ಪೆÇೀಷಕವೃಂದದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಾಲಾ ಸಹಶಿಕ್ಷಕಿ ಕು. ಪ್ರತೀಕ್ಷಾ ಆರ್ ಕೆ ನಿರೂಪಿಸಿದರು.
Highslide for Wordpress Plugin