ತಾಲೂಕು ಮಟ್ಟದ ಮಕ್ಕಳ ಕಲಾಶ್ರೀ ಪ್ರಶಸ್ತಿ ಆಯ್ಕೆ ಶಿಬಿರ : ಶಾಲೆಗೆ ಹಲವು ಪ್ರಶಸ್ತಿ

ಬಾಲಭವನ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬೆಂಗಳೂರು, ತಾಲೂಕು ಬಾಲಭವನ ಸಮಿತಿ ಹಾಗೂ ಶಿಶು ಅಭಿವೃದ್ಧಿ ಇಲಾಖೆ ಪುತ್ತೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಪರ್ಲಡ್ಕ ಶಿವರಾಮ ಕಾರಂತ ಬಾಲವನದಲ್ಲಿ ನಡೆದತಾಲೂಕು ಮಟ್ಟದ ಮಕ್ಕಳ ಕಲಾಶ್ರೀ ಪ್ರಶಸ್ತಿ ಆಯ್ಕೆ ಶಿಬಿರದಲ್ಲಿ ವಿವೇಕಾನಂದಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿ ಪಡೆದಿರುತ್ತಾರೆ.

ಪ್ರಶಸ್ತಿಗೆ ಆಯ್ಕೆಯಾದವರು:
ವಿಜ್ಞಾನದಲ್ಲಿ ಸೃಜನಾತ್ಮಕ ಆವಿಷ್ಕಾರದಲ್ಲಿ ಪ್ರತೀಕ್‌ ಗಣಪತಿ – ಪ್ರಥಮ, ಸೃಜನಾತ್ಮಕ ಪ್ರದರ್ಶನ ಕಲೆ -ಶ್ರೇಯಾ ಎಂ – ಪ್ರಥಮ, ಸೃಜನಾತ್ಮಕ ಬರವಣಿಗೆ – ಸಿಂಚನಾ ಟಿ – ದ್ವಿತೀಯ, ಸೃಜನಾತ್ಮಕ ಕಲೆಯಲ್ಲಿ ಗೌತಮ್‌ಎಸ್ – ಪ್ರಥಮ, ಜನನಿ ಪಿ – ದ್ವಿತೀಯ, ಆದಿತ್ಯನಾರಾಯಣ- ತೃತೀಯ ಸ್ಥಾನ ಪಡೆದಿರುತ್ತಾರೆ.

kalashri

Highslide for Wordpress Plugin