ಸೋಲಿಗೆ ಕುಗ್ಗದ ಗೆಲುವಿಗೆ ಹಿಗ್ಗದ ಸ್ಪರ್ಧಾ ಮನೋಭಾವವಿರಬೇಕು- ಐತ್ತಪ್ಪ ನಾಯ್ಕ

ಸ್ಪರ್ಧೆಗಳನ್ನು ಸಮಾನ ಮನಸ್ಸಿನಿಂದ ಸ್ವೀಕರಿಸಿ, ಸೇಲು – ಗೆಲುವುಗಳ ಅಂಜಿಕೆ ಇಲ್ಲದೆ ಆತ್ಮ ವಿಶ್ವಾಸದಿಂದ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಇಲ್ಲಿ ಬೆಳ್ಳಿಹಬ್ಬದ ಪ್ರಯುಕ್ತ ನಡೆದ ತಾಲೂಕು ಮಟ್ಟದ ಸ್ಪರ್ಧಾ ಕಾರ್ಯಕ್ರಮದಲ್ಲಿ ಉದ್ಫಾಟಕರಾಗಿ ಉಪಸ್ಥಿತರಿದ್ದ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷರಾದ ಶ್ರೀಯುತ ಐತ್ತಪ್ಪ ನಾಯ್ಕರವರು ಹೇಳಿದರು. ಕಾರ್ಯಕ್ರಮದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಕೋಶಾಧಿಕಾರಿಯಾದ ಶ್ರೀಯುತ ವಸಂತ ಸುವರ್ಣರವರು ಅಧ್ಯಕ್ಷ ಸ್ಥಾನವನ್ನು ವಹಿಸಿ ಶುಭ ಹಾರೈಸಿದರು.

IMG20170811095442

IMG20170811095318

ಮುಖ್ಯ ಅತಿಥಿಯಾಗಿ ಜ್ಞಾನಗಂಗಾ ಪುಸ್ತಕ ಮಳಿಗೆಯ ಮಾಲಕರಾದ ಶ್ರೀಯುತ ಪ್ರಕಾಶ್ ಕೊಡಂಕೇರಿ ಉಪಸ್ಥಿತರಿದ್ದು ಶುಭ ನುಡಿಗಳನ್ನಾಡಿದರು.

ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿ ಸಂಚಾಲಕರಾದ ಶ್ರೀಯುತ ವಿನೋದ್ ಕುಮಾರ್ ರೈ, ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಸತ್ಯಪ್ರಸಾದ್ ಹಾಗೂ ಶಾಲಾ ಪ್ರೌಢಶಾಲಾ ಮುಖ್ಯಗುರುಗಳಾದ ಆಶಾ ಬೆಳ್ಳಾರೆ ಉಪಸ್ಥಿತರಿದ್ದರು.

ವಿವಿಧ ಸ್ಪರ್ಧೆಗಳಲ್ಲಿ 282 ವಿದ್ಯಾರ್ಥಿಗಳು ಭಾಗವಸಿದ್ದರು. ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿ ವೃಂದ ಪ್ರಾರ್ಥಿಸಿ, ಸಹ ಶಿಕ್ಷಕಿ ಉಮಾಮೋಹನ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ಶ್ರೀಮತಿ ಗೀತಾ ಮಾತಾಜಿ ವಂದಿಸಿ, ಶ್ರೀಮತಿ ಭವ್ಯಾ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು. ಅನಂತರ ಭಾಷಣ, ಪ್ರಬಂಧ, ಚಿತ್ರಕಲೆ, ರಸಪ್ರಶ್ನೆ, ಚಿತ್ರ – ಕವನ ರಚನೆ ಮುಂತಾದ ವಿವಿಧ ಸ್ಪರ್ಧೆಗಳು ಜರುಗಿದವು.

Highslide for Wordpress Plugin