ಯೋಗ ಸ್ಪರ್ಧೆ-ರಾಜ್ಯಮಟ್ಟಕ್ಕೆ ಆಯ್ಕೆ 

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ಮೂರು ಸಮಗ್ರ ಪ್ರಶಸ್ತಿ

ವಿದ್ಯಾಭಾರತಿ ಜಿಲ್ಲಾ ಮಟ್ಟದ ಯೋಗ ಸ್ಪರ್ಧೆಯು ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆ ಅಲಂಕಾರು ಇಲ್ಲಿ ನಡೆದಿದ್ದು ಇದರಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಬಾಲವರ್ಗದ ಬಾಲಕಿಯರ ತಂಡ, ಕಿಶೋರ ವರ್ಗದ ಬಾಲಕರ ತಂಡ ಮತ್ತು ಬಾಲಕಿಯರ ತಂಡ ಸಮಗ್ರ ಪ್ರಶಸ್ತಿ ಪಡೆದಿದ್ದು, ಹುಬ್ಬಳ್ಳಿಯಲ್ಲಿ ಜರಗುವ ರಾಜ್ಯಮಟ್ಟದ ಯೋಗ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ಬಾಲವರ್ಗದ ಬಾಲಕಿಯರ ವಿಭಾಗದಲ್ಲಿ ಹೇಮಶ್ರೀ (ಪ್ರಥಮಾ), ಸುಚಿತ (ತೃತೀಯ) ಸ್ಥಾನವನ್ನು ಪಡೆದಿರುತ್ತಾರೆ. ಬಾಲವರ್ಗದ ಬಾಲಕರ ವಿಭಾಗದಲ್ಲಿ ನಿಖಿತ್ (ಪ್ರಥಮ), ಪುನೀತ್‌ರಾಜ್ (ಪಂಚಮ) ಸ್ಥಾನವನ್ನು ಗಳಿಸಿರುತ್ತಾರೆ. ಕಿಶೋರವರ್ಗದ ಬಾಲಕಿಯರ ತಂಡದಲ್ಲಿ ವೈಶಾಲಿ (ಪ್ರಥಮ), ಪ್ರತಿಕ್ಷಾ ಆರ್‌. ರೈ(ದ್ವಿತೀಯ), ಹಾಗೂ ನವಮಿ (ತೃತೀಯ) ಸ್ಥಾನವನ್ನು ಪಡೆದಿರುತ್ತಾರೆ. ಕಿಶೋರವರ್ಗ ಬಾಲಕರ ತಂಡದಲ್ಲಿ ಭರತ್ (ದ್ವಿತೀಯ) ಹಾಗೂ ರಾಜೇಶ್ (ತೃತೀಯ) ಸ್ಥಾನವನ್ನು ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾರೆ.

vkms-yoga

Highslide for Wordpress Plugin