ದೇವರ ಸ್ಥಾನದಲ್ಲಿರುವ ಇನ್ನೋರ್ವ ದೇವರೆಂದರೆ ಸೈನಿಕ – ಆದರ್ಶ ಗೋಖಲೆ

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಾರ್ಗಿಲ್ ವಿಜಯೋತ್ಸವ

ಇಂದು ನಾವು ಸುಖಕರ ಜೀವನ ಸಾಗಿಸುತ್ತಿದ್ದರೆ ಅದಕ್ಕೆ ಪ್ರಮುಖ ಕಾರಣ ಹಗಲು -ರಾತ್ರಿ ಎನ್ನದೆ ಕೆಚ್ಚೆದೆಯಿಂದ ದೇಶ ಕಾಯುತ್ತಿರುವ ಸೈನಿಕರಾಗಿದ್ದಾರೆ. ನಮ್ಮ ದಿನನಿತ್ಯದ ಪ್ರಾರ್ಥನೆಯು ಸೈನಿಕರ ಆರೋಗ್ಯ, ಆಯುಷ್ಯಾಭಿವೃದ್ಧಿಗಾಗಿರಬೇಕು. ಸೈನಿಕರನ್ನು ಎಲ್ಲಿ ಕಂಡರೂ ಒಂದು ಗೌರವದ ನಮನ ನಮ್ಮ ಕಡೆಯಿಂದಿರಬೇಕು ಎನ್ನುತ್ತಾ ಕಾರ್ಗಿಲ್‌ ಕದನದಲ್ಲಿ ವಿಜಯ ಸಾಧಿಸಿದ ಸೈನಿಕರ ಯಶೋಗಾಥೆಯನ್ನು ಮುಂದಿಡುತ್ತಾ ದೇಹತ್ಯಾಗ ಮಾಡಿದ ಹುತಾತ್ಮರನ್ನು ಸ್ಮರಿಸಿಕೊಂಡವರು ಆದರ್ಶ ಗೋಖಲೆಯವರು ವಿವೇಕಾನಂದ ಕನ್ನಡ ಶಾಲೆಯಲ್ಲಿ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿದ ಇವರ ಪ್ರೇರಣಾ ಸಂಘಟನೆಯ A ಯಿಂದ Z ವರೆಗಿನ ಸ್ವಾತಂತ್ರ್ಯ ಹೋರಾಟಗಾರರ ಹೆಸರುಗಳನ್ನು ಅವರ ಪರಿಚಯದೊಂದಿಗೆ ಭಾಷಣರೂಪದಲ್ಲಿ ಸಭೆಯ ಮುಂದಿರಿಸಿದವಳು ಶಾಲಾ ಹತ್ತನೇ ತರಗತಿ ವಿದ್ಯಾರ್ಥಿನಿ ಸ್ವಾತಿ ಭಟ್. ಇವಳ ಪ್ರಯತ್ನವನ್ನು ಮೆಚ್ಚಿಕೊಂಡ ಆದರ್ಶ ಗೋಖಲೆಯವರು ಅವರಿಗೆ ಸ್ಮರಣಿಕೆಯ ರೂಪದಲ್ಲಿ ದೊರೆತ ಪುಸ್ತಕವನ್ನು ಸ್ವಾತಿಗೆ ನೀಡಿ ಅಭಿನಂದಿಸಿದರು.

Kargil-Vijayostava-18-(4)

Kargil-Vijayostava-18-(5)

Kargil-Vijayostava-18-(1)

Kargil-Vijayostava-18-(2)

Kargil-Vijayostava-18-(3)

ಸಭಾಧ್ಯಕ್ಷತೆ ವಹಿಸಿದವರು ಪ್ರಗತಿಪರ ಕೃಷಿಕರಾದ ಶ್ರೀಯುತ ಸತೀಶ್ ನಾಯ್ಕ್ ಇವರು ’ಸಿಯಾಚಿನ್’­ನ ಕಠಿಣ ಪರಿಸ್ಥಿತಿಯಲ್ಲೂ ಸಾಹಸ ಮೆರೆದ ಸೈನಿಕರು ನಮಗೆ ಆದರ್ಶ ಪ್ರಾಯರಾಗಿದ್ದಾರೆ ಎಂದರು.

ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಯುತ ಅಚ್ಚುತ ನಾಯಕ್, ಸಂಚಾಲಕರಾದ ವಿನೋದ್‌ರೈಗುತ್ತು, ಶಾಲಾ ಪ್ರಾಥಮಿಕ ವಿಭಾಗದ ಮುಖ್ಯಗುರು ನಳಿನಿ ಮಾತಾಜಿ, ವಿವೇಕಾನಂದ ಪದವಿಪೂರ್ವಕಾಲೇಜಿನಅಧ್ಯಕ್ಷರಾದ ಶ್ರೀ ರವೀಂದ್ರರೈಅವರು ಉಪಸ್ಥಿತರಿದ್ದರು. ಸಹಶಿಕ್ಷಕರಾದ ಚಂದ್ರಶೇಖರಇವರು ಕಾರ್ಯಕ್ರಮವನ್ನು ನಿರೂಪಿಸಿ ಧನ್ಯವಾದವಿತ್ತರು.

Highslide for Wordpress Plugin