ಶೈಕ್ಷಣಿಕ ಸಂಪನ್ಮೂಲ ಕಾರ್ಯಾಗಾರಗಳು ಶಿಕ್ಷಕನಿಗೆ ಆತ್ಮಾವಲೋಕನ ಮಾಡಿಕೊಳ್ಳಲು ಸಹಕಾರಿ- ಶ್ರೀ ಸತೀಶ ಭಟ್, ಬಿಳಿನೆಲೆ

ಶೈಕ್ಷಣಿಕ ಸಂಪನ್ಮೂಲ ಕಾರ್ಯಾಗಾರಗಳು ಪ್ರತಿಯೊಬ್ಬ ಶಿಕ್ಷಕನಿಗೂ ಹೆಚ್ಚಿನ ಕಲಿಕೆಗೆ ಹಾಗೂ ಆತ್ಮಾವಲೋಕನವನ್ನು ಮಾಡಿಕೊಳ್ಳಲು ಸಹಕಾರಿ ಎಂದು ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಗುರುಗಳಾದ ಸತೀಶ್ ಭಟ್ ಬಿಳಿನೆಲೆ ಇವರು ಹೇಳಿದರು. ಇವರು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಹಾಗೂ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ವಿವೇಕನಗರ, ತೆಂಕಿಲ ಇದರ ಸಹಯೋಗದಲ್ಲಿ ಶಿಕ್ಷಕರಿಗಾಗಿ ಆಯೋಜಿಸಿದ್ದ ಒಂದು ದಿನದ ಸಂಕುಲ ಮಟ್ಟದ ಶೈಕ್ಷಣಿಕ ಸಂಪನ್ಮೂಲ ಕಾರ್ಯಾಗಾರವನ್ನು ಉದ್ಫಾಟಿಸಿ ಮಾತನಾಡಿದರು.

vkms-workshop (1)

vkms-workshop

vkms-workshop (2)

vkms-workshop (3)

vkms-workshop (4)

vkms-workshop (5)

vkms-workshop (6)

vkms-workshop (7)

ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಅಚ್ಯುತ ನಾಯಕ್ ಹೆಚ್‌ ಇವರು ಅಧ್ಯಕ್ಷ ಸ್ಥಾನವನ್ನು ವಹಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಖ್ಯಾತ ಅಂಕಣಕಾರರಾದ ಶ್ರೀ ರೋಹಿತ್‌ ಚಕ್ರತೀರ್ಥ ಹಾಗೂ ಶ್ರೀರಾಮ ಕಲ್ಲಡ್ಕದ ಮುಖ್ಯಗುರುಗಳಾದ ಶ್ರೀಯುತ ರಮೇಶ್, ಶ್ರೀದೇವಿ ವಿದ್ಯಾಕೇಂದ್ರ ದೇವಿನಗರ ಪುಣಚದ ಮುಖ್ಯಗುರುಗಳಾದ ಶ್ರೀ ರಾಮಚಂದ್ರ ಭಟ್, ವಿವೇಕಾನಂದ ಆಂಗ್ಲಮಾಧ್ಯಮ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಶ್ರೀ ರಾಮನಾಯ್ಕರವರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಅನಂತರ ಪ್ರಥಮ ಅವಧಿಯಲ್ಲಿ ರೋಹಿತ್‌ ಚಕ್ರತೀರ್ಥ ಅವರು ’ಶಿಕ್ಷಣದ ನೈಜ ಉದ್ದೇಶದ ಬಗ್ಗೆ ಸಂವಾದ ನಡೆಸಿದರು. ಎರಡನೇ ಅವಧಿಯಲ್ಲಿ ಸುಭಾಷ್ ಪಟ್ಟಾಜೆ ಇವರು ಪರಿಣಾಮಕಾರಿಯಾಗಿ ಭಾಷಾ ವಿಷಯ ಬೋಧನೆ ಮತ್ತು ಪರಿಣಾಮಕಾರಿಯಾಗಿ ಗಣಿತ ಬೋಧನೆ ಎಂಬ ವಿಷಯದಲ್ಲಿ ಹೀಗೆ ಮೂರು ಭಿನ್ನ ಅವಧಿಗಳನ್ನು ವಿವಿಧ ವಿಚಾರಗಳನ್ನು ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಕ್ಲಸ್ಟರ್ ಸಂಯೋಜಕರಾದ ಶ್ರೀ ವಿನೋದ್‌ಕುಮಾರ್ ಶೆಟ್ಟಿಯವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಶಾಲಾ ಮಾತಾಜಿಯವರು ಪ್ರಾರ್ಥಿಸಿ, ಶಿಕ್ಷಕರಾದ ಶ್ರೀ ಚಂದ್ರಶೇಖರ ಧನ್ಯವಾದ ಸಮರ್ಪಿಸಿ, ಶ್ರೀಮತಿ ಭವ್ಯಾ ಕಾರ್ಯಕ್ರಮ ನಿರೂಪಿಸಿದರು.

Highslide for Wordpress Plugin