ವಿವೇಕ ಜಯಂತಿ

ದಿವ್ಯಚೇತನವುಳ್ಳ ನರೇಂದ್ರ ಎನ್ನುವ ಬಾಲಕನು ಮುಂದೆ ರಾಮಕೃಷ್ಣ ಪರಮಹಂಸರಂತಹ ಕಾಳಿಕಾ ಮಾತೆಯ ಅನುಗ್ರಹ ಪಡೆದ ಗುರುಗಳ ಮಾರ್ಗದರ್ಶನದಲ್ಲಿ ಸ್ವಾಮಿ ವಿವೇಕಾನಂದರಾಗಿ ಜಗತ್ತಿಗೇ ಜೀವನದ ಆದರ್ಶ ಸತ್ವಗುಣಗಳನ್ನು ಭೋಧಿಸಿದರು ನಾವು ಅವರ ಚಿಂತನೆಗಳನ್ನು ಗೌರವಿಸಿ ಪಾಲಿಸೋಣ ಎಂದು ವಿವೇಕಾನಂದ ಕಾಲೇಜಿನ ಪದವಿ ವಿದ್ಯಾರ್ಥಿ ಕಾರ್ತಿಕ್ ನುಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಕಾಲೇಜಿನ ಇನ್ನೋರ್ವ ವಿದ್ಯಾರ್ಥಿ ಶ್ರೀ ದುರ್ಗಾಪರಮೇಶ್ವರ್ ಮಾತನಾಡುತ್ತಾ ವಿವೇಕಾನಂದರ ಹಾಗೇ ನಾವು ಅಪ್ರತಿಮ ದೇಶಭಕ್ತರಾಗಿ, ಧೈರ್ಯ, ಆತ್ಮವಿಶ್ವಾಸ, ಮಾನವೀಯತೆಯಂತಹ ಉತ್ತಮ ಗುಣಗಳನ್ನು ಮೈಗೂಡಿಸಿಕೊಳ್ಳೋಣ ಎಂದು ನುಡಿದರು. ಇಬ್ಬರೂ ವಿದ್ಯಾರ್ಥಿಗಳು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ವಿವೇಕ ಜಯಂತಿ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ವೇದಿಕೆಯಲ್ಲಿ ಶಾಲೆಯ ಹಿರಿಯ ಶಿಕ್ಷಕರಾದ ಶ್ರೀಮತಿ ದಾಕ್ಷಾಯಿಣಿ. ಶಾಲಾ ವಿಧ್ಯಾರ್ಥಿ ನಾಯಕ ಸ್ವಾತ್ವಿಕ್ ಶರ್ಮ, ಶಾಲಾ ಸಾಂಸ್ಕೃತಿಕ ಮಂತ್ರಿ ಭವಿತ ಉಪಸ್ಥಿತರಿದ್ದರು. ವಿವೇಕ ಜಯಂತಿ ಕಾರ್ಯಕ್ರಮದ ಪ್ರಯುಕ್ತ ಶಾಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಭೋಜನ ವ್ಯವಸ್ಥೆ ಮಾಡಲಾಗಿತ್ತು.

DSCN8090

DSCN8112

Highslide for Wordpress Plugin