ಉನ್ನತ ವ್ಯಕ್ತಿತ್ವಕ್ಕೆ ಯೋಜನೆ, ಯೋಚನೆ ಅಗತ್ಯ – ಕೃಷ್ಣಪ್ರಸಾದ್

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 10 ನೇ ತರಗತಿ ವಿದ್ಯಾರ್ಥಿಗಳ ದೀಕ್ಷಾಂತ ಕಾರ್ಯಕ್ರಮ

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಮತ್ತು ಮಾತೃಪೂಜನಾ ಕಾರ್ಯಕ್ರಮವು ಶಾಲಾ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಮುಖ್ಯ ಅಭ್ಯಾಗತರಾಗಿ ಆಗಮಿಸಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗದ ಪ್ರಚಾರಕರಾದ ಶ್ರೀ ಕೃಷ್ಣಪ್ರಸಾದ್‌ ಇವರು ಮಾತನಾಡಿ ದೀಪವು ತಾನೊಂದು ಸುತ್ತಲೂ ಬೆಳಕನ್ನು ಚೆಲ್ಲಿ ಸಾರ್ಥಕತೆಯನ್ನು ಕಾಣುವಂತೆ ನಾವೂ ಸ್ವಾರ್ಥರಹಿತವಾಗಿ ಸಮಾಜ ದೇವನ ಕಾರ್ಯಕ್ಕೆ ಮುಂದಾಗಬೇಕು. ಜೀವನದಲ್ಲಿ ಬರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಹೆತ್ತತಾಯಿ, ಹೆತ್ತದೇಶ ಹೆಮ್ಮೆಪಡುವಂತಹ ಸಮಾಜ ಕಾರ್ಯಗಳಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕು ಎನ್ನುತ್ತಾ ಆದರ್ಶಗಳನ್ನು ಮೈಗೂಡಿಸಿಕೊಂಡು ಆ ದಿಸೆಯಲ್ಲಿ ಯೋಚನೆ, ಯೋಜನೆಗಳಲ್ಲಿ ಕಾರ್ಯಬದ್ದರಾಗಿ ಶ್ರೇಷ್ಠ ಸಾಧಕರಾಗಿ ದೇಶ ಸೇವೆಗೆ ತಮ್ಮನ್ನು ಅರ್ಪಿಸಿಕೊಳ್ಳಬೇಕು ಎಂದು ಹೇಳಿದರು.

deeksha program (2)

deeksha program (1)

deeksha program

ಮಾತೃಪೂಜನಾ ಕಾರ್ಯಕ್ರಮದಲ್ಲಿ ಇನ್ನೋರ್ವ ಅತಿಥಿಯಾದ ಶ್ರೀಮತಿ ಶೋಭಾ ಕೊಳತ್ತಾಯರವರು ಭಾರತಮಾತೆಗೆ ಪುಷ್ಫಾರ್ಚನೆ ಮಾಡಿ ಬೆಳಗಿದ ಹಣತೆಯನ್ನು ಮಕ್ಕಳಿಗೆ ನೀಡಿದರು. ಹೆತ್ತವರು ಹಣತೆಯಿಂದ ಮಕ್ಕಳಿಗೆ ಆರತಿ ಬೆಳಗಿ ಆಶೀರ್ವಾದಿಸಿದರು.

ಶಾಲಾ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಶಿಕ್ಷಕಿ ಗೀತಾ ಮಾತಾಜಿ ಪ್ರಸ್ತಾವನೆಗೈದು ಸ್ವಾಗತಿಸಿದರು. ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಅಚ್ಯುತ್ ನಾಯಕ್, ಸಂಚಾಲಕರಾದ ವಿನೋದ್‌ ರೈ ಬಿ.ಜಿ ಉಪಸ್ಥಿತರಿದ್ದರು. ಶ್ರೀಮತಿ ರೇಶ್ಮಾ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು.

Highslide for Wordpress Plugin