ವಿದ್ಯಾಭಾರತಿ – ವಿಜ್ಞಾನ – ವಸ್ತು ಪ್ರದರ್ಶನ ಮಾದರಿ ಸ್ಪರ್ಧೆ : ರಾಷ್ಟ್ರ ಮಟ್ಟಕ್ಕೆ ಆಯ್ಕೆ

ವಿದ್ಯಾಭಾರತಿ ವತಿಯಿಂದ ಸರಸ್ವತಿ ಹೈದರಾಬಾದ್‌ನ ಸೈಯದ್‌ಬಾದ್‌ ಸರಸ್ವತಿ ವಿದ್ಯಾಲಯದಲ್ಲಿ ನಡೆದ ದಕ್ಷಿಣ ಪ್ರಾಂತೀಯ ಮಟ್ಟದ ಜ್ಞಾನ – ವಿಜ್ಞಾನ ಮೇಳದಲ್ಲಿ ಭಾಗವಹಿಸಿದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ರಕ್ಷಿತಾ ಡಿ. (ಡೊಂಬಯ್ಯ ಗೌಡ ಪಂಜಳ ಮತ್ತು ದಾಕ್ಷಾಯಿಣಿ ದಂಪತಿ ಪುತ್ರಿ) ಮತ್ತು ಆಶ್ರಯ್ ಪಿ.ವಿ. (ವಿಶ್ವನಾಥ ಗೌಡ ಪಟ್ಟೆ ಮತ್ತು ರೇವತಿ ದಂಪತಿಯ ಪುತ್ರ) ಇವರು ತಯಾರಿಸಿದ ಶ್ರವಣಾತೀತ ತರಂಗಗಳು ಮತ್ತು ಅದರ ಅನ್ವಯಗಳು ಎಂಬ ವಿಷಯದ ವಿಜ್ಞಾನ ಮಾದರಿ ತಯಾರಿಕೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಬೆಂಗಳೂರಿನಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖ್ಯಗುರು ತಿಳಿಸಿದ್ದಾರೆ.

IMG-20171110-WA0004

Highslide for Wordpress Plugin