ಸ್ವಚ್ಛ ಸುಂದರ ಪರಿಸರದಿಂದ ಸ್ವಾಸ್ಥ್ಯ ಸಮಾಜದ ನಿರ್ಮಾಣ

’ಪ್ಲಾಸ್ಟಿಕ್ ಬೇಡ ಎನ್ನೋಣ’ ಎಂಬ ಈ ವರ್ಷದ ವಿಶ್ವ ಪರಿಸರ ದಿನದ ಘೋಷವಾಕ್ಯದಂತೆ ಪ್ಲಾಸ್ಟಿಕ್ ಬಳಕೆಯನ್ನು ಮಿತಗೊಳಿಸಿ, ಪುನರ್ ಬಳಕೆ ಮಾಡುವತ್ತ ಗಮನಹರಿಸಬೇಕು ಸ್ವಚ್ಛ ಸುಂದರ ಪರಿಸರದ ನಿರ್ಮಾಣ ಕಾರ್ಯದಲ್ಲಿ ಎಲ್ಲರೂ ಧೃಢ ಮನಸ್ಸಿನಿಂದ ಕೈಜೋಡಿಸಿ ಸ್ವಾಸ್ಥ್ಯ ಸಮಾಜ ನಮ್ಮದಾಗಿಸೋಣ. ಇದಕ್ಕಾಗಿ ಕಸ ವಿಂಗಡಣೆ ಮಾಡುವಾಗಲೇ ಸರಿಯಾದ ಕ್ರಮ ಅನುಸರಿಸಿದಾಗ ಈ ಕಾರ್ಯ ಸರಳ ಸಾಧ್ಯವಾಗುತ್ತದೆ ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯಂದು ಶಾಲಾ ಹಿರಿಯ ಶಿಕ್ಷಕಿ ಶ್ರೀಮತಿ ಪೂರ್ಣಿಮಾ ಮಾತಾಜಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

vkms-vanamahotsava (4)

vkms-vanamahotsava (1)

vkms-vanamahotsava (2)

vkms-vanamahotsava (3)

ವಿಶ್ವ ಪರಿಸರ ದಿನದ ಅಂಗವಾಗಿ ವಿದ್ಯಾರ್ಥಿಗಳಿಂದಲೇ ಹಸಿ ಕಸ, ಒಣ ಕಸ, ವಿಷಕಾರಿ ಕಸದ ವಿಂಗಡಣೆಯ ಪ್ರಾತ್ಯಕ್ಷಿಕೆ ನಡೆಸಿ ಮಾಹಿತಿ ನೀಡಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪರಿಸರ ಉಳಿಸುವ ಬಗ್ಗೆ ಪ್ರಮಾಣ ವಚನ ಬೋಧಿಸಿ, ಚುನಾಯಿಯತರಾದ ಶಾಲಾ ವಿದ್ಯಾರ್ಥಿ ನಾಯಕರಿಂದ ಗಿಡ ನೆಡುವ ಕಾರ್ಯಕ್ರಮ ನಡೆಸಲಾಯಿತು.

ಮುಖ್ಯಗುರುಗಳ ಉಪಸ್ಥಿತಿಯಲ್ಲಿ ವಿದ್ಯಾರ್ಥಿಗಳು ಪರಿಸರ ಗೀತೆಯನ್ನು ಹಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Highslide for Wordpress Plugin