ಯಕ್ಷಗಾನ ಸ್ಪರ್ಧೆ ಸಮಾರೋಪ ಸಮಾರಂಭ

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಇಲ್ಲಿ ನಡೆದ ಜಿಲ್ಲಾ ಮಟ್ಟದ ಯಕ್ಷಗಾನ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬಡವರ ಬಂಧು ಶೈಕ್ಷಣಿಕ ಕಾಳಜಿಯುಳ್ಳ ಶ್ರೀಯುತ ಅಶೋಕ್‌ ರೈ ಕೋಡಿಂಬಾಡಿಯವರು ಉಪಸ್ಥಿತರಿದ್ದು ಯಕ್ಷಗಾನವು ಕರಾವಳಿ ಭಾಗದ ಶ್ರೇಷ್ಠ ಕಲೆಯಾಗಿದೆ ಅದನ್ನು ಉಳಿಸುವಲ್ಲಿ ಶಿಕ್ಷಣ ಸಂಸ್ಥೆಗಳು ಈ ರೀತಿ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದರು, ಅಲ್ಲದೇ ತಮ್ಮ ಬಾಲ್ಯದ ನೆನಪುಗಳ ಪುಟವನ್ನು ತೆರೆದಿಟ್ಟರು.

IMG_20170909_175055

IMG_20170909_180722

IMG_20170909_181052

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಣಿಪುರಯಕ್ಷಗಾನ ಪತ್ರಿಕೆಯ ಸಂಪಾದಕರಾದ ಶ್ರೀನಾರಾಯಣ ಚಂಬಲ್ತಿಮಾರ್ ಮಾತನಾಡಿ’ ಮಕ್ಕಳಲ್ಲಿ ಎಳವೆಯಲ್ಲಿಯೇ ಕಲಾಭಿರುಚಿಯನ್ನು ಮೂಡಿಸುವುದರ ಮೂಲಕ ಭವಿಷ್ಯತ್ತಿನ ಓರ್ವ ಉತ್ತಮ ಕಲಾವಿದನನ್ನು ಸಮಾಜಕ್ಕೆ ನೀಡುವ ಕೆಲಸ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಮಾಡುತ್ತಿರುವುದು ಶ್ಲಾಘನೀಯ, ಯಕ್ಷಚಿಣ್ಣರ ಬಳಗ ಜಿಲ್ಲೆಯ ಒಂದು ಉತ್ತಮ ತಂಡಎಂದು ಹೇಳಿದರು. ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಅಚ್ಯುತ ನಾಯಕ್ , ಸಂಚಾಲಕರಾದ ಶ್ರೀ ವಿನೋದ್‌ಕುಮಾರ್‌ ರೈ ಗುತ್ತು, ಮುಖ್ಯ ಗುರುಗಳಾದ ಶ್ರೀ ಮತಿ ಆಶಾ ಬೆಳ್ಳಾರೆ ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಪದ್ಮಾ ಆಚಾರ್‌ರವರು, ಸ್ವಾಗತವನ್ನು ಮಧುರಕಾನನ ಗಣಪತಿ ಭಟ್ ನೆರವೇರಿಸಿದರು.

Highslide for Wordpress Plugin