ಯಕ್ಷ ಸಂಭ್ರಮ

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಇತ್ತೀಚೆಗೆ ಯಕ್ಷ ಚಿಣ್ಣರ ಬಳಗದ ’ಯಕ್ಷ ಸಂಭ್ರಮ’ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಬಲ್ಲಿರೇನಯ್ಯಾ ಪತ್ರಿಕೆಯ ಸಂಪಾದಕರಾದ ಶ್ರೀ ತಾರಾನಾಥ ವರ್ಕಾಡಿಯವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಕ್ಕಳು ಇತ್ತೀಚೆಗೆ ಯಕ್ಷಗಾನ ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದು ಸಂತೋಷದ ವಿಚಾರ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

yaksha (1)

yaksha

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧೀ ಶಕ್ತಿ ಮಹಿಳಾ ಯಕ್ಷಗಾನ ತಂಡದ ನಿರ್ದೇಶಕಿ ಶ್ರೀಮತಿ ಪದ್ಮ ಆಚಾರ್‌ರವರು ವಹಿಸಿದ್ದರು. ಈ ಸಂದರ್ಭದಲ್ಲಿ ಹಿರಿಯ ಕಲಾವಿದ ಶ್ರೀ ಉಜಿರೆ ನಾರಾಯಣ ಹಾಸ್ಯಗಾರ್ ರವರನ್ನು ಸನ್ಮಾನಿಸಲಾಯಿತು. ಅಲ್ಲದೆ ಯಕ್ಷ ಚಿಣ್ಣರ ತಂಡದ ನಿರ್ದೇಶಕರಾದ ಶ್ರೀ ಬಾಲಕೃಷ್ಣ ಪೂಜಾರಿ ಉಡ್ಡಂಗಲಳ ಇವರನ್ನು ಶಿಷ್ಯಂದಿರ ಪರವಾಗಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಅಧ್ಯಕ್ಷರಾದ ಶ್ರೀ ಅಚ್ಯುತ ನಾಯಕ್, ಸಂಚಾಲಕರಾದ ಶ್ರೀ ಬಿ.ಜಿ ವಿನೋದ್ ರೈ, ಗುತ್ತು, ಮುಖ್ಯಗುರುಗಳಾದ ಶ್ರೀಮತಿ ಆಶಾ ಬೆಳ್ಳಾರೆ, ಯಕ್ಷಚಿಣ್ಣರ ಬಳಗದ ಅಧ್ಯಕ್ಷರಾದ ಶ್ರೀ ಪದ್ಮನಾಭ ರವರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಯಕ್ಷ ಚಿಣ್ಣರ ಬಳಗದಿಂದ ’ಸುದರ್ಶನ ಗರ್ವ ಭಂಗ’-’ಸಹದೇವ ದಿಗ್ವಿಜಯ’ ಎಂಬ ಪೌರಾಣಿಕ ಯಕ್ಷಗಾನ ಪ್ರದರ್ಶನಗೊಂಡಿತು.

Highslide for Wordpress Plugin