ಸಂಸ್ಕಾರ, ಸಂಸ್ಕೃತಿಯುತ ಕುಟುಂಬಗಳಿಂದ ಭಾರತ ವಿಶ್ವಮಾನ್ಯವೆನಿಸಿದೆ - ಸು.ರಾಮಣ್ಣ

ಸಂಸ್ಕಾರ, ಸಂಸ್ಕೃತಿಯುತ ಕುಟುಂಬಗಳಿಂದ ಭಾರತ ವಿಶ್ವಮಾನ್ಯವೆನಿಸಿದೆ – ಸು.ರಾಮಣ್ಣ

Monday, October 16th, 2017

ವಿವಾಹ ಎನ್ನುವುದು ಕೇವಲ ಭೋಗಕ್ಕಾಗಿ ಅಲ್ಲ, ಎರಡು ಜೀವಗಳು ಬೆಸೆಯುವ ಈ ಸಂಬಂಧವು ಎರಡು ಕುಟುಂಬಗಳನ್ನು ಜೋಡಿಸುತ್ತದೆ. ದೈವಾನುಗ್ರಹದಿಂದ ಪಡೆದ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ, ಸಮಾಜಕ್ಕೆ ಯೋಗ್ಯ ವ್ಯಕ್ತಿಗಳನ್ನು ನೀಡುವ ಜವಾಬ್ದಾರಿ ತಂದೆ ತಾಯಿಗಳಿಗಿರಬೇಕು. ಮಕ್ಕಳಲ್ಲಿ ಸಮಷ್ಠಿಯ ಬಗ್ಗೆ ಅಂದರೆ, ಸಮಸ್ತ ಸೃಷ್ಟಿ, ಜಗತ್ತು ವಿಶ್ವವನ್ನೇ ಪ್ರೀತಿಸಿ ಗೌರವಿಸುವ ಸಂಸ್ಕೃತಿ ಬೆಳೆಸಿದಾಗ ’ವಸುದೈವ ಕುಟುಂಬಕಮ್’ ಎಂಬ ಮಾತು ಸಾರ್ಥಕವಾಗುತ್ತದೆ ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ’ನವದಂಪತಿಗಳ ಸಮಾವೇಶ’ ಎಂಬ ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ […]

ಅ. 15 ರಂದು ನವದಂಪತಿ ಸಮಾವೇಶ

ಅ. 15 ರಂದು ನವದಂಪತಿ ಸಮಾವೇಶ

Saturday, October 14th, 2017
ರಾಜ್ಯಮಟ್ಟದ ಜ್ಞಾನ-ವಿಜ್ಞಾನ ಮೇಳ : ಶಾಲಾ ವಿದ್ಯಾರ್ಥಿಗಳು ಕ್ಷೇತ್ರಿಯ ಮಟ್ಟಕ್ಕೆ ಆಯ್ಕೆ

ರಾಜ್ಯಮಟ್ಟದ ಜ್ಞಾನ-ವಿಜ್ಞಾನ ಮೇಳ : ಶಾಲಾ ವಿದ್ಯಾರ್ಥಿಗಳು ಕ್ಷೇತ್ರಿಯ ಮಟ್ಟಕ್ಕೆ ಆಯ್ಕೆ

Monday, October 9th, 2017

ವಿದ್ಯಾಭಾರತಿ ಕರ್ನಾಟಕ ವತಿಯಿಂದ ಬಾಲ ಭಾರತಿ ಕೇಂದ್ರಿಯ ವಿದ್ಯಾಲಯ ಬಳ್ಳಾರಿ ಇಲ್ಲಿ ನಡೆದ ಪ್ರಾಂತೀಯ ಜ್ಞಾನ – ವಿಜ್ಞಾನ ಮೇಳದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಆಶ್ರಯ್ ಪಿ.ವಿ ಮತ್ತು ರಕ್ಷಿತಾ. ಡಿ ಇವರ ತಂಡ ಪ್ರಥಮ ಸ್ಥಾನ ಪಡೆದು ಕ್ಷೇತ್ರಿಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಉಳಿದಂತೆ ಪ್ರತೀಕ್ ಗಣಪತಿ – ದ್ವಿತೀಯ ಸ್ಥಾನ, ಧನುಷ್ ಬಿ ಮತ್ತು ಸ್ವಸ್ತಿಕ್ ಬಿ.ವಿ ಇವರ ತಂಡ ತೃತೀಯ ಸ್ಥಾನ ಪಡೆದಿರುತ್ತದೆ.

ಬಾಲಗೋಕುಲ ಕಾರ್ಯಾಗಾರ

ಬಾಲಗೋಕುಲ ಕಾರ್ಯಾಗಾರ

Saturday, October 7th, 2017

ಸಂಸ್ಕಾರಯುತ ಶಿಕ್ಷಣ ನೀಡುವ ಹಿನ್ನೆಲೆಯಲ್ಲಿ ಶಿಕ್ಷಕರ ಮನೆಯಲ್ಲಿ ಬಾಲಗೋಕುಲ ನಡೆಸುವ ಬಗ್ಗೆ ಮೈತ್ರೇಯಿ ಗುರುಕುಲದ ಶ್ರೀಮತಿ ಮಾತಾಜಿಯವರ ನೇತೃತ್ವದಲ್ಲಿ ಬಾಲಗೋಕುಲ ಶಿಬಿರ ನಡೆಯಿತು.

ತಾಲೂಕು ಮಟ್ಟದ ಕ್ರೀಡಾಕೂಟ  : ಶಾಲೆಗೆ ಸಮಗ್ರ ತಂಡ ಪ್ರಶಸ್ತಿ

ತಾಲೂಕು ಮಟ್ಟದ ಕ್ರೀಡಾಕೂಟ : ಶಾಲೆಗೆ ಸಮಗ್ರ ತಂಡ ಪ್ರಶಸ್ತಿ

Thursday, October 5th, 2017

ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸರಕಾರಿ ಪ್ರೌಢಶಾಲೆ ಕೆಯ್ಯೂರು ಇವರ ಸಹಯೋಗದಲ್ಲಿ ಕೆಯ್ಯೂರು ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯು 17 ವರ್ಷದೊಳಗಿನ ಪ್ರೌಢಶಾಲಾ ಬಾಲಕರ ಮತ್ತು ಬಾಲಕಿಯರ ಎರಡು ವಿಭಾಗದಲ್ಲಿ ಸಮಗ್ರ ತಂಡ ಪ್ರಶಸ್ತಿ ಪಡೆದುಕೊಂಡಿದೆ. ಇದರಲ್ಲಿ 20 ವಿದ್ಯಾರ್ಥಿಗಳು ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ.

ಸರಸ್ವತಿ ವಿಗ್ರಹ ಲೋಕಾರ್ಪಣೆ ಮತ್ತು ಅಕ್ಷರಾಭ್ಯಾಸ

ಸರಸ್ವತಿ ವಿಗ್ರಹ ಲೋಕಾರ್ಪಣೆ ಮತ್ತು ಅಕ್ಷರಾಭ್ಯಾಸ

Saturday, September 30th, 2017

ಭಾರತೀಯತೆಗೆ ಸನಾತನ ಧರ್ಮವೇ ತಳಹದಿ – ಬ್ರಹ್ಮಶ್ರೀ ಕುಂಟಾರು ರವೀಶ್‌ ತಂತ್ರಿ ಆದಿಗುರು ಶ್ರೀ ಶಂಕರಾಚಾರ್ಯರು, ಸ್ವಾಮಿ ವಿವೇಕಾನಂದರಂತಹ ಸಾಧಕರು ಭಾರತದ ಸಂಸ್ಕಾರ, ಧರ್ಮದ ಬಗ್ಗೆ ಆಳವಾದ ಅಧ್ಯಯನ ನಡೆಸಿ, ಸನಾತನ ಧರ್ಮವೇ ನಮ್ಮೆಲ್ಲಾ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಏಳಿಗೆಗೆ ತಳಹದಿ ಎಂದು ಸಾರಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಡಾಕ್ಟರ್ ಜೀಯವರು, ಸನಾತನ ಧರ್ಮವೇ ಈ ದೇಶದ ಜೀವಾಳವಾಗಿದ್ದು ಈ ಕಾರಣದಿಂದಲೇ ಭಾರತವು ಪ್ರಪಂಚಕ್ಕೆ ಗುರುವಿನ ಸ್ಥಾನದಲ್ಲಿದೆ ಎಂದಿದ್ದರು. ಇಂತಹ ಸಂಸ್ಕಾರ ಸುಧೆಯನ್ನು ಸ್ವೀಕರಿಸಿ ಹಿರಿಯರು […]

ಯಕ್ಷಚಿಣ್ಣರ ಬಳಗ ಮಠಂತಬೆಟ್ಟುವಿನಲ್ಲಿ

ಯಕ್ಷಚಿಣ್ಣರ ಬಳಗ ಮಠಂತಬೆಟ್ಟುವಿನಲ್ಲಿ

Thursday, September 28th, 2017

ಶ್ರೀಮಹೀಷಮರ್ಧಿನಿ ದೇವಸ್ಥಾನ ಮಠಂತಬೆಟ್ಟು ಇಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಯಕ್ಷಚಿಣ್ಣರ ಬಳಗದಿಂದ ’ತಾಟಕಿ ಸಂಹಾರ- ಖರಾಸುರ ವಧೆ’ ಎಂಬ ಪುಣ್ಯಕಥಾ ಶ್ರೀ ಬಾಲಕೃಷ್ಣ ಪೂಜಾರಿ ಉಡ್ಡಂಗಳ ಹಾಗೂ ಚಂದ್ರಶೇಖರ್ ಸುಳ್ಯಪದವು ಇವರ ನಿರ್ದೇಶನದಲ್ಲಿ ನಡೆಯಿತು.

ಶಾಲೆಗೆ ಸರಸ್ವತಿ ದೇವಿಯ ವಿಗ್ರಹ ಆಗಮನ

ಶಾಲೆಗೆ ಸರಸ್ವತಿ ದೇವಿಯ ವಿಗ್ರಹ ಆಗಮನ

Thursday, September 28th, 2017

ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಪ್ರತಿಷ್ಠಾಪಿಸಲಿರುವ ಸರಸ್ವತಿ ದೇವಿ ವಿಗ್ರಹದ ಮೆರವಣಿಗೆಯು ಸೆ.೨೮ರಂದು ನಡೆಯಿತು. ಕಾರ್ಕಳದಲ್ಲಿ ತಯಾರಿಸಲ್ಪಟ್ಟ ವಿಗ್ರಹವು ಸೆ. 28 ರಂದು ನೆಹರು ನಗರದಲ್ಲಿರುವ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಛೇರಿ ನರೇಂದ್ರಕ್ಕೆ ಆಗಮಿಸಿದೆ. ಸೆ. 28 ರಂದು ಬೊಳುವಾರು ವೃತ್ತದ ಬಳಿಯಿಂದ ಹೊರಟು ಮೆರವಣಿಗೆಯು ಮುಖ್ಯ ರಸ್ತೆಯ ಮೂಲಕ ಸಾಗಿ ಮಹಾಲಿಂಗೇಶ್ವರ ದೇವಸ್ಥಾನ, ವೆಂಕಟ್ರಮಣ ದೇವಸ್ಥಾನ, ಮಹಮ್ಮಾಯಿ ದೇವಸ್ಥಾನ ಹಾಗೂ ಭವಾನಿ ಶಂಕರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಬಳಿಕ ತೆಂಕಿಲ ವಿದ್ಯಾಸಂಸ್ಥೆಗೆ ಆಗಮಿಸಿತು. ಬಳಿಕ […]

ಯಕ್ಷಗಾನ ಬಯಲಾಟ

ಯಕ್ಷಗಾನ ಬಯಲಾಟ

Saturday, September 23rd, 2017

ದಿನಾಂಕ 22-9-2017 ರಂದು ಮಂಗಳೂರಿನ ಕದ್ರಿ ಮಂಜುನಾಥೇಶ್ವರದೇವಸ್ಥಾನದ ವಠಾರದಲ್ಲಿ ನವರಾತ್ರಿಯ ಅಂಗವಾಗಿ ಕದಳಿ ಕಲಾ ಕೇಂದ್ರದವರು ನಡೆಸಲ್ಪಡುವ ಮಕ್ಕಳ ಯಕ್ಷಗಾನ ಪ್ರದರ್ಶನದಲ್ಲಿ ವಿವೇಕಾನಂದಕನ್ನಡ ಮಾಧ್ಯಮ ಶಾಲೆಯಯಕ್ಷಚಿಣ್ಣರ ಬಳಗ ಶ್ರೀರಾಮಕಾರುಣ್ಯ ಎಂಬ ಪುಣ್ಯಕಥಾ ಭಾಗವನ್ನು ಆಡಿ ತೋರಿಸಿದರು. ಯಕ್ಷ ಗುರುಗಳಾದ ಶ್ರೀ ಬಾಲಕೃಷ್ಣ ಪೂಜಾರಿ ಉಡ್ಡಂಗಳ ಮತ್ತು ಶ್ರೀ ಚಂದ್ರಶೇಖರ ಸುಳ್ಯ ಪದವುರವರ ಸಂಯೋಜನೆಯಲ್ಲಿ ನಡೆಯಿತು.

ಯಕ್ಷಗಾನ ಸ್ಪರ್ಧೆ ಸಮಾರೋಪ ಸಮಾರಂಭ

ಯಕ್ಷಗಾನ ಸ್ಪರ್ಧೆ ಸಮಾರೋಪ ಸಮಾರಂಭ

Thursday, September 14th, 2017

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಇಲ್ಲಿ ನಡೆದ ಜಿಲ್ಲಾ ಮಟ್ಟದ ಯಕ್ಷಗಾನ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬಡವರ ಬಂಧು ಶೈಕ್ಷಣಿಕ ಕಾಳಜಿಯುಳ್ಳ ಶ್ರೀಯುತ ಅಶೋಕ್‌ ರೈ ಕೋಡಿಂಬಾಡಿಯವರು ಉಪಸ್ಥಿತರಿದ್ದು ಯಕ್ಷಗಾನವು ಕರಾವಳಿ ಭಾಗದ ಶ್ರೇಷ್ಠ ಕಲೆಯಾಗಿದೆ ಅದನ್ನು ಉಳಿಸುವಲ್ಲಿ ಶಿಕ್ಷಣ ಸಂಸ್ಥೆಗಳು ಈ ರೀತಿ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದರು, ಅಲ್ಲದೇ ತಮ್ಮ ಬಾಲ್ಯದ ನೆನಪುಗಳ ಪುಟವನ್ನು ತೆರೆದಿಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಣಿಪುರಯಕ್ಷಗಾನ ಪತ್ರಿಕೆಯ ಸಂಪಾದಕರಾದ ಶ್ರೀನಾರಾಯಣ ಚಂಬಲ್ತಿಮಾರ್ ಮಾತನಾಡಿ’ ಮಕ್ಕಳಲ್ಲಿ ಎಳವೆಯಲ್ಲಿಯೇ […]

Highslide for Wordpress Plugin