2017-18 ನೇ ಸಾಲಿನಲ್ಲಿ ಶಾಲೆಯಿಂದ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳ ವಿವರ

ನವೆಂಬರ್ 7 ರಿಂದ 12 ರವರೆಗೆ ಮಧ್ಯಪ್ರದೇಶದ ಭೂಪಾಲ್‌ನಲ್ಲಿ ನಡೆದ 17 ರ ವಯೋಮಾನದ ಬಾಲಕ-ಬಾಲಕಿಯರ ಎಸ್.ಜಿ.ಎಫ್.ಐ. (ರಾಷ್ಟ್ರೀಯ ಮಟ್ಟದ ಶಾಲಾ ಕ್ರೀಡಾಕೂಟ)ದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ವಿದ್ಯಾಭಾರತಿ ಕರ್ನಾಟಕ ವತಿಯಿಂದ ಭಾಗವಹಿಸಿರುತ್ತಾರೆ.

national-sports-list

ದೀಕ್ಷಾ ಕೆ.- 100 ಮೀ ಅಡೆತಡೆ ಓಟ, 4×100 ಮೀ ರಿಲೇ
ಗಾಯತ್ರಿ – ಉದ್ದಜಿಗಿತ, ತ್ರಿವಿಧ ಜಿಗಿತ, 4×100 ಮೀ ರಿಲೇ
ಚೈತ್ರಾ – 4×100 ಮೀ ರಿಲೇ
ಕೃತಿ ಜಿ. ಶೆಟ್ಟಿ – 4×100 ಮೀ ರಿಲೇ
ವಿಭಾ ಯು. ಎಸ್. – 3000 ಮೀ ವೇಗದ ನಡಿಗೆ

ನವೆಂಬರ್ 7 ರಿಂದ 12 ರವರೆಗೆ ಮಧ್ಯಪ್ರದೇಶ ಭೂಪಾಲ್‌ನಲ್ಲಿ ನಡೆದ 17 ರ ವಯೋಮಾನದ ಬಾಲಕ-ಬಾಲಕಿಯರ ಎಸ್.ಜಿ.ಎಫ್.ಐ. ಕ್ರೀಡಾಕೂಟದಲ್ಲಿ ಧನುಷಾ.ಜಿ.ಶೆಟ್ಟಿ 3000 ಮೀ. ನಡಿಗೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖಾ ವತಿಯಿಂದರಾಜ್ಯವನ್ನು ಪ್ರತಿನಿಧಿಸಿರುತ್ತಾಳೆ.

ಡಿಸೆಂಬರ್ ತಿಂಗಳ 17 ರಿಂದ 20 ರವರೆಗೆ ಮಹಾರಾಷ್ಟ್ರದ ರತ್ನಗಿರಿಯಲ್ಲಿ ನಡೆದ 14 ರ ವಯೋಮಾನದ ಬಾಲಕ – ಬಾಲಕಿಯರ ಎಸ್.ಜಿ.ಎಫ್.ಐ. ಕ್ರೀಡಾಕೂಟದಲ್ಲಿ ಮಹಮ್ಮದ್‌ ಅಮೀರ್ 80 ಮೀ ಹರ್ಡಲ್ಸ್‌ನಲ್ಲಿ ಕರ್ನಾಟಕ ವಿದ್ಯಾಭಾರತಿ ತಂಡದಿಂದ ಭಾಗವಹಿಸಿದ್ದಾರೆ.

ನವೆಂಬರ್ ತಿಂಗಳಲ್ಲಿ ಛತ್ತಿಸ್‌ಗಡದಲ್ಲಿ ನಡೆದ 17 ರ ವಯೋಮಾನದ ಬಾಲಕರ ತ್ರೋಬಾಲ್ ಪಂದ್ಯಾಟದಲ್ಲಿ ಎಸ್.ಜಿ.ಎಫ್.ಐ. ಕರ್ನಾಟಕ ತಂಡದಿಂದ 9ನೇ ತರಗತಿಯ ತನುಜ್ ಭಾಗವಹಿಸಿದ್ದಾನೆ.

2018 ನೇ ಜನವರಿಯಲ್ಲಿ ಮೈಸೂರಿನ ನಂಜನಗೂಡಿನಲ್ಲಿ ನಡೆದ 14 ರ ವಯೋಮಾನದ ಎಸ್.ಜಿ.ಎಫ್.ಐ. ಬಾಲಕರ ತ್ರೋಬಾಲ್ ಪಂದ್ಯಾಟದಲ್ಲಿ ಕರ್ನಾಟಕ ವಿದ್ಯಾಭಾರತಿ ತಂಡದಿಂದ ಚೇತಕ್, ಚರಣ್, ವಿನಾಯಕ ಇವರು ಭಾಗವಹಿಸಿ 4 ನೇ ಸ್ಥಾನ ಪಡೆದಿರುತ್ತಾರೆ.

Highslide for Wordpress Plugin