ಬೆಳ್ಳಿಹಬ್ಬದ ಕೊಡುಗೆಯಾಗಲಿರುವ ಶಾಲಾ ನೂತನ ಕಟ್ಟಡಕ್ಕೆ ಶಿಲಾನ್ಯಾಸ

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ 25 ರ ಸಾಮಿಪ್ಯ – ಬೆಳ್ಳಿಹಬ್ಬದ ಕೊಡುಗೆಯಾಗಲಿರುವ ಶಾಲಾ ನೂತನ ಕಟ್ಟಡಕ್ಕೆ ಶಿಲಾನ್ಯಾಸ

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಅಂಗಸಂಸ್ಥೆಯಾದ ವಿವೇಕಾನಂದ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ 2017-18 ನೇ ಇಸವಿಗೆ 25 ವರುಷದ ಸಂಭ್ರಮಾಚರಣೆ ನಡೆಯಲಿದ್ದು, ಬೆಳ್ಳಿಹಬ್ಬದ ಸಂಭ್ರಮದ ಕೊಡುಗೆಯಾಗಿ ಶಾಲೆಯ ನೂತನ ಕಟ್ಟಡ ಲೋಕಾರ್ಪಣೆಗೊಳ್ಳಲಿದೆ. ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ಎ. 25 ರಂದು ನಡೆಯಿತು. ಬೆಳ್ಳಿಹಬ್ಬ ಸಮಿತಿಯ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಶಂಕು ಸ್ಥಾಪನೆ ಮಾಡಿ ಮಾತನಾಡಿ, ’ದೇಶ, ಭಾಷೆ ಮತ್ತು ಸಂಸ್ಕೃತಿಯ ರಕ್ಷಣೆಯ ಧ್ಯೇಯೋದ್ಧೇಶ ಇಟ್ಟುಕೊಂಡು ಕನ್ನಡ ಮಾಧ್ಯಮ ಶಾಲೆಯ ನೂತನ ಕಟ್ಟಡದ ಕಾರ್ಯಯೋಜನೆಗೆ ಇಳಿಯಲಾಗಿದೆ. 2017 ರ ಇಸವಿಯಲ್ಲಿ ಶಾಲೆಯ ಬೆಳ್ಳಿಹಬ್ಬ ಸಮಾರಂಭ ನಡೆಯಲಿದ್ದು, ಆ ವೇಳೆಗೆ ಕಟ್ಟಡದ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೊಳ್ಳಲಿದೆ’ ಎಂದರು.

v-k-shilanyasa

school-image-1

ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಸ್.ಆರ್. ರಂಗಮೂರ್ತಿ, ಕಾರ್ಯದರ್ಶಿ ಶಿವಪ್ರಸಾದ್ ಇ., ಹಿರಿಯ ನ್ಯಾಯವಾದಿ ಸುಬ್ರಹ್ಮಣ್ಯ ಕೊಳತ್ತಾಯ, ವಿದ್ಯಾವರ್ಧಕ ಸಂಘದ ನಿರ್ದೇಶಕರಾದ ಜಿ.ಎಲ್. ಬಲರಾಮ ಆಚಾರ್ಯ, ಎ.ವಿ. ನಾರಾಯಣ, ಶ್ರೀನಿವಾಸ ಪೈ, ಗುಣಪಾಲ್ ಜೈನ್, ಮಣಿಲ ಮಹಾದೇವ ಶಾಸ್ತ್ರಿ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸಂಚಾಲಕ ರವೀಂದ್ರ ಪಿ., ಅಧ್ಯಕ್ಷ ಶ್ರೀಕೃಷ್ಣ ಭಟ್ ಕೊಂಕೋಡಿ, ನಗರಸಭಾ ನಿಕಟಪೂರ್ವ ಅಧ್ಯಕ್ಷ ಜೀವಂಧರ್ ಜೈನ್, ನಗರಸಭಾ ಸದಸ್ಯ ವಿನಯ ಭಂಡಾರಿ, ತಾ.ಪಂ. ಸದಸ್ಯ ಶಿವರಂಜನ್, ಬೆಳ್ಳಿಹಬ್ಬ ಸಮಿತಿಯ ಕಾರ್ಯದರ್ಶಿ ಹರಿಣಿ ಪುತ್ತೂರಾಯ, ಖಜಾಂಜಿ ಅಚ್ಚುತ ಪ್ರಭು, ಡಾ. ಹರಿಕೃಷ್ಣ ಪಾಣಾಜೆ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಗುರು ಸತೀಶ್ ರೈ, ಕನ್ನಡ ಮಾಧ್ಯಮ ಶಾಲೆಯ ಮುಖ್ಯಗುರು ಆಶಾ ಬೆಳ್ಳಾರೆ, ನೂತನ ಕಟ್ಟಡದ ಇಂಜಿನಿಯರ್ ರವಿಶಂಕರ ಆಚಳ್ಳಿ, ಕಾಮಗಾರಿ ಗುತ್ತಿಗೆದಾರ ಶ್ರೀ ದುರ್ಗಾ ಕನ್‌ಸ್ಟ್ರಕ್ಷನ್‌ನ ಎಸ್. ಗೋಪಾಲ್ ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘದ ಸದಸ್ಯರು ಮತ್ತು ವಿದ್ಯಾಸಂಸ್ಥೆಯ ಎಲ್ಲಾ ಶಿಕ್ಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬೆಳ್ಳಿಹಬ್ಬದ ಪ್ರಥಮ ಯೋಜನೆ
ಶಾಲಾ ನೂತನ ಕಟ್ಟಡ
ಅಂತಸ್ತು: 3
ವಿಸ್ತೀರ್ಣ : 50,000 ಚದರ ಅಡಿ
ವೆಚ್ಚ ಸುಮಾರು ರೂ. 6. ಕೋಟಿ

ಏನೆಲ್ಲಾ ಇವೆ?
2 ಸಭಾಂಗಣಗಳು, ಗ್ರಂಥಾಲಯ, ದೃಶ್ಯ ಶ್ರವ್ಯ ಕೊಠಡಿ, ಸ್ಮಾರ್ಟ್ ಕ್ಲಾಸ್, ವಿಜ್ಞಾನ ಪ್ರಯೋಗಾಲಯ, ಕಂಪ್ಯೂಟರ್ ಪ್ರಯೋಗಾಲಯ

ನೈಜ, ಮೌಲ್ಯಯುತ ಶಿಕ್ಷಣದ ಪ್ರತೀಕವಾಗಿರುವ ಸಂಸ್ಥೆಯ ನೂತನ ಕಟ್ಟಡ ನಿರ್ಮಾಣವಾಗುವುದಕ್ಕೆ ಪೋಷಕರು, ಊರದಾನಿಗಳು, ಕನ್ನಡ ಮಾಧ್ಯಮ ಶಾಲೆಯ ಪ್ರೇರಕರು ಸಹಕಾರ ನೀಡುವಂತೆ ಶಾಲಾ ಮುಖ್ಯಗುರು ಆಶಾ ಬೆಳ್ಳಾರೆ ತಿಳಿಸಿದರು.

Highslide for Wordpress Plugin