ಕವಿ ಕಾವ್ಯ ಸಮನ್ವಯ

ಮನುಷ್ಯ ಜನ್ಮವು ಅತ್ಯಂತ ಅಮೂಲ್ಯ. ಹಲವು ಪುಣ್ಯಗಳನ್ನು ತೆತ್ತು ಈ ಜನ್ಮ ಪ್ರಾಪ್ತವಾಗುತ್ತದೆ. ಮಾನವ ತನ್ನ ಜೀವನವನ್ನು ಸತ್ಕಾರ್ಯಗಳಿಗೆ ಮೀಸಲಿಡಬೇಕು. ಅಜ್ಞಾನವನ್ನು ತೊರೆದು ಮೌಢ್ಯಾಅಚರಣೆಗಳ ಬಲೆಗೆ ಸಿಲುಕದೆ ಆತ್ಮಗೌರವವನ್ನು ಕಾಪಾಡಿಕೊಳ್ಳಬೇಕು ಎನ್ನುವ ಸಂದೇಶವನ್ನು ಸಾರುವ ಸಂತ ಶಿಶುನಾಳ ಶರೀಫ ಹಾಗೂ ಗೋಪಾಲಕೃಷ್ಣ ಅಡಿಗರ ಹಾಡುಗಳ ಸಿಂಚನ ಸ್ಫುರಣವಾದುದು ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಸಭಾಂಗಣದಲ್ಲಿ ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕರಾದ ಡಾ| ಶೋಭಿತಾ ಸತೀಶ್ ಇವರು ಸಂತಶಿಶುನಾಳ ಶರೀಫರ ದ್ವಿಜನ್ಮ ಶತಾಬ್ಧಿ ಹಾಗೂ ಕವಿ ಶ್ರೀ ಗೋಪಾಲಕೃಷ್ಣ ಅಡಿಗರ ಜನ್ಮ ಶತಾಬ್ಧಿಯ ಅಂಗವಾಗಿ ಅವರ ಹಾಡುಗಳನ್ನು ಅರ್ಥ ಸಹಿತ ಹಾಡಿದರು.

Kavi kavya (1)

Kavi kavya (2)

ಮೌಲ್ಯಯುತ, ಅರ್ಥಗರ್ಭಿತ ಹಾಡುಗಳನ್ನು ಸುಶ್ರಾವ್ಯ ಕಂಠಸಿರಿಯೊಂದಿಗೆ ಹಾಡಿ, ಅವರ ಮಹತ್ ಸಾಧನೆಗೆ ಈ ಮೂಲಕ ನಮ್ಮ ಚಿಕ್ಕ ಕೊಡುಗೆ ಎನ್ನುವ ಸಂದೇಶದ ಮಾತನ್ನು ಮಕ್ಕಳ ಮುಂದೆ ನುಡಿದರು. ಇವರ ಹಾಡಿಗೆ ತಬಲಾ ವಾದನದಲ್ಲಿ ಶ್ರೀ ಸಾಯಿರಾಂ ರಾವ್, ಶ್ರೀ ವಿಶ್ವನಾಥ ನಾಯಕ್ ಹಾರ್ಮೋನಿಯಂ ನುಡಿಸಿದರು. ತಾಳದಲ್ಲಿ ಶಾಲಾ ವಿದ್ಯಾರ್ಥಿ ಸುಹಾಸ್ ಸಹಕರಿಸಿದರು. ಶಾಲಾ ಮುಖ್ಯಶಿಕ್ಷಕರು, ಗುರುವೃಂದ ವಿದ್ಯಾರ್ಥಿಗಳ ಬಳಗ ಈ ಕಾರ್ಯಕ್ರಮದ ಸವಿಯನ್ನುಂಡರು.

Highslide for Wordpress Plugin