ಮಕ್ಕಳೊಂದಿಗೆ ಮಿತ್ರರಂತೆ ಇರಬೇಕು – ಬಿ.ವಿ. ಸೂರ್ಯನಾರಾಯಣ

10ನೇ ತರಗತಿ ಮಕ್ಕಳಿಗೆ ಮತ್ತು ಪೋಷಕರಿಗೆ ಕಾರ್ಯಾಗಾರ

ಸೂಕ್ತ ಕಲಿಕಾ ವಾತಾವರಣದೊಂದಿಗೆ ಮಕ್ಕಳ ಧನಾತ್ಮಕ ಅಂಶಗಳಿಗೆ ಮೆಚ್ಚುಗೆ ವ್ಯಕ್ತಪಡಿಸುವ ಗುಣ ಹೆತ್ತವರಾದ ನಮ್ಮಲ್ಲಿರಬೇಕು. ಪರೀಕ್ಷಾ ಸಂದರ್ಭದಲ್ಲಿ ನಾವು ಅವರೊಂದಿಗೆ ಮಿತ್ರರಂತಿದ್ದು ಸೂಕ್ತ ಮಾರ್ಗದರ್ಶನ ನೀಡಬೇಕು ಎನ್ನುತ್ತಾ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಹತ್ತನೇ ತರಗತಿ ಮಕ್ಕಳ ಪೋಷಕರೊಂದಿಗೆ ಸಂವಾದ ನಡೆಸುತ್ತಾ ಅವರ ಪ್ರಶ್ನೆಗಳಿಗೆ ಸವಣೂರು ಕಾಲೇಜಿನ ಉಪನ್ಯಾಸಕರಾದ ಬಿ.ವಿ ಸೂರ್ಯನಾರಾಯಣ ಇವರು ಸಲಹೆ ನೀಡಿದರು.

IMG_20180114_102426

IMG_20180114_100042

IMG_20180114_102210

IMG_20180114_102238

IMG_20180114_104550

IMG_20180114_122305

ವಿವೇಕಾನಂದ ಪದವಿಪೂರ್ವ ಕಾಲೇಜಿನ ವತಿಯಿಂದ ಶಾಲೆಯ ಹತ್ತನೇ ತರಗತಿ ಮಕ್ಕಳಿಗೆ ’ಪರೀಕ್ಷಾ ತಯಾರಿಯ’ ಕುರಿತು ಹರೀಶ್ ಶಾಸ್ತ್ರೀ ಇವರು ಮಾತನಾಡಿದರು. ಪೋಷಕರೊಂದಿಗೆ ಬಿ.ವಿಸೂರ್ಯನಾರಾಯಣ ಇವರು ಮಾತನಾಡಿದರು. ಕಾರ್ಯಾಗಾರದ ಪ್ರಸ್ತುತತೆಯನ್ನು ಶಾಲಾ ಅಧ್ಯಕ್ಷರಾದ ಅಚ್ಯುತ್ ನಾಯಕ್ ತಿಳಿಸಿದರು. ವಿವೇಕಾನಂದ ಪದವಿ ಪೂರ್ವ ಕಾಲೆಜಿನ ಅಧ್ಯಕ್ಷರಾದ ರವೀಂದ್ರ ಪಿ. ಇವರು ಮಕ್ಕಳಲ್ಲಿರುವ ಸಂಸ್ಕಾರ ಮತ್ತು ಈ ನಿಟ್ಟಿನಲ್ಲಿ ಪೋಷಕರ ಸ್ಪಂದನವನ್ನು ಶ್ಲಾಘಿಸಿದರು. ಕಾಲೇಜಿನ ಸಂಚಾಲಕರಾದ ಸಂತೋಷ್, ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜೀವನ್‌ದಾಸ್, ಶಾಲಾ ಸಂಚಾಲಕರಾದ ವಿನೋದ್‌ರೈ ಗುತ್ತು ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

Highslide for Wordpress Plugin