ಶಾಲಾ ಶಿಕ್ಷಕ -ರಕ್ಷಕ ಸಂಘಕ್ಕೆ ಆಯ್ಕೆ

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ ಇಲ್ಲಿ 2018-19 ನೇ ಸಾಲಿನ ಶಿಕ್ಷಕ -ರಕ್ಷಕ ಸಂಘದ ಪದಗ್ರಹಣ ಸಮಾರಂಭ ನಡೆಯಿತು. ಪ್ರಸಕ್ತ ವರ್ಷದ ಅಧ್ಯಕ್ಷರಾಗಿ ಶ್ರೀ ಹರಿಕೃಷ್ಣ, ಉಪಾಧ್ಯಕ್ಷರಾಗಿ ಶ್ರೀಮತಿ ಮಂಜುಳಾ, ಕಾರ್ಯದರ್ಶಿಯಾಗಿ ಶ್ರೀ ಶಂಕರ ಭಟ್, ಉಪಕಾರ್ಯದರ್ಶಿಯಾಗಿ ಶ್ರೀ ಸತೀಶ್‌ರವರು ಆಯ್ಕೆಗೊಂಡರು. ಸಮಾರಂಭದಲ್ಲಿ ಅಧ್ಯಕ್ಷರಾಗಿ ಉಪಸ್ಥಿತರಿದ್ದ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಅಚ್ಚುತ ನಾಯಕ್ ಮಾತನಾಡಿ ’ಪೋಷಕರು ಶಾಲೆಯ ಆಸ್ತಿ. ಪೋಷಕರ ಬಲದಿಂದಲೇ ಈ ಸಂಸ್ಥೆ ಇಷ್ಟಕ್ಕೆ ಬೆಳೆಯಲು ಸಾಧ್ಯವಾಯಿತು’ ಎಂದರು. ಸಮಾರಂಭದ ವೇದಿಕೆಯಲ್ಲಿ 2017-18 ನೇ ಸಾಲಿನ ಅಧ್ಯಕ್ಷರಾದ ಶ್ರೀ ಸತ್ಯಪ್ರಸಾದ್, ಆಡಳಿತ ಮಂಡಳಿ ಸದಸ್ಯರಾದ ಶ್ರೀ ವಸಂತ ಸುವರ್ಣ, ಶ್ರೀ ರಮೇಶ್ಚಂದ್ರ ಹಾಗೂ ಮುಖ್ಯಗುರುಗಳಾದ ಶ್ರೀಮತಿ ಆಶಾ ಬೆಳ್ಳಾರೆ ಮತ್ತು ನಳಿನಿ ಮಾತಾಜಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕ ಚಂದ್ರಶೇಖರ ಸುಳ್ಯಪದವು ನೆರವೇರಿಸಿದರು.

rakshak-sangh

Highslide for Wordpress Plugin