ಶಾಂತಿವನ ಟ್ರಸ್ಟ್ ಪುಸ್ತಕಾಧಾರಿತ ಸ್ಪರ್ಧೆ : ಶಾಲೆಗೆ ಹಲವು ಪ್ರಶಸ್ತಿ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್ (ರಿ) ಶ್ರೀ ಕ್ಷೇತ್ರ ಧರ್ಮಸ್ಥಳ, ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆಯವರು ನಡೆಸಿದ ತಾಲೂಕು ಮಟ್ಟದ ’ಜ್ಞಾನ ಗಂಗೆ’ ಎಂಬ ನೈತಿಕ ಮೌಲ್ಯಾಧಾರಿತ ಪುಸ್ತಕದ ಅಧ್ಯಯನದ ಆಧಾರದ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಅಗಮ್ಯ (ಶ್ರೀ ಗಣೇಶ್ ಆಚಾರ್ಯ ಮತ್ತು ಮಂಜುಳಾ ಗಣೇಶ್‌ರವರ ಪುತ್ರಿ) – ಪ್ರಾಥಮಿಕ ವಿಭಾಗದ ಚಿತ್ರಕಲಾ ಸ್ಪರ್ಧೆಯಲ್ಲಿ-ಪ್ರಥಮ ಹಾಗೂ ಉದಯವಾಣಿ ಚಿಣ್ಣರ ಬಣ್ಣ ಸ್ಪರ್ಧೆಯಲ್ಲಿ ದ್ವಿತೀಯ ಹಾಗೂ ಪ್ರೌಢವಿಭಾಗದ ’ಜ್ಞಾನತುಂಗೆ’ ಪುಸ್ತಕಾಧಾರಿತ ಸ್ಪರ್ಧೆಯ ಭಾಷಣದಲ್ಲಿ ಪೃಥಾ ಆರ್ ರೈ (ಶ್ರೀ ರವೀಂದ್ರ ರೈ. ಪಿ ಮತ್ತು ಉಷಾ ರವೀಂದ್ರ ದಂಪತಿಗಳ ಪುತ್ರಿ)- ಪ್ರಥಮ, ಪ್ರಬಂಧ ಸ್ಪರ್ಧೆಯಲ್ಲಿ ಸ್ವಾತಿ ಎಸ್. ಭಟ್ (ಶಿವಶಂಕರ್ ಭಟ್ ಮತ್ತು ಉಷಾ ಎಸ್ ಭಟ್ ದಂಪತಿಗಳ ಪುತ್ರಿ)- ಪ್ರಥಮ ಹಾಗೂ ಚಿತ್ರಕಲಾ ಸ್ಪರ್ಧೆಯಲ್ಲಿ ಗೌತಮ್‌ ಎಸ್. (ಗಣೇಶ್ ಪೂಜಾರಿ ಮತ್ತು ಮಮತಾ ದಂಪತಿಗಳ ಪುತ್ರ) – ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

shanthivana2018

Highslide for Wordpress Plugin