ಸೌಕರ್ಯಗಳು

ನಮ್ಮಲ್ಲಿ ಶುದ್ಧವಾದ ಕುಡಿಯುವ ನೀರು, ಪ್ರಯೋಗಾಲಯ, ದೃಶ್ಯ ಶ್ರವ್ಯ ಕೊಠಡಿ, ವಿಶಾಲವಾದ ಗ್ರಂಥಾಲಯ, ಸುಸಜ್ಜಿತವಾದ ಗಣಕಯಂತ್ರ ಕಲಿಕಾ ವಿಭಾಗಗಳಿವೆ. ಮತ್ತು ನೂತನ ವರ್ಷದಿಂದ ಸ್ಮಾರ್ಟ್ ಕ್ಲಾಸ್ ತರಗತಿಗಳು ಆರಂಭವಾಗಲಿದೆ. ವಿಶಾಲವಾದ ಸುವ್ಯವಸ್ಥಿತ ಆಟದ ಮೈದಾನ, ನೂತನ ಕ್ರೀಡಾ ಸಾಮಗ್ರಿಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಲಭ್ಯವಿದೆ. ವಿದ್ಯಾರ್ಥಿಗಳು ಶಾಲೆಗೆ ಬರಲು ಅನುಕೂಲವಾಗುವಂತೆ ವಿವಿಧ ದಿಕ್ಕುಗಳಿಗೆ ೧೦ ಸುಸಜ್ಜಿತ ಶಾಲಾ ಬಸ್ಸುಗಳ ಸೌಲಭ್ಯವಿದೆ.

ಕಂಪ್ಯೂಟರ್ ಪ್ರಯೋಗಾಲಯ

ನಮ್ಮ ಶಾಲೆಯಲ್ಲಿ  ಸುಸಜ್ಜಿತವಾದ ಕಂಪ್ಯೂಟರ್ ಪ್ರಯೋಗಾಲಯ ಸೌಲಭ್ಯವಿದೆ. ಇದರಲ್ಲಿ 5 ನೇತರಗತಿಯಿಂದ 10ನೇ ತರಗತಿಯವರೆಗಿನ ಮಕ್ಕಳಿಗೆ ಕಂಪ್ಯೂಟರ್ ತರಗತಿಗಳು ನಡೆಯುತ್ತಿವೆ.

ವಾಚನಾಲಯ

ಶಾಲೆಯಲ್ಲಿ ೧೦೦ ಮಕ್ಕಳು ಕುಳಿತು ಓದಬಹುದಾದ ವಿಶಾಲವಾದ ಗ್ರಂಥಾಲಯವಿದೆ. ಮತ್ತು ಮಕ್ಕಳ ಮನೋಸ್ಥೈರ್ಯವನ್ನು ಹೆಚ್ಚಿಸುವುದಕ್ಕೋಸ್ಕರ ಪ್ರತಿ ತರಗತಿಗಳಿಗೂ ಒಂದೊಂದು ಗ್ರಂಥಾಲಯವನ್ನು ಮಾಡಲಾಗಿದೆ. ಇದರ ಸದುಪಯೋಗವನ್ನು ಮಕ್ಕಳು ಪಡೆಯುತ್ತಿದ್ದಾರೆ.

Highslide for Wordpress Plugin