ಸ್ಕೌಟ್ ಮತ್ತು ಗೈಡ್ಸ್

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್
‘ನಾನು ನನ್ನ ಗೌರವ ಸಾಕ್ಷಿಯಾಗಿ, ನನ್ನ ಕೈಲಾದ ಮಟ್ಟಿಗೆ ದೇವರಿಗೂ ನನ್ನ ದೇಶಕ್ಕೂ ಕರ್ತವ್ಯವನ್ನು  ಸಲ್ಲಿಸುತ್ತೇನೆಂದೂ ಇತರರಿಗೆ ಸಹಾಯ ಮಾಡುತ್ತೇನೆಂದೂ ಸ್ಕೌಟ್ಸ್ – ಗೈಡ್ ನಿಯಮವನ್ನು ಪಾಲಿಸುತ್ತೇನೆಂದೂ ಪ್ರತಿಜ್ಞೆ ಮಾಡುತ್ತೇನೆ. ಎಂದು ಪ್ರತಿಜ್ಞೆ ಮಾಡುತ್ತಾ  ೨೦೦೫ನೇ ವರ್ಷದಲ್ಲಿ ತಿಲಕ್ ಸ್ಕೌಟ್ ಟ್ರೂಪ್, ನಿವೇದಿತಾ ಗೈಡ್ ಕಂಪೆನಿ  ಮತ್ತು ಕಲ್ಪನಾ ಬುಲ್ ಬುಲ್ ದಳಗಳನ್ನು ಪ್ರಾರಂಭಿಸಲಾಯಿತು. ಇದರ ಮುಖ್ಯ ಉದ್ದೇಶ ನಾವು ಪ್ರಪಂಚಕ್ಕೆ  ಬಂದಂದಿನಿಂದ ಬಿಟ್ಟು ಹೋಗುವಾಗ ಪ್ರಪಂಚವನ್ನು  ಉತ್ತಮ ಪಡಿಸೋಣ ಎಂಬ ತತ್ವದೊಂದಿಗೆ , ಹೊರಾಂಗಣ, ಗುಂಪು ಚಟುವಟಿಕೆ ಗಳೊಂದಿಗೆ  ವಿಶ್ವಾಸಾರ್ಹತೆ, ಪ್ರಾಮಾಣಿಕತೆ ಶಿಸ್ತು ಪಾಲನೆ ಮನೋಕಾಯವಾಚಾ ಪರಿಶುದ್ದತೆ ಇವುಗಳನ್ನು ಪಾಲಿಸುವ ವ್ಯಕ್ತಿಯೇ ಉತ್ತಮ ಪ್ರಜೆ ಸ್ಕೌಟ್ ಗೈಡ್ ಚಳವಳಿಯು ಯುವ ಜನಾಂಗಕ್ಕೆ  ಆಕರ್ಷಕವಾದ ಉಪಯುಕ್ತವಾದ ಚಟುವಟಿಕೆಗಳಿಂದ ‘ಸದಾ ಸಿದ್ಧ’ ಎಂಬ ಧ್ಯೇಯವನ್ನು ಮಕ್ಕಳಲ್ಲಿ ಬೆಳೆಸುವುದು.

Highslide for Wordpress Plugin