ಮನಸ್ಸು ಸದಾ ಚಟುವಟಿಕೆಗಳಿಂದಿರಲು ರಜಾ ಶಿಬಿರಗಳು ಪೂರಕ- ಶ್ರೀ ಚಂದ್ರಶೇಖರ್ ಶೇಟ್

ವಿಶ್ರಾಂತ ಮನಸ್ಸುಗಳಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆ ಅಸಾಧ್ಯ. ಮನಸ್ಸುಗಳನ್ನು ಖಾಲಿ ಬಿಡದೆ ಸದಾ ಚಟುವಟಿಕೆಗಳಿಂದಿರಲು ಪ್ರೇರಣೆ ನೀಡಿದರೆ ಮಕ್ಕಳ ಅಸಾಧಾರಣ ಪ್ರತಿಭೆಗಳು ಅನಾವರಣಗೊಳ್ಳುವುದು ಅದಕ್ಕಾಗಿ ರಜಾಶಿಬಿರಗಳು ಪೂರಕಎಂದು ಶ್ರೀ ವಿಷ್ಣುಮೂರ್ತಿಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಪಟ್ಟೂರುಇಲ್ಲಿನ ಮುಖ್ಯ ಗುರುಗಳಾದ ಶ್ರೀ ಚಂದ್ರಶೇಖರ್ ಶೇಟ್‌ಇವರು ವಿವೇಕಾನಂದಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ಅಭಿವ್ಯಕ್ತಿ ಮಂಟಪ ರಜಾ- ಮಜಾ ಶಿಬಿರವನ್ನು ಉದ್ಫಾಟಿಸಿ ಮಾತನಾಡಿದರು. ’ಮಕ್ಕಳಿಗೆ ಪುಸ್ತಕವೇ ಮೊದಲ ಮಿತ್ರನಾಗಿರಬೇಕುಗುರು- ಹಿರಿಯರನ್ನು ಗೌರವಿಸಬೇಕು. ಸಮಾಜದಲ್ಲಿಆದರ್ಶ ವ್ಯಕ್ತಿಗಳಾಗಿ ಬದುಕಬೇಕು’ ಎಂದು ವಿದ್ಯಾರ್ಥಿಗಳಿಗೆ ಸ್ಫೂರ್ತಿಯ ನುಡಿಗಳನ್ನಾಡಿದರು.

DSCN8629

DSCN8618

DSCN8620

ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯೂ, ಶಿಶು ಸಾಹಿತಿಯೂ ಆಗಿರುವಉಲ್ಲಾಸಣ್ಣಇವರು ಮಾತನಾಡಿ.ಸದ್ಗುಣ, ಸಂಸ್ಕಾರಗಳನ್ನು ನಾವೂ ಕಲಿಯಬೇಕು ಇತರರಿಗೂ ತಿಳಿಸಬೇಕು. ಆದರ್ಶವಾಗಿ ಬಾಳಬೇಕು ಎಂದರು. ಶಾಲಾ ಅಧ್ಯಕ್ಷರಾದ ಶ್ರೀಯುತ ಅಚ್ಯುತ್ ನಾಯ್ಕ್ ಅಧ್ಯಕ್ಷೀಯ ನೆಲೆಯಲ್ಲಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ರಮೇಶ್ಚಂದ್ರ, ಶೈಕ್ಷಣಿಕ ಪರಿವೀಕ್ಷಕರಾದ ಶ್ರೀ ರಘುರಾಜ್‌ಉಬರಡ್ಕ, ಪ್ರಾಥಮಿಕ ಶಾಲಾ ಮುಖ್ಯ ಗುರುಗಳಾದ ಶ್ರೀಮತಿ ನಳಿನಿ ವಾಗ್ಲೆ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಪ್ರಾರ್ಥಿಸಿ, ಶ್ರೀಮತಿ ಸ್ವಾತಿ ಮಾತಾಜಿ ಸ್ವಾಗತಿಸಿ, ಶ್ರೀಮತಿ ಕವಿತಾ ಮಾತಾಜಿ ವಂದಿಸಿದರು. ಶ್ರೀಮತಿ ಭವ್ಯಾ ಕಾರ್ಯಕ್ರಮ ನಿರೂಪಿಸಿದರು.

ಅಭಿವ್ಯಕ್ತಿ ಮಂಟಪದಲ್ಲಿ……….. ->ಕಿರು ಪ್ರಹಸನ ->ಚಿತ್ರ-ಚಿತ್ತಾರ ->ಕಡ್ಡಿಚಿತ್ರ ->ರಂಗಗೀತೆ -> ಪರಿಸರ ಪ್ರಾತ್ಯಕ್ಷಿಕೆ -> ಅಭಿನಯ ಗೀತೆ ->ಕಥಾ ಮಂಟಪ -> ಪೇಪರ್‌ಕ್ರಾಪ್ಟ್ -> ಹೊರಸಂಚಾರ -> ಹೂ ಮಾಲೆಕಟ್ಟುವುದು -> ಪ್ರಾದೇಶಿಕ ಆಟಗಳು.

Highslide for Wordpress Plugin