ಮಕ್ಕಳನ್ನು ಸಮಾಜದ ಆಸ್ತಿಯನ್ನಾಗಿ ಮಾಡುವ ಕಾರ್ಯ ಶಿಕ್ಷಕ ಹಾಗೂ ಪೋಷಕರದ್ದಾಗಿದೆ – ಶ್ರೀ ಬಾಲಕೃಷ್ಣ ಪೊರ್ದಾಲ್

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಪ್ರಸಕ್ತ ಸಾಲಿನ 4 ಮತ್ತು 5 ನೇ ತರಗತಿಯ ಪೋಷಕರ ಸಭೆಯು ದಿನಾಂಕ 4-7-2018 ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಲಿಟ್ಲ್ ಫ್ಲವರ್ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀಯುತ ಬಾಲಕೃಷ್ಣ ಪೊರ್ದಾಲ್‌ರು ಮಾತನಾಡಿ ’ಮಕ್ಕಳ ಮನಸ್ಸು, ಸಾಮರ್ಥ್ಯವನ್ನು ಅರಿತು ಮಕ್ಕಳಿಗೆ ಜ್ಞಾನ ನೈಪುಣ್ಯತೆಯನ್ನು ಕಲಿಸುವುದರ ಜೊತೆಗೆ ಬದುಕಿನ ಶಿಕ್ಷಣವನ್ನು ನೀಡಬೇಕಾದ ಅನಿವಾರ್ಯತೆ ಇದೆ. ಮಕ್ಕಳ ಬೆಳವಣಿಗೆಯಲ್ಲಿ ಶಿಕ್ಷಕರ ಜವಾಬ್ದಾರಿ ಮಾತ್ರವಿರದೆ ಹೆತ್ತವರ ಜವಾಬ್ದಾರಿಯು ಇದೆ. ಇದನ್ನು ಅರಿತು ಪರಸ್ಪರ ಸಹಕರಿಸಿದಾಗ ಮಕ್ಕಳನ್ನು ಸಮಾಜದ ಆಸ್ತಿಯನ್ನಾಗಿ ಮಾಡಬಹುದು ಎಂದು ತಿಳಿಸಿದರು.

IMG_20180704_160752

ವೇದಿಕೆಯಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರಾದ ಅಚ್ಯುತ ನಾಯಕ್, ಸದಸ್ಯರಾದ ರಮೇಶ್ಚಂದ್ರ, ಪ್ರೌಢ ವಿಭಾಗದ ಮುಖ್ಯಗುರು ಆಶಾ ಬೆಳ್ಳಾರೆ, ಪ್ರಾಥಮಿಕ ವಿಭಾಗದ ಮುಖ್ಯಗುರು ನಳಿನಿ ವಾಗ್ಲೆ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು. ಶಾಲಾ ವಾರ್ಷಿಕ ಯೋಜನೆಯನ್ನು ಹೆತ್ತವರು ಮತ್ತು ಶಿಕ್ಷಕರ ನಡುವೆ ಸಂವಾದದ ಮೂಲಕ ವ್ಯಕ್ತಪಡಿಸಲಾಯಿತು. ಮಕ್ಕಳ ಪ್ರಾರ್ಥನೆಯೊಂದಿಗೆ ಸಭೆಯು ಪ್ರಾರಂಭವಾಗಿ ಶಿಕ್ಷಕಿ ಶ್ರೀಮತಿ ಸೌಮ್ಯ ಮಾತಾಜಿ ಸ್ವಾಗತಿಸಿ, ಶ್ರೀಮತಿ ಅನುಷಾ ಮಾತಾಜಿ ಶಾಲಾ ಚಟುವಟಿಕೆಗಳ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದರು. ಕು. ವಿದ್ಯಾಶ್ರೀ ಮಾತಾಜಿ ಧನ್ಯವಾದ ಸಮರ್ಪಿಸಿ, ಶ್ರೀ ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.

Highslide for Wordpress Plugin