ಶಿಷ್ಟಾಚಾರ ಮತ್ತು ಸಂಸ್ಕೃತಿ ಬದುಕಿಗೆ ಪೂರಕ-ಕೃಷ್ಣಮೋಹನ್

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ 8 ಮತ್ತು 9 ನೇ ತರಗತಿಯ ಪೋಷಕರ ಸಭೆಯಲ್ಲಿ ಜೆ.ಸಿ.ಐ ರಾಷ್ಟ್ರೀಯ ತರಬೇತುದಾರರಾದ ಶ್ರೀಯುತ ಕೃಷ್ಣಮೋಹನ್ ಅತಿಥಿಗಳಾಗಿ ಆಗಮಿಸಿ, ಮೌಲ್ಯಯುತ ಶಿಕ್ಷಣದ ಜೊತೆಗೆ ಮಗುವಿನ ಆಸಕ್ತಿಗೆ ಪೂರಕವಾದ ಚಟುವಟಿಕೆಗಳನ್ನು ಪೋಷಿಸಿದರೆ ಆ ಮಗು ಅಭಿಮಾನ, ಸನ್ಮಾನಗಳಿಗೆ ಪಾತ್ರವಾಗುತ್ತದೆ ಎಂದು ಪೋಷಕರನ್ನು ಉದ್ದೇಶಿಸಿ ಮಾತನಾಡಿದರು. ಉತ್ತಮ ಆಹಾರ ಸೇವನೆಯಿಂದ ಮಕ್ಕಳು ದೈಹಿಕವಾಗಿ ಮತ್ತು ಮಾನಸಿಕವಾಗಿಯೂ ಆರೋಗ್ಯವಂತರಾಗಿರುತ್ತಾರೆ. ಆಗ ಸಹಜವಾಗಿ ಮಗು ಪರಿಸ್ಥಿತಿಗೆ ತಕ್ಕ ಹಾಗೆ ಯೋಚನೆ ಮಾಡಿ ಉತ್ತಮ ನಿರ್ಧಾರವನ್ನು ತೆಗೆದುಕೊಳ್ಳಲು ಸಹಾಯವಾಗುತ್ತದೆ. ಕೃಷಿ, ನೈತಿಕ ಶಿಕ್ಷಣ ಮತ್ತು ಸಂಸ್ಕಾರಗಳಿಗೆ ಪೂರಕವಾದ ಶಿಕ್ಷಣವನ್ನು ನೀಡಿದಾಗ ಮಗು ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ ಇದಕ್ಕೆ ಪೂರಕವಾಗಿ ಶಿಕ್ಷಣವನ್ನು ಶಾಲೆಯಲ್ಲಿ ನೀಡಬೇಕುಎಂದು ಹೇಳಿದರು.

8th-9th (1)

8th-9th (2)

ಸಂಸ್ಕಾರ ಅಳವಡಿಸಿಕೊಳ್ಳಲು ಶಾಲೆಯಲ್ಲಿ ಉತ್ತಮ ವಿಚಾರಗಳನ್ನು ಅರ್ಥೈಸಿಕೊಂಡು ಮನೆಯಲ್ಲೂ ಕೂಡಅದೇ ವಾತವರಣವನ್ನು ಒದಗಿಸಿಕೊಟ್ಟಾಗ ಮಗುವಿನಲ್ಲಿ ಈ ಸಂಸ್ಕೃತಿ ಬೆಳೆಯಲು ಸಾಧ್ಯ. ಇದಕ್ಕೆ ಪೋಷಕರು ಶಿಕ್ಷಕರು ಪೂರಕವಾಗಿರಬೇಕು ಎಂದು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರು ಶ್ರೀಯುತ ಅಚ್ಚುತ ನಾಯಕ್‌ರವರು ತಿಳಿಸಿದರು. ಶೈಕ್ಷಣಿಕ ಸಂವಾದದ ಬಳಿಕ ಪ್ರಸಕ್ತ ಪ್ರಸಕ್ತ ಸಾಲಿನ ಶಿಕ್ಷಕ -ರಕ್ಷಕ ಸಂಘಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಸಹಶಿಕ್ಷಕರಾದ ಚಂದ್ರಶೇಖರ್ ವಾರ್ಷಿಕ ಯೋಜನೆಯನ್ನು ವಾಚಿಸಿದರು. ಶ್ರೀಮತಿ ರೇಷ್ಮಾ ಬಿ ಸ್ವಾಗತಿಸಿ, ಕು.ಧನ್ಯಶ್ರೀ ವಂದಿಸಿದರು. ಶ್ರೀಮತಿ ಗೀತಾ ಕಾರ್ಯಕ್ರಮವನ್ನು ನಿರೂಪಿಸಿದರು.

Highslide for Wordpress Plugin