ಶಿಕ್ಷಕನಲ್ಲಿ ಯೋಚನೆ, ಮಾತು, ಕೃತಿ ಒಂದೇ ಆಗಿರಬೇಕು – ಡಾ. ಪ್ರಭಾಕರ್ ಭಟ್‌ ಕಲ್ಲಡ್ಕ

ಜಿಲ್ಲಾ ಶೈಕ್ಷಣಿಕ ಸಹಮಿಲನ

ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಹಾಗೂ ವಿದ್ಯಾಭಾರತಿ ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲೆ ಇದರ ಸಹಯೋಗದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಸಭಾಂಗಣದಲ್ಲಿ ಶಿಕ್ಷಕರ ಶೈಕ್ಷಣಿಕ ಸಹಮಿಲನ ನಡೆಯಿತು. ಸುಮಾರು 600 ಶಿಕ್ಷಕರು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರೂ, ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯರೂ ಆದ ಡಾ| ಕಲ್ಲಡ್ಕ ಪ್ರಭಾಕರ ಭಟ್‌ ಇವರು ಉದ್ಫಾಟನಾ ಮಾತುಗಳನ್ನಾಡಿ, ‘ಮಕ್ಕಳ ಮನಸ್ಸನ್ನು ಅರಿತು ಅವರ ಧನಾತ್ಮಕ ಬದಲಾವಣೆಯನ್ನು ಗುರುತಿಸುವಲ್ಲಿ ಶಿಕ್ಷಕರ ಪಾತ್ರ ಅತೀ ಮುಖ್ಯವಾಗಿದೆ. ಪ್ರಾಮಾಣಿಕತೆ, ನಿಷ್ಠೆ, ಚಿಂತನೆಯ ಮೂಲಕ ಜೀವನ ಧನ್ಯತೆ, ಸಾರ್ಥಕತೆಗಾಗಿ ಶಿಕ್ಷಕರು ಕೆಲಸ ಮಾಡಬೇಕು. ಶಿಕ್ಷಕನಲ್ಲಿ ಯೋಚನೆ, ಮಾತು, ಕೃತಿ ಒಂದೇ ಆಗಿರಬೇಕು’ ಎಂದರು.

sahamilana (2)

sahamilana (3)

sahamilana (1)

ಸಹಮಿಲನದಲ್ಲಿ ಗುಂಪುಶಃ ವಿಚಾರಗೋಷ್ಠಿಗಳು ನಡೆದಿದ್ದು ವಿದ್ಯಾಭಾರತಿಯ ಪ್ರಾಂತ ವಿದ್ವತ್ ಪ್ರಮುಖರಾದ ಶ್ರೀ ಮುತಾಲಿಕ್‌ದಾಸ್‌ರವರು ’ವಿವೇಕ ದಿಗ್ವಿಜಯ – 125’ ಎಂಬ ವಿಷಯದ ಬಗ್ಗೆ ಮಾತನಾಡಿದರು. ಹಾಗೂ ಶ್ರೀಯುತ ಗಿರಿಮನೆ ಶ್ಯಾಮರಾವ್‌ ಇವರು ಶಿಕ್ಷಣದಲ್ಲಿ ಸ್ವಪ್ರಜ್ಞೆ- ಪರಪ್ರಜ್ಞೆ, ದೇಶಪ್ರಜ್ಞೆ ಎಂಬ ವಿಷಯದ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಅಚ್ಯುತ್ ನಾಯಕ್, ವಿದ್ಯಾಭಾರತಿ ಜಿಲ್ಲಾಧ್ಯಕ್ಷರಾದ ಶ್ರೀ ಗಂಗಾಧರ್‌ಗೌಡ, ವಿದ್ಯಾಭಾರತಿಯ ಪ್ರಾಂತೀಯ, ಆಧ್ಯಾತ್ಮಿಕ ಹಾಗೂ ನೈತಿಕ ಶಿಕ್ಷಣ ಪ್ರಮುಖರಾದ ಶ್ರೀ ವೆಂಕಟರಮಣ ಮಂಕುಡೆಯವರು, ಜಿಲ್ಲಾ ಕಾರ್ಯದರ್ಶಿ ಲೋಕಯ್ಯ ಡಿ. ಉಪಸ್ಥಿತರಿದ್ದರು. ಶಿಕ್ಷಕಿ ಉಮಾಮೋಹನ್ ಕಾರ್ಯಕ್ರಮ ನಿರೂಪಿಸಿದರು.

Highslide for Wordpress Plugin