ಸ್ಕೂಲ್‌ ಗೇಮ್ಸ್ ಫೆಡರೇಶನ್‌ ಆಫ್ ಇಂಡಿಯಾಗೆ ಶಾಲೆಯ ಕ್ರೀಡಾಪಟುಗಳು ಆಯ್ಕೆ

ಸಾರ್ವಜನಿಕ ಶಿಕ್ಷಣ ಇಲಾಖಾ ವತಿಯಿಂದ ಬೆಳಗಾವಿಯಲ್ಲಿ ನಡೆದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಧನುಷಾ.ಜಿ.ಶೆಟ್ಟಿ (ದರ್ಬೆತ್ತಡ್ಕ ಉದಯ್ ಕುಮಾರ್ ಶೆಟ್ಟಿ ಮತ್ತು ವೈಶಲತಾ ಶೆಟ್ಟಿ ದಂಪತಿಗಳ ಪುತ್ರಿ) ನಡಿಗೆ ಸ್ಪರ್ಧೆಯಲ್ಲಿ ಪ್ರಥಮ, ಮೀರತ್‌ನಲ್ಲಿ ನಡೆದ ಅಖಿಲಾ ಭಾರತೀಯ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ದೀಕ್ಷಾ.ಕೆ (ಪೆರಿಗೇರಿ ಕಮಲಾಕ್ಷಗೌಡ ಮತ್ತು ಕಮಲಾಕ್ಷಿ ದಂಪತಿ ಪುತ್ರಿ) 100 ಮೀ ಅಡೆತಡೆ ಓಟ – ಪ್ರಥಮ, 4100 ಮೀ ರಿಲೇಯಲ್ಲಿ ಪ್ರಥಮ ಸ್ಥಾನ, ಉದ್ದಜಿಗಿತ, ತ್ರಿವಿಧಜಿಗಿತ ದ್ವಿತೀಯ, ಗಾಯತ್ರಿ.ಕೆ.ಎನ್ (ಕೇಪು ಕಲ್ಲಪಾಪು ನಿರಂಜನ್ ಕೆ ಮತ್ತು ಸುನಂದ.ಕೆ.ಎನ್ ದಂಪತಿಗಳ ಪುತ್ರಿ) ಉದ್ದಜಿಗಿತ, ತ್ರಿವಿಧಜಿಗಿತ,4100 ಮೀ ರಿಲೇಯಲ್ಲಿ ಪ್ರಥಮ, ವಿಭಾ ಯು.ಎಸ್ (ಶಿಶಿಲದ ಉಮೇಶ್‌ಕುಲಾಲ್ ಮತ್ತು ಸಾವಿತ್ರಿ ದಂಪತಿಗಳ ಪುತ್ರಿ) ನಡಿಗೆ ಸ್ಪರ್ಧೆ – ಪ್ರಥಮ, ಮಹಮ್ಮದ್‌ಅಮೀರ್ (ಕಬಕ ನಿವಾಸಿ ಆರೀಪ್ ಹುಸ್ಯೇನ್ ಮತ್ತು ಕುಶ್ನಾಬಿ ದಂಪತಿಗಳ ಪುತ್ರ) 800 ಮೀ ಅಡೆತಡೆ ಓಟ – ಪ್ರಥಮ, 100 ಮೀ ಓಟ- ತೃತೀಯ, 4100  ಮೀ ರಿಲೇಯಲ್ಲಿ ತೃತೀಯ, ಚೈತ್ರಾ.ಪಿ (ಹಳೆನೇರೆಂಕಿ ಲಕ್ಷ್ಮಣಗೌಡ ಮತ್ತು ಹೇಮಲತಾ ದಂಪತಿಗಳ ಪುತ್ರಿ) 4100 ಮೀ ರಿಲೇಯಲ್ಲಿ ಪ್ರಥಮ ಸ್ಥಾನ,ಕೃತಿ.ಜಿ.ಶೆಟ್ಟಿ (ದರ್ಬೆತ್ತಡ್ಕ ಉದಯ್ ಕುಮಾರ್ ಶೆಟ್ಟಿ ಮತ್ತು ವೈಶಲತಾ ಶೆಟ್ಟಿ ದಂಪತಿಗಳ ಪುತ್ರಿ) 100ಮೀ, 4100 ಮೀ ರಿಲೆಯಲ್ಲಿ ಪ್ರಥಮ, ಹಾಗೂ ಮೈಸೂರಿನ ಹುಣಸೂರಿನಲ್ಲಿ ನಡೆದ ಅಖಿಲಾ ಭಾರತೀಯ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ದೀಕ್ಷಾ.ಕೆ (ಪೆರಿಗೇರಿ ಕಮಲಾಕ್ಷಗೌಡ ಮತ್ತು ಕಮಲಾಕ್ಷಿದಂಪತಿ ಪುತ್ರಿ), ಪ್ರಶಾಂತಿ (ಬಂದಾರು ಚೋಮ ಮುಗೇರ ಮತ್ತು ಕಮಲ ದಂಪತಿಗಳ ಪುತ್ರಿ), ನವ್ಯಶ್ರೀ ( ಬಂದಾರು ಗಂಗಾಧರಗೌಡ ಮತ್ತು ಸರಸ್ವತಿ ದಂಪತಿಗಳ ಪುತ್ರಿ) ಇವರು ಸ್ಕೂಲ್‌ ಗೇಮ್ಸ್ ಫೆಡರೇಶನ್‌ ಆಫ್ ಇಂಡಿಯಾ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ.

school-of-games

Highslide for Wordpress Plugin