ತುಳಸಿ ಭೂಲೋಕದ ಸಂಜೀವಿನಿ – ಜಯರಾಮ ಭಟ್

ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ಭಾರತೀಯ ಸಂಸ್ಕೃತಿ ಸಂಪ್ರದಾಯ ನಶಿಸಿ ಹೋಗದಂತೆ ಜಾಗೃತರಾಗಬೇಕಾದುದು ಇಂದು ಅತ್ಯಗತ್ಯ. ಮನೆ, ವಿದ್ಯಾಮಂದಿರಗಳ ವಾತಾವರಣವು ತುಳಸಿ ವೃಂದಾನವನದಿಂದ ಮಂಗಳಕರವಾಗಿರುತ್ತದೆ. ತುಳಸಿಯು ಔಷಧೀಯ ಮೌಲ್ಯಗಳನ್ನು ಹೊಂದಿದ್ದು ಭೂಲೋಕದ ಅಮೃತ ಸಂಜೀವಿನಿ ಎಂದೆನಿಸಿಕೊಳ್ಳುತ್ತದೆ. ಇದರ ಮೇಲಿನ ಗಾಳಿಯು ಪ್ರಾಣವಾಯುವಿನಿಂದ ಕೂಡಿದೆ ಎಂದು ವೈದಿಕರಾದ ಜಯರಾಮ ಭಟ್‌ರವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಆವರಣದಲ್ಲಿ ತುಳಸಿ ಕಟ್ಟೆಯ ಸ್ಥಾಪನೆಯ ಸಂದರ್ಭದಲ್ಲಿ ಹೇಳಿದರು.

Tulasi Pooje

Tulasi Pooje (1)

Tulasi Pooje (2)

ಕಾರ್ಯಕ್ರಮದುದ್ದಕ್ಕೂ ವಿದ್ಯಾರ್ಥಿಗಳು ಭಗವದ್ಗೀತೆ ಪಠಣ ಮಾಡುತ್ತಿದ್ದರು. ಕಾರ್ಯಕ್ರಮದಲ್ಲಿ ತುಳಸಿ ಕಟ್ಟೆಯನ್ನು ಒದಗಿಸಿಕೊಟ್ಟ ಮಣಿಕಂಠ ಗ್ಯಾಸ್ ಏಜೆನ್ಸಿಯ ಮಾಲಿಕರಾದ ಅರುಣಕುಮಾರ್‌ ರೈ, ಶ್ರೀಮತಿ ಕೆ.ಕಸ್ತೂರಿ ಪ್ರಭು ಹಾಗೂ ಶಾಲಾ ಬೆಳ್ಳಿಹಬ್ಬ ಸಮಿತಿಯ ಅಧ್ಯಕ್ಷರಾದ ಗೋಪಾಲಕೃಷ್ಣ ಹೇರಳೆ, ಇತರ ಪದಾಧಿಕಾರಿಗಳು, ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಅಚ್ಯುತ ನಾಯಕ್, ಸಂಚಾಲಕರಾದ ವಿನೋದ್‌ಕುಮಾರ್‌ರೈ, ಇತರ ಸದಸ್ಯರು, ಶಾಲಾ ಮುಖ್ಯಗುರುಗಳು, ಶಾಲಾ ಶಿಕ್ಷಕ – ಶಿಕ್ಷಕೇತರ ವೃಂದ, ಪೋಷಕರು ಉಪಸ್ಥಿತರಿದ್ದರು.

Highslide for Wordpress Plugin